ಧರ್ಮಸ್ಥಳ: ಧರ್ಮಸ್ಥಳದ ಬಗ್ಗೆ ಎಐ ವೀಡಿಯೋ ಮೂಲಕ ಅಪಪ್ರಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ.ಡಿ ಸಮೀರ್ ಅವರನ್ನು ಸತತ ಐದು ಗಂಟೆಗಳ ಕಾಲ ವಿಚಾರಣೆಯನ್ನು ಪೊಲೀಸರು ನಡೆಸಿದರು. ಇಂದಿನ ವಿಚಾರಣೆ ಅಂತ್ಯಗೊಂಡಿದ್ದು, ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.
ಇಂದು ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ ಅವರನ್ನು ವಿಚಾರಣೆ ನಡೆಸಲಾಯಿತು. ಬೆಳ್ತಂಗಡಿ ಪಿಎಸ್ಐ ಸುಬ್ಬಾಪುರ್ ಮಠ್ ಅವರಿಂದ ಸತತ 5 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
ಧರ್ಮಸ್ಥಳದ ಬಗ್ಗೆ ಎಐ ವೀಡಿಯೋ ಮೂಲಕ ಅಪಪ್ರಚಾರ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಬಳಿಕ, ಬೆನಕ ಆಸ್ಪತ್ರೆಯಲ್ಲಿ ಗಲಾಟೆ ಕೇಸ್ ಸಂಬಂಧ ವಿಚಾರಣೆ ನಡೆಸಿದ್ದಾಗಿ ತಿಳಿದು ಬಂದಿದೆ. ಅಲ್ಲದೇ ಖಾಸಗಿ ವಾಹಿನಿ ವರದಿಗಾರರ ಮೇಲೆ ಹಲ್ಲೆ ಕೇಸ್ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ. ಇದಕ್ಕೆ ಕಾರಣ ದೂರಿನಲ್ಲಿ ಸಮೀರ್ ಆಸ್ಪತ್ರೆಗೆ ಬಂದಿದ್ದ ಬಗ್ಗೆ ಉಲ್ಲೇಖಿಸಲಾಗಿದೆ.
ಇಂದು ಎಐ ವೀಡಿಯೋ ಕೇಸ್, ವರದಿಗಾರನ ಮೇಲಿನ ಹಲ್ಲೆ ಕೇಸ್, ಬೆನಕ ಆಸ್ಪತ್ರೆ ಗಲಾಟೆ ಕೇಸ್ ಗಳಲ್ಲಿ ಎರಡು ಕೇಸ್ ಬಗ್ಗೆ ವಿಚಾರಣೆ ನಡೆಸಲಾಗಿದ್ದು, ಬೆನಕ ಆಸ್ಪತ್ರೆ ಗಲಾಟೆ ಪ್ರಕರಣದ ವಿಚಾರಣೆ ಬಾಕಿ ಇದೆ. ಹೀಗಾಗಿ ನಾಳೆ ಬರುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ರೈತರಿಗೆ ಗುಡ್ ನ್ಯೂಸ್: ಹೈನುಗಾರಿಕೆಗೆ ಅರ್ಜಿ ಆಹ್ವಾನ, ದೊರೆಯಲಿದೆ 1.25 ಲಕ್ಷ ಸಹಾಯಧನ
BIG NEWS : ಸಂದರ್ಭ ಬಂದಾಗ ಡಿಸಿಎಂ ಡಿಕೆ ಶಿವಕುಮಾರ್ ‘CM’ ಆಗ್ತಾರೆ : ಸಚಿವ ಚೆಲುವರಾಯಸ್ವಾಮಿ ಹೇಳಿಕೆ