ಮಂಡ್ಯ: ಜಿಲ್ಲೆಯ ಡಿಸಿಸಿ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿಯವರು ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರು.
ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ತಾಲೂಕಿನ ಅಭ್ಯರ್ಥಿ ಸತೀಶ್, ಮಳವಳ್ಳಿ ಅಭ್ಯರ್ಥಿ ಶಾಸಕ ಪಿಎಂ ನರೇಂದ್ರಸ್ವಾಮಿ, ನಾಗಮಂಗಲ ಕ್ಷೇತ್ರದಿಂದ ಸಚಿನ್ ಚಲುವರಾಯಸ್ವಾಮಿ, ಕೆ ಆರ್ ಪೇಟೆಯಿಂದ ಅಂಬರೀಶ್, ಮದ್ದೂರು ತಾಲ್ಲೂಕು ವಿಎಸ್ಎಸ್ಎನ್ ಕ್ಷೇತ್ರದಿಂದ ಪಿ.ಸಂದರ್ಶ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಮದ್ದೂರು. ಮಳವಳ್ಳಿ ಮತ್ತು ಮಂಡ್ಯ ತಾಲೂಕು ವ್ಯಾಪ್ತಿಯ ಕ್ಷೇತ್ರ ಕ್ಕೆ ತೈಲೂರು ಚಲುವರಾಜು, ಜಿಲ್ಲೆಯ ಬಳಕೆದಾರರ ಕ್ಷೇತ್ರದಿಂದ ಹಾಲಹಳ್ಳಿ ಅಶೋಕ್, ಜಿಲ್ಲೆಯ ಕೈಗಾರಿಕಾ ಕ್ಷೇತ್ರದಿಂದ ಜೋಗಿಗೌಡ, ಜಿಲ್ಲೆಯ ಟಿಎಪಿಸಿಎಂಎಸ್ ಕ್ಷೇತ್ರದಿಂದ ದಿನೇಶ್, ಹಾಗೂ ಮನಮುಲ್ ಮಿಲ್ಕ್ ಡಿವಿಜನ್ ಕ್ಷೇತ್ರದಿಂದ ಚೆಲುವರಾಜು, ಮಿಲ್ಕ್ ಸಬ್ ಡಿವಿಷನ್ ಕ್ಷೇತ್ರದಿಂದ ವಿಜಯಾನಂದ ಮೂರ್ತಿ, ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಮದ್ದೂರು ಶಾಸಕ ಕದಲೂರು ಉದಯ್ ಹಾಗೂ ಮೈಶುಗರ್ ಕಾರ್ಖಾನೆಯ ಅಧ್ಯಕ್ಷ ಸಿಡಿ ಗಂಗಾಧರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಮತ್ತಿತರರು ಹಾಜರಿದ್ದರು.
ಹಾಸನದಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು
BREAKING: ಧರ್ಮಸ್ಥಳ ಕೇಸ್: ಬುರುಡೆ ಚಿನ್ನಯ್ಯ 2 ಪೋನ್, ಸುಜಾತ ಭಟ್ ಒಂದು ಮೊಬೈಲ್ SIT ಸೀಜ್







