ಬೆಂಗಳೂರು: ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕ-ಯುವತಿಯರಿಗೆ “ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್, ಟ್ಯಾಲಿ, ಡೆಸ್ಕ್ ಟಾಪ್ ಪಬ್ಲಿಷಿಂಗ್ ಹಾಗೂ ಹಾರ್ಡ್ ವೇರ್ ಮತ್ತು ನೆಟ್ವರ್ಕ್ ಅಡ್ಮಿನಿಸ್ಟ್ರೇಷನ್” ಕುರಿತಾದ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಶಿಕ್ಷಣವನ್ನು 2025ನೇ ಅಕ್ಟೋಬರ್ 03 ರಂದು ಆರಂಭಿಸಲಿದ್ದು, ತರಬೇತಿಯು ಬೆಳಿಗ್ಗೆ 09.30 ರಿಂದ ಸಂಜೆ 05.30 ರವರೆಗೆ ನಡೆಯಲಿದೆ.
ಕಂಪ್ಯೂಟರ್ ತರಬೇತಿಯಲ್ಲಿ ಕಂಪ್ಯೂಟರ್‍ಗಳ ಮೂಲಭೂತ ಅಂಶಗಳು, ಕಂಪ್ಯೂಟರ್ ಅಸೆಂಬ್ಲಿಂಗ್ ಮತ್ತು ಟ್ರಬಲ್ ಶೂಟಿಂಗ್, ನೆಟ್ವರ್ಕ್, ವಿಂಡೋಸ್, ಸರ್ವರ್, ಡೇಟಾ ಸಂಗ್ರಹಣೆ, ಎಂ.ಎಸ್. ಆಫೀಸ್, ಕೋರೆಲ್ ಡ್ರಾ. ಪೋಟೋಶಾಪ್ ಒಳಗೊಂಡಿದೆ.
ತರಬೇತಿಯಲ್ಲಿ ಭಾಗವಹಿಲಿಚ್ಚಿಸುವ ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ಪಿ.ಯು.ಸಿ. ಐಟಿಐ, ಡಿಪ್ಲೊಮಾ, ಡಿಗ್ರಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ವಯಸ್ಸು ಕನಿಷ್ಠ 18 ರಿಂದ 30 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ/ವರ್ಗದವರಿಗೆ ಗರಿಷ್ಠ ವಯಸ್ಸು 35 ವರ್ಷದೊಳಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ರೂ. 160000 ಕ್ಕಿಂತ ಕಡಿಮೆ ಆದಾಯ ಪ್ರಮಾಣಪತ್ರವನ್ನು ಒದಗಿಸಬೇಕು.
ಸದರಿ ತರಬೇತಿಗೆ ಸೇರಲಿಚ್ಛಿಸುವವರು ನೇರ ಸಂದರ್ಶನಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯಲಿದ್ದು, ಅರ್ಜಿ ಫಾರಂ ಗಳನ್ನು ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ಸಂಸ್ಥೆ, 3ನೇ ಮಹಡಿ, ಚಿತ್ರಾಪುರ ಭವನ, 8ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರಂ – 560 055 ಹಾಗೂ ದೂರವಾಣಿ ಸಂಖ್ಯೆ : 94485 38107/080 23440036/23463580 ಗೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.