ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವಂತ ಜಗ್ಗ ಆಲಿಯಾಸ್ ಜಗದೀಶ್ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಯನ್ನು ಸಿಐಡಿ ಪೊಲೀಸರ ವಶಕ್ಕೂ ಹೆಚ್ಚಿನ ವಿಚಾರಣೆಗೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ನನಗೂ ಬೈರತಿ ಬಸವರಾಜ್ ಗೂ ಸಂಬಂಧವಿಲ್ಲ ಎಂಬುದಾಗಿ ಎ1 ಆರೋಪಿ ಜಗ್ಗ ಹೇಳಿದ್ದಾಗಿ ತಿಳಿದು ಬಂದಿದೆ.
ಮಂಗಳವಾರದಂದು ಬಿಕ್ಲು ಶಿವ ಕೊಲೆ ಕೇಸಲ್ಲಿ ಎ1 ಆರೋಪಿಯಾಗಿದ್ದಂತ ಜಗದೀಶ್ ಆಲಿಯಾಸ್ ಜಗ್ಗ ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಸಿಐಡಿ ವಶಕ್ಕೂ ನೀಡಲಾಗಿದೆ. ಸಿಐಡಿಯ ಎಸ್ ಪಿ ವೆಂಕಟೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಬಿಕ್ಲು ಶಿವನ ಜೊತೆ ಇದ್ದ ವೈಷಮ್ಯದ ಬಗ್ಗೆ, ಕಿತ್ತಗನೂರಿನ ಜಮೀನಿನ ಗಲಾಟೆಯ ಬಗ್ಗೆ, ಹಳೆಯ ಕೇಸ್ ಗಳ ಬಗ್ಗೆ ವಿಚಾರಣೆ ವೇಳೆಯಲ್ಲಿ ಹಲವು ಮಹತ್ವದ ಮಾಹಿತಿಯನ್ನು ಜಗ್ಗ ನೀಡಿದ್ದಾಗಿ ಹೇಳಲಾಗುತ್ತಿದೆ.
ಇದಲ್ಲದೇ ಬೈರತಿ ಬಸವರಾಜ್ ಜೊತೆಗಿನ ಸಂಪರ್ಕದ ಬಗ್ಗೆಯೂ ಬಾಯಿ ಬಿಡಿಸಲು ಯತ್ನಿಸಲಾಗಿತತು. ಆದರೇ ಜಗ್ಗ ನನಗೂ ಬೈರತಿ ಬಸವರಾಜ್ ಗೂ ಆತ್ಮೀಯತೆ ಇಲ್ಲವೇ ಇಲ್ಲ. ಕ್ಷೇತ್ರದ ಶಾಸಕರಾದ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೆ ಅಷ್ಟೇ. ಕುಂಭಮೇಳಕ್ಕೆ ಹೋಗಿದ್ದಾಗಲೂ ಸಿಕ್ಕಿದ್ದರು. ಅವರನ್ನು ಭೇಟಿಯಾಗಿ ಪೋಟೋ ತೆಗೆಸಿಕೊಂಡಿದ್ದೆ. ಬಿಕ್ಲು ಶಿವ ಕೊಲೆಗೂ ಶಾಸಕ ಬೈರತಿ ಬಸವರಾಜ್ ಗೂ ಸಂಬಂಧವಿಲ್ಲ ಎಂಬುದಾಗಿ ಹೇಳಿದ್ದಾಗಿ ತಿಳಿದು ಬಂದಿದೆ.
ರಾಜ್ಯದ `ಗ್ರಾಮೀಣ ಜನತೆಗೆ ಗುಡ್ ನ್ಯೂಸ್’ : ಮನೆಯ `ಕಟ್ಟಡ ಪರವಾನಗಿ ಪತ್ರ’ ಪಡೆಯುವುದು ಇನ್ನು ಸುಲಭ | WATCH VIDEO
ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ