ಬೆಂಗಳೂರು : ಕನ್ನಡದ ಖ್ಯಾತ ನಿರೂಪಕಿ ಆಂಕರ್ ಅನುಶ್ರೀ ಅವರು ಕೊನೆಗೂ ಹಸೆಮಣೆ ಏರಿದ್ದಾರೆ. ಕೊಡಗು ಮೂಲದ ರೋಷನ್ ಅವರೊಂದಿಗೆ ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಅನುಶ್ರೀ ರೋಷನ್ ಮದುವೆ ಇಂದು ನೆರವೇರಿತು.
ಇದಕ್ಕೂ ಮುನ್ನ ನಿನ್ನೆ ಅನುಶ್ರೀ ರೋಷನ್ ಅರಿಶಿಣ ಶಾಸ್ತ್ರ ನೆರವೇರಿತ್ತು. ಇಂದು ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಅನುಶ್ರೀ ಹಾಗೂ ರೋಷನ್ ಮದುವೆ ಬಹಳ ಅದ್ದೂರಿಯಾಗಿ ನೆರವೇರಿತು ಈ ವೇಳೆ ಅನುಶ್ರೀ ಹಣೆಗೆ ಖುಷಿಯಿಂದ ಅವರು ಮುತ್ತಿಟ್ಟಿದ್ದಾರೆ ಈ ಒಂದು ಮದುವೆ ಸಮಾರಂಭದಲ್ಲಿ ಹಲವು ಸೆಲೆಬ್ರಿಟಿಗಳು ಗಣ್ಯರು ಭಾಗವಹಿಸಿದ್ದರು.
ಬೆಳಿಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ, ರೋಷನ್ ಮದುವೆ ನೆರವೇರಿದೆ. ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ನಡೆದಿದ್ದು, ಸಿನಿ ಗಣ್ಯರು, ಕಲಾವಿದರು ಭಾಗವಹಿಸಿದ್ದರು. ಆಹ್ವಾನಿತರಿಗೆ ಮಾತ್ರ ಅನುಶ್ರೀ ಮದುವೆಗೆ ಬರಲು ಅವಕಾಶ ನೀಡಲಾಗಿತ್ತು. ಅನುಶ್ರೀ ಮತ್ತು ರೋಷನ್ ಬಹುಕಾಲದ ಗೆಳೆಯರು. ರೋಷನ್ ಕೊಡಗು ಮೂಲದ ಉದ್ಯಮಿಯಾಗಿದ್ದಾರೆ. ಇಬ್ಬರು ಕೂಡ ಅಪ್ಪು ಅಭಿಮಾನಿಗಳು. ಪರಸ್ಪರ ಒಬ್ಬರನೊಬ್ಬರನ್ನು ಅರಿತಿರುವ ಈ ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.