ಜಮ್ಮು-ಕಾಶ್ಮೀರ: ಮಂಗಳವಾರ ಮಧ್ಯಾಹ್ನ ತ್ರಿಕೂಟ ಬೆಟ್ಟದ ಮೇಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಕನಿಷ್ಠ ಐದು ಜನರು ಸಾವನ್ನಪ್ಪಿ, 14 ಜನರು ಗಾಯಗೊಂಡಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದ ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಧ್ಕ್ವರಿಯಲ್ಲಿರುವ ಇಂದರ್ಪ್ರಸ್ಥ ಭೋಜನಾಲಯದ ಬಳಿ ಭೂಕುಸಿತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಸಹಾಯವಾಣಿ ಸಂಖ್ಯೆ ಆರಂಭ
ಪೀಡಿತ ಜಿಲ್ಲೆಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ ಮತ್ತು ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆಯನ್ನು ವಹಿಸಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಜಮ್ಮು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ವಿವಿಧ ಜಿಲ್ಲೆಗಳ ಜನರ ತುರ್ತು ಸಂಪರ್ಕ ಸಂಖ್ಯೆಗಳು:
ಜಮ್ಮು – 0191-2571616
ಸಾಂಬಾ – 01923-241004, 01923-246915
ಕಥುವಾ – 01922-238796
ಪೂಂಚ್ – 01965-2200888
ರಾಜೌರಿ – 01962-295895
ಉಧಂಪುರ – 01992-272727, 01992-272728
ರಿಯಾಸಿ – 9419839557
ರಾಂಬನ್ – 01998-29550, 01998-266790
ದೋಡಾ – 9596776203
ಕಿಶ್ತ್ವಾರ್ – 9484217492
‘QR ಕೋಡ್’ ಸ್ಕ್ಯಾನ್ ಮಾಡಿ, ‘ಆಸ್ತಿ ಮಾಹಿತಿ, ನೋಂದಣಿ ಮತ್ತು ಬಾಡಿಗೆ ಒಪ್ಪಂದ’ ಪಡೆಯಿರಿ, ಸರ್ಕಾರದ ಹೊಸ ಯೋಜನೆ
WATCH VIDEO : ನದಿಗೆ ಜಾರಿಬಿದ್ದ ಇಬ್ಬರನ್ನ ರಕ್ಷಿಸಿದ ಕೇಂದ್ರ ಸಚಿವ ‘ಕಿರಣ್ ರಿಜಿಜು’, ನೆಟ್ಟಿಗರಿಂದ ಭಾರೀ ಪ್ರಶಂಸೆ