ಬೆಂಗಳೂರು: ಪರಿಸರ ಸ್ನೇಹಿ ಗಣಪತಿ ಆಚರಣೆಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಮಹತ್ವದ ಹೆಜ್ಜೆ ಇರಿಸಿದ್ದಾರೆ. ಇದರ ಭಾಗವಾಗಿ ಆಗಸ್ಟ್.26ರ ನಾಳೆ ಬೆಂಗಳೂರಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ಗಣಪತಿಯನ್ನು ವಿತರಣೆ ಮಾಡಲಿದ್ದಾರೆ.
ಕಳೆದ 10 ರಿಂದ 15 ವರ್ಷಗಳಿಂದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯರೆಡ್ಡಿ ಅವರು ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಣೆ ಮಾಡುತ್ತಾ ಬಂದಿದ್ದಾರೆ.
POP ಗಣಪಗಳ ವಿಸರ್ಜನೆಯಿಂದ ಮಾಲಿನ್ಯಕ್ಕೆ ಅದರಲ್ಲೂ ಜಲ ಮಾಲಿನ್ಯವಾಗುತ್ತದೆ. ಪರಿಸರ ಮಾಲಿನ್ಯ ತಡೆಗಟ್ಟುವುದು ಮತ್ತು ಅಂತರ್ಜಲದ ಗುಣಮಟ್ಟಕ್ಕೆ ಯಾವುದೇ ಹಾನಿಕಾರಕವಾಗದಂತೆ, ನೈಸರ್ಗಿಕ ಸಮತೋಲನ ಕಾಪಾಡುವಲ್ಲಿ ಸಹಕಾರಿಯಾಗುವ ಈ ಮಣ್ಣಿನ ಗಣಪತಿ ಸ್ಥಾಪನೆ ಮತ್ತು ವಿಸರ್ಜನೆಯ ಉಪಕ್ರಮವು, ಪರಿಸರ ಸ್ನೇಹಿಯಾಗಿದೆ.
ನಾಳೆ ಈ ಕೆಳಕಂಡ ಸ್ಥಳದಲ್ಲಿ ರಾಮಲಿಂಗಾರೆಡ್ಡಿ, ಸೌಮ್ಯಾ ರೆಡ್ಡಿ ಅವರು ಮಣ್ಣಿನ ಗಣಪತಿಯನ್ನು ಉಚಿತವಾಗಿ ವಿತರಣೆ
1. ದಿನಾಂಕ: 26.08.2025 ರಂದು ಬೆಳಿಗ್ಗೆ 8.30 ಕ್ಕೆ
ಶಾಸಕರ ಕಛೇರಿ, ಕೋರಮಂಗಲ
2. ಬೆಳಿಗ್ಗೆ 9.00 ಗಂಟೆಗೆ
ಎಲ್. ಐ. ಸಿ ಕಾಲೋನಿ, ಜಯನಗರ,
ನಾಗರಾಜ್ ರವರನೇತೃತ್ವದಲ್ಲಿ
3. ಬೆಳಿಗ್ಗೆ 9.30 ಕ್ಕೆ
ಸಾರಕ್ಕಿ, ಇಂದಿರಾಗಾಂಧಿ ಪ್ರತಿಮೆ ಬಳಿ
ಅರುಣ್ ಕುಮಾರ್ ರವರ ನೇತೃತ್ವದಲ್ಲಿ ಉಚಿತವಾಗಿ ಗಣಪತಿಗಳ ವಿತರಣೆ ನಡೆಯಲಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಚಿವ ರಾಮಲಿಂಗಾರೆಡ್ಡಿ, ಸೌಮ್ಯಾ ರೆಡ್ಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ತಹಶೀಲ್ದಾರ್ ಕೋರ್ಟ್ ವ್ಯಾಜ್ಯ 90 ದಿನ ಮೀರಿದರೆ ಶಿಸ್ತು ಕ್ರಮ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ.!
BIG NEWS : ಧರ್ಮಸ್ಥಳ ಕೇಸ್ ಶೇ.90ರಷ್ಟು ತನಿಖೆ ಮುಗಿದಿದೆ, ‘NIA, CBI’ ಅಗತ್ಯವಿಲ್ಲ: ಸಚಿವ ರಾಮಲಿಂಗಾರೆಡ್ಡಿ
BIG NEWS : ಧರ್ಮಸ್ಥಳ ಕೇಸ್ ಶೇ.90ರಷ್ಟು ತನಿಖೆ ಮುಗಿದಿದೆ, ‘NIA, CBI’ ಅಗತ್ಯವಿಲ್ಲ: ಸಚಿವ ರಾಮಲಿಂಗಾರೆಡ್ಡಿ