ಮೈಸೂರು: ದಸರಾ, ದೀಪಾವಳಿ ಮತ್ತು ಚಟ್ ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು, ದಕ್ಷಿಣ ಮಧ್ಯ ರೈಲ್ವೆಯು ರೈಲು ಸಂಖ್ಯೆ 07033/07034 ಸಿಕಂದರಾಬಾದ್ – ಮೈಸೂರು – ಸಿಕಂದರಾಬಾದ್ ವಿಶೇಷ ರೈಲುಗಳ ಸಂಚಾರವನ್ನು ಈ ಮೊದಲಿನ ಸಮಯ, ನಿಲ್ದಾಣಗಳು ಮತ್ತು ಬೋಗಿ ವಿನ್ಯಾಸದಲ್ಲೇ ಮುಂದುವರಿಸುವುದಾಗಿ ಪ್ರಕಟಿಸಿದೆ.
ರೈಲು ಸಂಖ್ಯೆ. 07033 ಸಿಕಂದರಾಬಾದ್ – ಮೈಸೂರು ವಿಶೇಷ ರೈಲು 01.09.2025 ರಿಂದ 31.10.2025 ರವರೆಗೆ, ಸೋಮವಾರ ಮತ್ತು ಶುಕ್ರವಾರಗಳಲ್ಲಿ ಒಟ್ಟು 17 ಟ್ರಿಪ್ ಗಳನ್ನು ಓಡುತ್ತದೆ. ಆದರೆ, 29.09.2025ರಂದು ಸಿಕಂದರಾಬಾದ್ ನಿಂದ ಸಂಚರಿಸುವುದಿಲ್ಲ.
ಹಿಂತಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ. 07034 ಮೈಸೂರು – ಸಿಕಂದರಾಬಾದ್ ವಿಶೇಷ ರೈಲು 02.09.2025 ರಿಂದ 01.11.2025 ರವರೆಗೆ, ಮಂಗಳವಾರ ಮತ್ತು ಶನಿವಾರಗಳಲ್ಲಿ ಒಟ್ಟು 17 ಟ್ರಿಪ್ ಗಳನ್ನು ಓಡುತ್ತದೆ. ಆದರೆ, 30.09.2025ರಂದು ಮೈಸೂರಿನಿಂದ ಸಂಚರಿಸುವುದಿಲ್ಲ.
BREAKING: ಹುಬ್ಬಳ್ಳಿಯ ಈದ್ಗಾ ಮೈದಾನ ಇನ್ಮುಂದೆ ‘ರಾಣಿ ಚೆನ್ನಮ್ಮ ಮೈದಾನ’: ಪಾಲಿಕೆಯಿಂದ ಅಧಿಕೃತ ಘೋಷಣೆ
BREAKING: UGCET, NEET 2ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ- ಕೆಇಎ