ಬೆಂಗಳೂರು : ಬೆಂಗಳೂರಿನಲ್ಲಿ ಪ್ರಿಯಕರನಿಗಾಗಿ 3 ಮಕ್ಕಳನ್ನು ಬಿಟ್ಟು ತಾಯಿ ಒಬ್ಬಳು ಓಡಿ ಹೋಗಿದ್ದು, ಹೆಂಡತಿಗಾಗಿ ಗಂಡ ಗೋಳಾಟ ನಡೆಸಿದ್ದಾರೆ.
ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಬಸವನಪುರದಲ್ಲಿ ಘಟನೆ ನಡೆದಿದ್ದು, 11 ವರ್ಷದ ಹಿಂದೆ ಮಂಜುನಾಥ್ ಎಂಬುವರ ಜೊತೆಗೆ ಮದುವೆಯಾಗಿದ್ದ ಲೀಲಾವತಿ ಭಾನುವಾರ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ. ತಾಯಿಗಾಗಿ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ.
ಲೀಲಾವತಿ ಪ್ರಿಯಕರನೊಂದಿಗೆ ಓಡಿ ಹೋಗಿದ್ದು, ಪೊಲೀಸರ ಮುಂದೆಯೂ ನನಗೆ ಪ್ರಿಯಕರ ಬೇಕೆಂದು ಪಟ್ಟು ಹಿಡಿದಿದ್ದಾಳೆ. ಇದರಿಂದ ಗಂಟ ಮಂಜುನಾಥ್ ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಗೋಳಾಟ ನಡೆಸಿದ್ದಾರೆ.