ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಠಾಣೆಯ ಪೊಲೀಸರು ಕೇಸ್ ದಾಖಲಾದಂತ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಬಂಧಿತ ಕಳ್ಳನಿಂದ ಸುಮಾರು 96,96,800 ಮೌಲ್ಯದ ಹಣವನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತಂತೆ ಚಿತ್ರದುರ್ಗ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ಚಳ್ಳಕೆರೆಯ ಉಡುಪಿ ಗಾರ್ಡನ್ ಹೊಟೇಲ್‌ನಲ್ಲಿ ಹಣವನ್ನು ಕಾರಿನಲ್ಲಿ ಇಟ್ಟು ಊಟ ಮಾಡಲು ಹೋಗಿದ್ದು ಕೆಎ-51-ಸಿ-3434 ನ ಕಾರಿನ ಚಾಲಕ ರಮೇಶ್, ಊಟ ಮಾಡಿ ಹೊರಗಡೆ ಹೋಗಿ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಾರಿನಲ್ಲಿದ್ದ 97,00,000 /- ಹಣವನ್ನು ಕಳ್ಳತನದಲ್ಲಿ ತೆಗೆದುಕೊಂಡು ಹೋಗಿರುವ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣಿಯ ಮೊ.ನಂ.396/2025 ಕಲಂ.303(2) ಬಿ ಎನ್ ಎಸ್ ರೀತ್ಯ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣಗಳ ಆರೋಪಿತರ ಪತ್ತೆಗಾಗಿ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಎಪಿಎಸ್, ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಜಿಲ್ಲೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶಿವಕುಮಾರ್ ಇವರುಗಳ ಮಾರ್ಗದರ್ಶನದಲ್ಲಿ, ಟಿ.ಜ ರಾಜಣ್ಣ ಡಿ.ವೈ.ಎಸ್.ಪಿ ಚಳ್ಳಕೆರ ಅವರ ಉಸ್ತುವಾರಿಯಲ್ಲಿ ಕುಮಾರ ಕೆ ಪಿ.ಎ ಚಳ್ಳಕೆರೆ ಅವರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಈರೇಶ್, ಶಿವರಾಜ್ ಜೆ ಹಾಗೂ ಸಿಬ್ಬಂಧಿಯವರುಗಳಾದ ವಸಂತಕಮಾರ್, ಮಂಜುನಾಥ, ವೆಂಕಟೇಶ ಕೆ, ನಾಗರಾಜ, ಪರಶುರಾಮ, ಶ್ರೀಧರ ವಸಂತ ಧರೆಣ್ಣವರ್, ರಮೇಶ್ ಬಾರ್ಕಿ, ಅಶೋಕರೆಡ್ಡಿ, ತಿಪ್ಪೇಸ್ವಾಮಿ ಪಿ, ತಿಲಕರಾಜ್, ಶಿವರಾಜ್ ಜೆ, ಮಂಜುನಾಥ ಎನ್ ಮತ್ತು ಶ್ರೀನಿವಾಸ್ ಅವರುಗಳನ್ನೊಳಗೊಂಡ ತಂಡವು ಆರೋಪಿಗಳ ಪತ್ತೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ದಿ:26.08.2025 ರಂದು ಎ-1 ಆರೋಪಿ ರಮೇಶ್.ವಿ ಅವರನ್ನು ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ ಬಂಧಿಸಲಾಗಿದೆ.
ಬಂಧಿತ ಆರೋಪಿಯಿಂದ ಸುಮಾರು 96,96,800/- ರೂ. ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಅಲ್ಲದೇ ಕೃತ್ಯಕ್ಕೆ ಬಳಸಿರುವ ಟೊಯೋಟಾ ಈಟಿಯಸ್ ಕಾರನ್ನು ವಶಕ್ಕೆ ಪಡೆದಿರುತ್ತಾರೆ. ಈ ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ & ಸಿಬ್ಬಂದಿಗಳನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಎ.ಪಿ.ಎಸ್ ಅವರು ಶ್ಲಾಘಿಸಿದ್ದಾರೆ.
ಚಳ್ಳಕೆರೆ ಪೊಲೀಸರಿಂದ ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿತನ ಬಂಧನ,
ಕಳ್ಳತನ ಮಾಡಿದ್ದ ಸುಮಾರು 96,96,800/- ರೂ ಹಣ ವಶ.@DgpKarnataka @KarnatakaCops @112chitradurga pic.twitter.com/1JDFDpCZ51— Chitradurga District Police (@spchitradurga) August 27, 2025
BREAKING: ಭಾರೀ ಮಳೆ ಹಿನ್ನಲೆ, ನಾಳೆ ಸಾಗರ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ತಹಶೀಲ್ದಾರ್
ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ