ಶಿವಮೊಗ್ಗ : ಸಾಗರದ ಇತಿಹಾಸ ಪ್ರಸಿದ್ದವಾದ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಫೆಬ್ರವರಿ.3, 2026ರಂದು ನಡೆಯಲಿದೆ ಎಂದು ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಹೇಳಿದರು.
ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಸೋಮವಾರ ಮಾರಿಕಾಂಬಾ ಜಾತ್ರಾ ವಿವರದ ನಾಮಫಲಕ ಅನಾವರಣ ಮಾಡಿ ಮಾತನಾಡಿದಂತ ಅವರು, ಜಾತ್ರೆ ನಡೆಸುವ ಕುರಿತು ಚರ್ಚೆ ನಡೆಸಲಾಗಿದ್ದು ಮುಹೂರ್ತವನ್ನು ನಿಗಧಿಪಡಿಸಲಾಗಿದೆ. 2025ರ ಡಿಸೆಂಬರ್ 23ರಂದು ಮರ ಕಡಿಯುವ ಶಾಸ್ತ, 2026ರ ಜನವರಿ 27ರಂದು ಜಾತ್ರೆಗೆ ಅಂಕೆ ಹಾಕುವುದು. ಫೆ.3ರಂದು ತವರುಮನೆಯಲ್ಲಿ ಅಮ್ಮನ ಪ್ರತಿಷ್ಟಾಪನೆ, ರಾತ್ರಿ ಅಮ್ಮನವರ ಮೆರವಣಿಗೆ ನಂತರ ಗಂಡನ ಮನೆ ದೇವಸ್ಥಾನದಲ್ಲಿ ಅಮ್ಮನ ಪ್ರತಿಷ್ಟಾಪನೆ, ಫೆ. 11ರಂದು ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರ ಫೆ. 15ರಂದು ಅಂಕೆ ತೆಗೆಯುವುದು ಮತ್ತು ಕೋಣವನ್ನು ಬಿಡುವ ಶಾಸ್ತ್ರ ನಡೆಯುತ್ತದೆ. ಸಾರ್ವಜನಿಕರಿಗೆ ಮಾಹಿತಿ ಹಿನ್ನೆಲೆಯಲ್ಲಿ ಆರು ತಿಂಗಳ ಮೊದಲೆ ಜಾತ್ರಾ ದಿನಾಂಕ ಘೋಷಣೆ ಮಾಡಿದೆ ಎಂದರು.
ಗಂಡನ ಮನೆ ದೇವಸ್ಥಾನದ ಪ್ರಧಾನ ಅರ್ಚಕ ರವಿ ಪೋತರಾಜ ಮಾತನಾಡಿ, ಅರಸರ ಕಾಲದಿಂದಲೂ ಸಾಗರದ ಮಾರಿಕಾಂಬಾ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಬಾರಿ ಆಡಳಿತ ಮಂಡಳಿಯವರು ಫೆ.3ರಂದು ಜಾತ್ರೆ ನಿಗಧಿಪಡಿಸಿದ್ದಾರೆ. ಜನವರಿ 27ರಂದು ಅಂಕೆ ಹಾಕುವ ಶಾಸ್ತವಿದ್ದು ಅಂಕೆ ಹಾಕಿದ ನಂತರ ಕೆಲವು ಶುಭ ಕಾರ್ಯಗಳನ್ನು ಮಾಡಲು ಧಾರ್ಮಿಕ ಕಟ್ಟುಪಾಡು ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂಚಿತವಾಗಿ ಜನರಿಗೆ ಜಾತ್ರಾ ದಿನಾಂಕ ಘೋಷಣೆ ಮಾಡಿರುವುದು ಸಂತೋಷದ ಸಂಗತಿ. ಜಾತ್ರಾ ಯಶಸ್ಸಿಗೆ ಸರ್ವರೂ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಷ್ಟಾನದ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಬಿ.ಜಿ.ಗಿರಿಧರ ರಾವ್, ಕೋಶಾಧ್ಯಕ್ಷ ನಾಗೇಂದ್ರ ಕುಮಟಾ, ನವೀನ್, ದಿನೇಶ್ ಡಿ., ನಾರಾಯಣ ಅರಮನೆಕೇರಿ, ಬಾಲಕೃಷ್ಣ ಇನ್ನಿತರರು ಹಾಜರಿದ್ದರು.
ಶಿವಮೊಗ್ಗ: ಸಾಗರದ ಜೋಯಿಸ್ ಮನೆತನದಿಂದ ‘ಅರಮನೆ ಗೌರಿ’ ಪ್ರತಿಷ್ಠಾಪನೆ, ವಿಶೇಷ ಪೂಜೆ
ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ