ಧರ್ಮಸ್ಥಳ: ಜೆಡಿಎಸ್ ರಾಜಕೀಯಕ್ಕಾಗಿ ಧರ್ಮಸ್ಥಳ ಸತ್ಯ ಯಾತ್ರೆಯನ್ನು ಮಾಡಿಲ್ಲ. ಮಂಜುನಾಥ, ಅಣ್ಣಪ್ಪ ಸ್ವಾಮಿ ಭಕ್ತರು ದೇಶವ್ಯಾಪಿ ಇದ್ದಾರೆ. ಇದೀಗ ಕ್ಷೇತ್ರದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಇದನ್ನು ಆಲೋಚನೆ ಮಾಡೋದಕ್ಕೂ ಸಾಧಅಯವಿಲ್ಲ ಎಂಬುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಧರ್ಮಸ್ಥಳ ಸತ್ಯ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದಂತ ಅವರು ಮಂಜುನಾಥನ ಮುಂದೆ ದುಷ್ಟಶಕ್ತಿ ಉಳಿಯಲು ಸಾಧ್ಯವಿಲ್ಲ. ಮಂಜುನಾಥನ ಭಕ್ತರು ಮನೆಯಲ್ಲಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ತಾಳ್ಮೆ ಒಂದು ಹಂತಕ್ಕಷ್ಟೇ ಸರಿ ಎಂದರು.
ಪೂಜ್ಯರ ಕುಟುಂಬಕ್ಕೆ ಊಹಿಸಲು ಆಗದಷ್ಟು ನೋವಾಗಿದೆ. ತಾಳ್ಮೆ ಕಳೆದುಕೊಳ್ಳದೇ ಸಮಾಧಾನದಿಂದಲೇ ವರ್ತಿಸಿದ್ದಾರೆ. ಈ ಪ್ರಕರಣದ ಹಿಂದೆ ಕಾಣದ ಕೈಗಳು ಇವೆ ಎಂಬುದಾಗಿ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ವಿದೇಶದಿಂದ ಹಣ ಹೂಡಿಕೆ ಮಾಡಿ ವೀಡಿಯೋ ಮಾಡಿದ್ರು. ಪೂಜ್ಯರ ಕುಟುಂಬಕ್ಕೆ ನಾವು ನೈತಿಕ ಬೆಂಬಲ ನೀಡುತ್ತೇವೆ. ಧರ್ಮಸ್ಥಳದ ಮೇಲೆ ನಡೆದ ಷಡ್ಯಂತ್ರ ಬಯಲಾಗಬೇಕು. ಈ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂಬುದಾಗಿ ಆಗ್ರಹಿಸಿದರು.
ಜೂನಿಯರ್ ಹಾಕಿ ವಿಶ್ವಕಪ್‌ಗಾಗಿ ಭಾರತ ಪ್ರವಾಸವನ್ನು ಖಚಿತಪಡಿಸಿದ ಪಾಕಿಸ್ತಾನ | Junior hockey world cup
ಗಣೇಶ ವಿಸರ್ಜನೆ ಮೆರವಣಿಗೆ ವೇಳೆಯೇ ಹಾರ್ಟ್ ಅಟ್ಯಾಕ್: ಡ್ಯಾನ್ಸ್ ಮಾಡುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು








