ಮಂಡ್ಯ: ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಪೊಲೀಸ್ ಜವಾಬ್ದಾರಿಯಾಗಿದೆ ಆದ್ದರಿಂದಲೇ ನಾಗಮಂಗಲದ ಮಸೀದಿ ಮುಂದೆ ಸಾಗುವ ಕೆಲವು ಗಣಪತಿ ವಿಗ್ರಹಗಳ ಮೆರವಣಿಗೆಗೆ ನಿರ್ಭಂಧ ಹೇರಲಾಗಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಮೊದಲಿನಿಂದಲೂ ನಾಗಮಂಗಲದ ಮಸೀದಿ ಮುಂದೆ ಸಾಗುತ್ತಿದ್ದ ಕೆಲವು ಗಣಪತಿ ಮೆರವಣಿಗೆಗೆ ಅನುಮತಿ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೊಸದಾಗಿ ಪ್ರತಿಷ್ಠಾಪಿಸಲಾದ ಗಣೇಶ ವಿಗ್ರಹಗಳ ಮಸೀದಿ ದಾರಿಯಲ್ಲಿ ಹೋಗಲು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಕ್ಯಾಬಿನೆಟ್ ನಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಶಾಸಕರಿಗೂ ಗಣಪತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಯ ಕುರಿತು ಒತ್ತಡದಿಂದ ತೀರ್ಮಾನ ತೆಗೆದುಕೊಳ್ಳಬೇಡಿ ಹಾಗೂ ಯಾವುದೇ ಅಹಿತಕರ ಘಟನೆ ಉಂಟಾಗದಂತೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲೂ ಸಹ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಸೂಕ್ತವಾಗಿ ಗಣಪತಿ ವಿಸರ್ಜನೆ ಮಾಡಲು ತಿಳಿಸಿದ್ದೇನೆ ಎಂದರು.
ಧರ್ಮಸ್ಥಳ ಯಾರ ಆಸ್ತಿಯೂ ಅಲ್ಲ
ಧರ್ಮಸ್ಥಳ ಯಾರ ಆಸ್ತಿಯೂ ಅಲ್ಲ, ಶಿವನ ದರ್ಶನ ಯಾರು ಬೇಕಾದರೂ ಪಡೆಯಬಹುದು. ಧರ್ಮಸ್ಥಳದ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಇಂದು ಧರ್ಮಸ್ಥಳ ಕ್ಷೇತ್ರಕ್ಕೆ ಅಂಟಿದ್ದ ಕಳಂಕವನ್ನು ತೊಡೆದು ಹಾಕಿ. ಹಾದಿ ಬೀದಿಯಲ್ಲಿ ಧರ್ಮಸ್ಥಳದ ಕುರಿತು ಮಾತನಾಡುತ್ತಿದ್ದವರನ್ನು ಸ್ತಬ್ಧ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರುಗಳು ಎಂದು ಹೇಳಿದರು.
ಎಸ್ ಐ ಟಿ ತನಿಖೆ ನಡೆಸದೆ ಹೋಗಿದ್ದರೆ ದಿನ ನಿತ್ಯ ಧರ್ಮಸ್ಥಳ ಕ್ಷೇತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಲೇ ಇರುತ್ತಿದ್ದರು ಎಂದರು.
ಮಂಡ್ಯ ರಿಂಗ್ ರೋಡ್
ಮಂಡ್ಯದಲ್ಲಿ ರಿಂಗ್ ರೋಡ್ ಮಾಡಲು ಜಾಗ ಇನ್ನೂ ಅಂತಿಮವಾಗಿರುವುದಿಲ್ಲ. ಮಂಡ್ಯ ಮತ್ತು ಶ್ರೀರಂಗಪಟ್ಟಣ ಎರಡಕ್ಕೂ ಈ ಯೋಜನೆ ಸಂಬಂಧ ಪಟ್ಟಿರುವುದರಿಂದ ಇಬ್ಬರೂ ಶಾಸಕರೊಂದಿಗೆ ಚರ್ಚಿಸಿ ಮುಡಾ ಆಯುಕ್ತರು ಹಾಗೂ ಸಂಬಂಧಪಟ್ಟ ಪಂಚಾಯಿತಿಗಳನ್ನು ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಸಂಸದ ಕುಮಾರಸ್ವಾಮಿ ಅವರು ರಿಂಗ್ ರೋಡ್ ನಿರ್ಮಾಣಕ್ಕೆ 900 ಕೋಟಿ ಅನುದಾನ ಕೊಡಿಸುವುದಾಗಿ ಹೇಳಿದ್ದಾರೆ.ರೂ 900 ಕೋಟಿ ಅನುದಾನ ನೀಡಿದರೆ ಮಂಡ್ಯದ ಸಂಜಯ್ ವೃತ್ತದಲ್ಲಿ ಸನ್ಮಾನ ಮಾಡೋಣ ಎಂದರು.
ಎಂ.ಪಿ ಕುಮಾರ ಸ್ವಾಮಿ ವಿರುದ್ಧ ಹರಿಹಾಯ್ದ ಎಸ್ ಆರ್ ಎಸ್
ಕುಮಾರ ಸ್ವಾಮಿ ಅವರು ಕೈಗಾರಿಕಾ ಮಂತ್ರಿಯಾಗಿರುವುದರಿಂದ ರಾಷ್ಟ್ರದ ಕೈಗಾರಿಕಾ ಸಂಸ್ಥೆಗಳು ಅವರಿಗೆ ಸಿ.ಆರ್.ಎಸ್ ಅನುದಾನ ಬರುತ್ತದೆ. ಎಂ ಪಿ. ಕುಮಾರ ಸ್ವಾಮಿ ಅವರು ಮೈ ಶುಗರ್ ಶಾಲೆಗೆ 25 ಕೋಟಿ ಕೊಡಿಸುವುದಾಗಿ ಪತ್ರಿಕಾ ಗೋಷ್ಠಿ ಕರೆದು ಹೇಳಿದರು ಇನ್ನೂ ಹಣ ಬಿಡುಗಡೆ ಗೊಂಡಿಲ್ಲ ಎಂದು ವ್ಯಂಗ್ಯವಾಡಿದರು.
ಲೋಕಸಭಾ ಸದಸ್ಯರಾಗಿ ಮಂಡ್ಯ ಜಿಲ್ಲೆಗೆ ಒಂದುವರೆ ತಿಂಗಳಿಂದಲೂ ಬಂದಿಲ್ಲ. . ನಾವು ಅವರ ಆರೋಗ್ಯ ಚನ್ನಾಗಿರಲಿ ಎಂದು ಆಶಿಸುತ್ತೇವೆ. ಪಾರ್ಲಿಮೆಂಟ್ ಗಳಿಗೆ ಹೋಗುತ್ತಾರೆ. ಪ್ರಧಾನ ಮಂತ್ರಿ ಮೋದಿ ಅವರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ ಆದರೆ ಮಂಡ್ಯ ಗೆ ಯಾಕೆ ಬಂದಿಲ್ಲ ಎಂದರು.
ಮೈ ಶುಗರ್ ಸಕ್ಕರೆ ಕಾರ್ಖಾನೆ
ರೈತಪರ ಸಂಘಟನೆಗಳು, ನಾವುಗಳು ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದೆಂದು ಪಣತೊಟ್ಟಿದ್ದೇವು ಆದರೆ ಬಸವರಾಜ ಬೊಮ್ಮಾಯಿ ಅವರ ಬಿ.ಜೆ.ಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮೈ ಶುಗರ್ ಕಾರ್ಖಾನೆಯನ್ನು ಖಾಸಗಿಕರಣ ಗೊಳಿಸಲು ಟೆಂಡರ್ ಕರೆಯಲಾಗಿತ್ತು. ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ನಡೆಸಲು ಸಾಧ್ಯವಾದರೆ ನಡೆಸಿ ಇಲ್ಲವಾದರೆ ಬಿಡಿ.ಖಾಸಗಿಕರಣ ಮಾಡಬೇಡಿ ಎಂದು ಪ್ರತಿಭಟಿಸಿದ್ದೆವು ಕಾರಣಾಂತರದಿಂದ ಅ ಯೋಜನೆ ಅರ್ಧಕ್ಕೆ ನಿಂತಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಚಾಲನೆ ನೀಡಲಾಯಿತು. 117 ಕೋಟಿ ಅನುದಾನವನ್ನು ಮೈ ಶುಗರ್ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ನೀಡಲಾಗಿದೆ. ಮೈಷುಗರ್ ಕಾರ್ಖಾನೆಯಲ್ಲಿ ಬಾಯ್ಲರ್ ನಲ್ಲಿ ಸಮಸ್ಯೆ ಇದೆ. ಬಾಯ್ಲರ್ ಸರಿಪಡಿಸಿದರೆ ದಿನಕ್ಕೆ 5000 ಟನ್ ಕಬ್ಬುನರಿಸಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ.ಉದಯ್ , ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮದ್ದೂರು ಕ್ಷೇತ್ರದ ಹಲವು ಸಮಸ್ಯೆಗಳಿಗೆ ಹಿಂದಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣ: ಶಾಸಕ ಕೆ.ಎಂ.ಉದಯ್
ಹೊಸ ಆದಾಯ ತೆರಿಗೆ ನಿಯಮ : ITR ಸಲ್ಲಿಸುವ ಗಡುವು ಮತ್ತೊಮ್ಮೆ ವಿಸ್ತರಣೆ | ITR filing due date extended







