ಬೆಂಗಳೂರು: ನಗರದ ಮಹಿಳಾ ಪೇಯಿಂಗ್ ಗೆಸ್ಟ್ ಕೇಂದ್ರವೊಂದರಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ಕೋಣೆಗೆ ನುಗ್ಗಿ 23 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ನಂತರ ಹಣವನ್ನು ದೋಚಿದ್ದಾನೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಗಂಗೋತ್ರಿ ವೃತ್ತದಲ್ಲಿರುವ ಮಹಿಳೆಯರಿಗಾಗಿರುವ ಪಿಜಿ ಕೇಂದ್ರದಿಂದ ಈ ಘಟನೆ ವರದಿಯಾಗಿದೆ.
ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಮುಖವಾಡ ಧರಿಸಿ ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡ ವ್ಯಕ್ತಿ ಮಹಿಳಾ ಪಿಜಿಗೆ ನುಗ್ಗಿದ್ದಾನೆ. ಪಿಜಿ ಒಳಗೆ ನಗುಗ್ಗುವ ಮೊದಲು ಕಾಮುಕ, ನೆಲ ಮಹಡಿಯಲ್ಲಿನ ಎಲ್ಲಾ ಕೊಠಡಿಗಳನ್ನು ಹೊರಗಿನಿಂದ ಲಾಕ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಬಳಿಕ ಪಿಜಿಯೊಂದರ ಕೊಠಡಿಯಲ್ಲಿ ಮಲಗಿದ್ದಂತ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ವಿರೋಧಿಸಿದಾಗ, ಚಾಕುವಿನಿಂದ ಬೆದರಿಸಿ, ಉಗುರುಗಳಿಂದ ಆಕೆಯ ಕಾಲುಗಳನ್ನು ಕೆರೆದು, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆಕೆಯ ಕಪಾಟಿನಿಂದ 2,500 ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದಾನೆ. ಮಹಿಳೆ ತಕ್ಷಣ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತಿಕ್ರಮಣ, ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಕಳ್ಳತನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕಾಮುಕ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯದ ಉಪ್ಪಾರ ಸಮುದಾಯದವರಿಗೆ ಸಿಎಂ ಸಿದ್ಧರಾಮಯ್ಯ ಗುಡ್ ನ್ಯೂಸ್: ಕೇಂದ್ರಕ್ಕೆ ‘ST’ಗೆ ಶಿಫಾರಸ್ಸು
BIG NEWS: ಕೇಂದ್ರ ಸರ್ಕಾರ GST ಎರಡು ಸ್ಲ್ಯಾಬ್ ಮಾಡಿದ್ರೆ ಕರ್ನಾಟಕಕ್ಕೆ ಪ್ರತಿ ವರ್ಷ 15,000 ಕೋಟಿ ನಷ್ಟ: ಸಿಎಂ







