ಬೆಂಗಳೂರು : ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಕೈಗೊಂಡಿದ್ದು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಇಲಾಖಾ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿಶೇಷ ಪ್ರಕರಣಗಳ ವರ್ಗಾವಣೆ ಕೌನ್ಸಿಲಿಂಗ್ ಗೆ ಚಾಲನೆ ನೀಡಿ, ಡಿಜಿಟಲ್ ಸಹಿ ಇರುವ ವರ್ಗಾವಣೆ ಆದೇಶ ಪತ್ರವನ್ನು ನೀಡಿದರು.
ಮೊದಲನೇ ದಿನವಾದ ಇಂದು ವಿಶೇಷ ಪ್ರಕರಣಗಳ 109 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ವರ್ಗಾವಣೆ ಆದೇಶ ಪತ್ರಗಳನ್ನು ನೀಡುವುದರೊಂದಿಗೆ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ(ಪಂ.ರಾಜ್) ಗಳಾದ ಶ್ರೀ ರಂದೀಪ್ ಡಿ., ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಡಾII ಅರುಂಧತಿ ಚಂದ್ರಶೇಖರ್, ಶ್ರೀಮತಿ ವಾಣಿ ಬಿ., ಉಪ ಕಾರ್ಯದರ್ಶಿ (ಆಡಳಿತ), ಶ್ರೀ ಅಮರೇಶ್ ಆರ್. ನಿರ್ದೇಶಕರು -1, ಡಾ.ಎನ್. ನೋಮೇಶ್ ಕುಮಾರ್ ನಿರ್ದೇಶಕರು (ಪಂ.ರಾಜ್) ಹಾಗೂ ಆಯುಕ್ತಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಕೈಗೊಂಡಿದ್ದು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಮಾನ್ಯ ಇಲಾಖಾ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿಶೇಷ ಪ್ರಕರಣಗಳ ವರ್ಗಾವಣೆ(1/3) pic.twitter.com/6rVDH4Hljn
— Panchayat Raj Commissionerate – Karnataka (@CommrPR) September 3, 2025
ಕೌನ್ಸಿಲಿಂಗ್ ಗೆ ಚಾಲನೆ ನೀಡಿ, ಡಿಜಿಟಲ್ ಸಹಿ ಇರುವ ವರ್ಗಾವಣೆ ಆದೇಶ ಪತ್ರವನ್ನು ನೀಡಿದರು.
ಮೊದಲನೇ ದಿನವಾದ ಇಂದು ವಿಶೇಷ ಪ್ರಕರಣಗಳ 109 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ವರ್ಗಾವಣೆ ಆದೇಶ ಪತ್ರಗಳನ್ನು ನೀಡುವುದರೊಂದಿಗೆ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ (2/3) pic.twitter.com/VdYwJlDI87
— Panchayat Raj Commissionerate – Karnataka (@CommrPR) September 3, 2025
(ಪಂ.ರಾಜ್)ಗಳಾದ ರಂದೀಪ್ ಡಿ., ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಡಾII ಅರುಂಧತಿ ಚಂದ್ರಶೇಖರ್, ವಾಣಿ ಬಿ., ಉಪ ಕಾರ್ಯದರ್ಶಿ (ಆಡಳಿತ), ಅಮರೇಶ್ ಆರ್. ನಿರ್ದೇಶಕರು -1, ಎನ್. ನೋಮೇಶ್ ಕುಮಾರ್ ನಿರ್ದೇಶಕರು (ಪಂ.ರಾಜ್) & ಆಯುಕ್ತಾಲಯದ ಅಧಿಕಾರಿಗಳು & ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.(3/3)@PriyankKharge pic.twitter.com/hc9VyapUua
— Panchayat Raj Commissionerate – Karnataka (@CommrPR) September 3, 2025