ಬೆಂಗಳೂರು: ಪ್ರಥಮ ಬಾರಿಗೆ ರಾಜ್ಯದ ಮುಜರಾಯಿ ಇಲಾಖೆಗೆ ಪ್ರತಿಷ್ಠಿತ ಕಟ್ಟಡ ನಿರ್ಮಾಣಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರ ದೂರ ದೃಷ್ಟಿಯಿಂದ ನಿರ್ಮಾಣವಾಗಲಿದೆ.
ಹೌದು.. ಮುಜರಾಯಿ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಂತಹ ನಂತರ ರಾಮಲಿಂಗಾರೆಡ್ಡಿ ಅವರು ಈ ಇಲಾಖೆಗೆ ಹೊಸ ರೀತಿಯ ಆಯಾಮವನ್ನು ನೀಡುತ್ತಾ ಬಂದಿದ್ದಾರೆ.
ಭಕ್ತರು ಮತ್ತು ಅರ್ಚಕ ಸಿಬ್ಬಂದಿ ಇವರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನ ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ ಈ ಇಲಾಖೆಯಲ್ಲಿ ದುಡಿಯುವ ಮಂದಿಗೆ ಹೆಚ್ಚಿನ ನೆರವನ್ನು ಒದಗಿಸಿ ಕೊಡಿಸಿದ್ದಾರೆ.
ಮುಜರಾಯಿ ಇಲಾಖೆಗೆ ತನ್ನದೇ ಆದಂತಹ ಕಟ್ಟಡ ಇರಲಿಲ್ಲ. ಇಲ್ಲಿಯ ತನಕ ಇದು ಚಾಮರಾಜಪೇಟೆಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿತ್ತು.
ಸಚಿವ ರಾಮಲಿಂಗಾರೆಡ್ಡಿ ಅವರ ಆಸಕ್ತಿಯ ಕಾರಣದಿಂದಾಗಿ ಬೆಂಗಳೂರಿನ ಕೆ ಆರ್ ವೃತ್ತದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಸುಮಾರು ಹತ್ತು ಸಾವಿರ ಚದುರ ಅಡಿ ಜಾಗದಲ್ಲಿ 27 ಕೋಟಿ ರೂಪಾಯಿಗಳ ವೆಚ್ಚದಲ್ಲಿ 5 ಅಂತಸ್ತಿನ ಧಾರ್ಮಿಕ ಸೌಧ ಕಟ್ಟಡವನ್ನು ನಿರ್ಮಾಣ ಮಾಡಲು ಬೇಕಾದಂತಹ ಸಿದ್ಧತೆಗಳನ್ನ ಮಾಡಿಕೊಂಡು ಸಂಪುಟದ ಅನುಮತಿಯನ್ನು ಪಡೆದುಕೊಂಡಿರೋದು ಸಂತಸದ ಸಂಗತಿಯಾಗಿದೆ.
ಆದಷ್ಟು ಬೇಗನೆ ಧಾರ್ಮಿಕ ಸೌದದ ಕಟ್ಟಡ ನಿರ್ಮಾಣವಾಗಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿಯೇ ಅದರ ಉದ್ಘಾಟನೆಯ ಆಗಲಿ ಎಂಬುದು ಎಲ್ಲರ ಆಶಯವಾಗಿದೆ.
ಮುಜರಾಯಿ ಇಲಾಖೆ ತನ್ನದೇ ಆದಂತಹ ಸ್ವಂತ ಕಟ್ಟಡವನ್ನು ಹೊಂದುತ್ತಿರುವುದು ಸಹ ಇಲಾಖೆಯ ಕಾರ್ಯ ಪ್ರಗತಿಗೆ ಮತ್ತಷ್ಟು ಪೂರಕವಾಗಲಿದೆ.
ಧಾರ್ಮಿಕ ಸೌಧ ಕಟ್ಟಡವನ್ನು ನಿರ್ಮಿಸುವ ನಿಟ್ಟಿನಲ್ಲಿ ಆಸಕ್ತಿಯನ್ನ ಹೊಂದಿ ಈ ಬಗ್ಗೆ ವಿಶೇಷವಾದ ಪ್ರಯತ್ನಗಳನ್ನ ನಡೆಸಿದ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಇಲಾಖೆಯ ಸಮಸ್ತ ಅಧಿಕಾರಿಗಳು, ಸಿಬ್ಬಂದಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.