ಬೆಂಗಳೂರು : ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಸಂಚಾರಿ ಇ-ಚಲನ್ ಮುಖಾಂತರ ದಾಖಲಾದ ಪ್ರಕರಣಗಳಲ್ಲಿ ಬಾಕಿ ದಂಡ ಪಾವತಿಗೆ ನೀಡಲಾಗಿರುವ ಶೇ.50ರಷ್ಟು ರಿಯಾಯಿತಿ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎರಡೇ ದಿನದಲ್ಲಿ ಬರೋಬ್ಬರಿ 7 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.
ಹೌದು, 2ನೇ ದಿನವಾದ ಭಾನುವಾರ 1.07 ಲಕ್ಷ ಪ್ರಕರಣಗಳಲ್ಲಿ 3.01 ಕೋಟಿ ರು. ದಂಡ ಸಂಗ್ರಹವಾಗಿದೆ. ಮೊದಲ ದಿನ 1.48 ಲಕ್ಷ ಪ್ರಕರಣಗಳಲ್ಲಿ 4.18 ಕೋಟಿ ರು. ದಂಡ ಸಂಗ್ರಹವಾಗಿತ್ತು. ಈ ಎರಡೂ ದಿನಗಳಲ್ಲಿ ಒಟ್ಟು 2.56 ಲಕ್ಷ ಪ್ರಕರಣಗಳಲ್ಲಿ 7.19 ಕೋಟಿ ರು. ದಂಡ ಸಂಗ್ರಹವಾಗಿದೆ.
ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಗಳ ಹಳೇ ಪ್ರಕರಣಗಳಲ್ಲಿ ಬಾಕಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ. ಸೆ.19ರ ವರೆಗೆ ಈ ಶೇ.50 ರಷ್ಟು ರಿಯಾಯಿತಿಗೆ ಅವಕಾಶ ಕಲಿಸಲಾಗಿದೆ.