ಹಾಸನ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಯ್ಕೆ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದರು. ಇಂತಹ ಅವರಿಗೆ ಹಿಂದೂ ಸಂಪ್ರದಾಯದಂತೆ ಬಾಗಿನ ನೀಡಿ, ಆಹ್ವಾನಿಸಲಾಗಿದೆ. ಈ ಬಾಗಿನವನ್ನು ಖುಷಿಯಿಂದಲೇ ಬಾಗಿನವನ್ನು ಸ್ವೀಕರಿಸಿದರು.
ಇಂದು ಹಾಸನದಲ್ಲಿ ಹಿಂದೂ ಸಂಪ್ರದಾಯದಂತೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಕಲಾವಿದೆ ಶಶಿಕಲಾ ಬಾಗಿನ ನೀಡಿ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಆಹ್ವಾನಿಸಿದರು.
ಅರಿಶಿಣ, ಕುಂಕುಮ, ಬಳೆ, ಹೂ, ಸೀರೆಯನ್ನು ಬಾನು ಮುಷ್ತಾಕ್ ಅವರಿಗೆ ಕಲಾವಿದೆ ಶಶಿಕಲಾ ಅವರು ಬಾಗಿನದ ಜೊತೆಯಲ್ಲಿ ನೀಡಿದರು. ಖುಷಿಯಲ್ಲೇ ಬಾಗಿನವನ್ನು ಬಾನು ಮುಷ್ತಾಕ್ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರಿಸಿದಂತ ಅವರು, ಚಾಮುಂಡೇಶ್ವರಿ ತಾಯಿ ಅಂತೀರಿ. ಅದನ್ನ ಗೌರವಿಸ್ತೀನಿ. ನಾಡ ಹಬ್ಬ ಅಂತಾರೆ ಅದನ್ನೂ ನಾನು ಗೌರವಿಸುತ್ತೇನೆ ಎಂದರು.
ಪೋಷಕರ ಜೊತೆಗೆ ಜಂಬೂಸವಾರಿ ನೋಡಲು ಹೋಗಿದ್ದೆ. ಈಗ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು ಖುಷಿಯಾಗಿದೆ ಎಂದರು.
ಸುಪ್ರಸಿದ್ಧ ಸಾಗರದ ‘ಮಾರಿಕಾಂಬಾ ಜಾತ್ರಾ ಮಹೋತ್ಸವ’ಕ್ಕೆ ಮುಹೂರ್ತ ಫಿಕ್ಸ್
BIG NEWS : ಧರ್ಮಸ್ಥಳ ಕೇಸ್ ಶೇ.90ರಷ್ಟು ತನಿಖೆ ಮುಗಿದಿದೆ, ‘NIA, CBI’ ಅಗತ್ಯವಿಲ್ಲ: ಸಚಿವ ರಾಮಲಿಂಗಾರೆಡ್ಡಿ