ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನಾಗಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ನಗರ ಪಾಲಿಕೆ ಆಯುಕ್ತರಾಗಿ ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್ ನೇಮಕ ಮಾಡಲಾಗಿದೆ. ಪೂರ್ವ ನಗರ ಪಾಲಿಕೆ ಆಯುಕ್ತರಾಗಿ ರಮೇಶ್ ಜಿ ಎಸ್, ಪೂರ್ವ ಅಪರ ಆಯುಕ್ತೆಯಾಗಿ ಸ್ನೇಹಲ್ ಸುಧಾಕರ್ ನೇಮಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉತ್ತರ ನಗರ ಪಾಲಿಕೆ ಆಯುಕ್ತೆಯಾಗಿ ಪೊಮ್ಮಳ ಸುನೀಲ್ ಕುಮಾರ್, ದಕ್ಷಿಣ ನಗರ ಪಾಲಿಕೆ ಆಯುಕ್ತರಾಗಿ ರಮೇಶ್.ಕೆ ಎನ್, ದಕ್ಷಿಣ ಪಾಲಿಕೆ ಅಪರ ಆಯುಕ್ತರಾಗಿ ಪಾಂಡುರಾಹುಲ್ ತುಕಾರಾಮ್, ಪಶ್ಚಿಮ ನಗರ ಪಾಲಿಕೆ ಆಯುಕ್ತರಾಗಿ ರಾಜೇಂದ್ರ ಕೆ.ವಿ ನೇಮಕ ಮಾಡಲಾಗಿದೆ.