ಬೆಂಗಳೂರು: ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು, ಕೋರಿಕೆ ವರ್ಗಾವಣೆ ಅರ್ಜಿ ಸಲ್ಲಿಸಿರುವ ಶಿಕ್ಷಕರುಗಳಿಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲು ಕಾಲಾವಕಾಶವನ್ನು ವಿಸ್ತರಿಸಿ ಆದೇಶಿಸಲಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020 (2020 ರ ಕರ್ನಾಟಕ ಅಧಿನಿಯಮ ಸಂಖ್ಯೆ: 04) ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು-2020 ರ ಹಾಗೂ ವರ್ಗಾವಣೆ ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳು-2022 ಪುಕಾರ 2024-25 ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಉಲ್ಲೇಖ-1 ರ ವರ್ಗಾವಣಾ ವರ್ಗಾವಣಾ ವೇಳಾಪಟ್ಟಿಯಂತೆ ಹೆಚ್ಚುವರಿ ಶಿಕ್ಷಕರ ಆಕ್ಷೇಪಣೆಗಳನ್ನು ವಿಭಾಗೀಯ ಸಹ ನಿರ್ದೇಶಕರಿಗೆ ಸಲ್ಲಿಸಲು ದಿನಾಂಕ : 25-08-2025 ಹಾಗೂ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರು ಆಕ್ಷೇಪಣೆಗಳನ್ನು ಸಲ್ಲಿಸಲು ವಿಭಾಗೀಯ ಸಹ ನಿರ್ದೇಶಕರಿಗೆ ಸಲ್ಲಿಸಲು ದಿನಾಂಕ : 29-08-2025 ರವರೆಗೆ ಕಾಲಾವಕಾಶ ನೀಡಲಾಗಿತ್ತು.
ಆದರೆ ವಿಭಾಗೀಯ ಸಹ ನಿರ್ದೇಶಕರುಗಳು ಸದರಿ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ದೃಢಪಡಿಸಿಕೊಂಡು ತಂತ್ರಾಂಶದಲ್ಲಿ ಇಂದೀಕರಿಸಲು ಕಾಲಾವಕಾಶ ಕೋರಿ ಉಲ್ಲೇಖ-3 ರಂತೆ ಮನವಿ ಸಲ್ಲಿಸಿರುತ್ತಾರೆ. ಈ ಸಂಬಂಧ ಉಲ್ಲೇಖ-2 ರಂತೆ ಮಾನ್ಯ ಸರ್ಕಾರ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಿದಂತೆ ಈ ಕೆಳಗಿನಂತೆ ಕಾಲಾವಕಾಶ ನೀಡಲಾಗಿದೆ ಎಂದಿದ್ದಾರೆ.
ಹೀಗಿದೆ ಶಿಕ್ಷಕರ ವರ್ಗಾವಣೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವದಿ ವಿಸ್ತರಿಸಿದ ದಿನಾಂಕಗಳ ಮಾಹಿತಿ
- ದಿನಾಂಕ 29-08-2025ರವರೆಗೆ ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು ತಮ್ಮ ಆಕ್ಷೇಪಣೆಗಳನ್ನು ಆಯಾ ವ್ಯಾಪ್ತಿಯ ವಿಭಾಗೀಯ ಸಹ ನಿರ್ದೇಶಕರಿಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
- ದಿನಾಂಕ 30-08-2025ರವರೆಗೆ ವಿಭಾಗೀಯ ಸಹ ನಿರ್ದೇಶಕರು ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಆಲಿಸಿ, ನಿಯಮಾನುಸಾರ ಪರಿಶೀಲಿಸಿ ತಂತ್ರಾಂಶದಲ್ಲಿ ಇಂದೀಕರಿಸಲು ಕಾಲಾವಕಾಶ ನೀಡಲಾಗಿದೆ.
- ದಿನಾಂಕ 01-09-2025ರವರೆಗೆ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರು ತಮ್ಮ ಆಕ್ಷೇಪಣೆಗಳನ್ನು ಆಯಾ ವ್ಯಾಪ್ತಿಯ ವಿಭಾಗೀಯ ಸಹ ನಿರ್ದೇಶಕರಿಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
- ದಿನಾಂಕ 02-09-2025ರವರೆಗೆ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಆಲಿಸಿ, ನಿಯಮಾನುಸಾರ ಪರಿಶೀಲಿಸಿ ತಂತ್ರಾಂಶದಲ್ಲಿ ಇಂದೀಕರಿಸಲು ಕಾಲಾವಕಾಶ ನೀಡಲಾಗಿದೆ.
- ದಿನಾಂಕ 01-09-2025ರವರೆಗೆ ಶಿಕ್ಷಕರು ತಮ್ಮ ಸೇವಾ ವಿವರಗಳನ್ನು ಇಇಡಿಎಸ್ ತಂತ್ರಾಂಶದಲ್ಲಿ ಅಂತಿಮವಾಗಿ ಇಂದೀಕರಿಸಲು ಕಾಲಾವಕಾಶ.
- ದಿನಾಂಕ 02-09-2025ರವರೆಗೆ ಖಾಲಿ ಹುದ್ದೆಗಳನ್ನು ಪರಿಶೀಲಿಸಿ ದೃಢೀಕರಿಸಿಕೊಳ್ಳಲು ಕಾಲಾವಕಾಶ ನೀಡಲಾಗಿದೆ.
- ದಿನಾಂಕ 04-09-2025ರವರೆಗೆ ಮಂಜೂರಾದ ಹುದ್ದೆಗಳ ವರ್ಗಾವಣೆ ಅರ್ಜಿಗಳ ಮತ್ತು ಖಾಲಿ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ತಂತ್ರಾಂಶದಲ್ಲಿ ಇಂದೀಕರಿಸುವುದು.
ವರ್ಗಾವಣೆ ಪ್ರಕ್ರಿಯೆಯ ಮುಂದಿನ ಚುಟುವಚಿಕೆಗಳನ್ನು ಪರಿಷ್ಕೃತ ವೇಳಾಪಟ್ಟಿಯಲ್ಲಿ ಪ್ರಕಟಿಸಲಾಗುವುದು ಅಂತ ಶಾಲಾ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
‘QR ಕೋಡ್’ ಸ್ಕ್ಯಾನ್ ಮಾಡಿ, ‘ಆಸ್ತಿ ಮಾಹಿತಿ, ನೋಂದಣಿ ಮತ್ತು ಬಾಡಿಗೆ ಒಪ್ಪಂದ’ ಪಡೆಯಿರಿ, ಸರ್ಕಾರದ ಹೊಸ ಯೋಜನೆ
WATCH VIDEO : ನದಿಗೆ ಜಾರಿಬಿದ್ದ ಇಬ್ಬರನ್ನ ರಕ್ಷಿಸಿದ ಕೇಂದ್ರ ಸಚಿವ ‘ಕಿರಣ್ ರಿಜಿಜು’, ನೆಟ್ಟಿಗರಿಂದ ಭಾರೀ ಪ್ರಶಂಸೆ