ಬೆಂಗಳೂರು : 50×80 ಅಡಿ ಅಳತೆವರೆಗಿನ ಕಟ್ಟಡಗಳ ನಿರ್ಮಾಣಕ್ಕೆ ಸ್ವಯಂಚಾಲಿತ ‘ನಂಬಿಕೆ ನಕ್ಷೆ’ ಯೋಜನೆಯಲ್ಲಿ ಒಂಬತ್ತು ಸಾವಿರ ನಕ್ಷೆಗಳನ್ನು ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಡಾವಣೆಗಳನ್ನು ನಿರ್ಮಿಸಿದ ನಂತರ ಕಂದಾಯ ನಿವೇಶನಗಳನ್ನು ಹಂಚಿ, ಅಲ್ಲಿರುವ ರಸ್ತೆಗಳು ಮಾಲೀಕನ ಹೆಸರಿನಲ್ಲಿ ಇದ್ದ ಅನೇಕ ಪ್ರಕರಣಗಳಿದ್ದವು. ಈ ಎಲ್ಲ ಖಾಸಗಿ ರಸ್ತೆಗಳನ್ನು ‘ಸರ್ಕಾರಿ ರಸ್ತೆಗಳು’ ಎಂದು ಘೋಷಣೆ ಮಾಡಲಾಗುತ್ತದೆ. 7.5 ಲಕ್ಷ ಬಿ ಖಾತೆಗಳನ್ನು ‘ಎ’ ಖಾತೆಗಳನ್ನಾಗಿ ಮಾಡಲಾಗುತ್ತದೆ. ‘ಅಭಿವೃದ್ದಿ ಹೊಂದಿದ ಜಮೀನು ’ ಎಂದು ಮಾರ್ಗಸೂಚಿ ದರದ ಶೇ 5.5ರಷ್ಟು ಶುಲ್ಕ ಪಾವತಿಸಿಕೊಂಡು ‘ಎ’ ಖಾತೆ ನೀಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
50×80 ಅಡಿ ಅಳತೆವರೆಗಿನ ಕಟ್ಟಡಗಳ ನಿರ್ಮಾಣಕ್ಕೆ ಸ್ವಯಂಚಾಲಿತ ‘ನಂಬಿಕೆ ನಕ್ಷೆ’ ಯೋಜನೆಯಲ್ಲಿ ಒಂಬತ್ತು ಸಾವಿರ ನಕ್ಷೆಗಳನ್ನು ನೀಡಲಾಗಿದೆ. ಬಡಾವಣೆಗಳನ್ನು ನಿರ್ಮಿಸಿದ ನಂತರ ಕಂದಾಯ ನಿವೇಶನಗಳನ್ನು ಹಂಚಿ, ಅಲ್ಲಿರುವ ರಸ್ತೆಗಳು ಮಾಲೀಕನ ಹೆಸರಿನಲ್ಲಿ ಇದ್ದ ಅನೇಕ ಪ್ರಕರಣಗಳಿದ್ದವು. ಈ ಎಲ್ಲ ಖಾಸಗಿ ರಸ್ತೆಗಳನ್ನು ‘ಸರ್ಕಾರಿ ರಸ್ತೆಗಳು’ ಎಂದು… pic.twitter.com/akhDiZrnrk
— DIPR Karnataka (@KarnatakaVarthe) August 23, 2025