ಬೆಂಗಳೂರು: ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ಅಂತ ಕಳೆದ ಒಂದು ತಿಂಗಳಿನಿಂದ ಸುದ್ದಿಯಲ್ಲಿದ್ದ ಸುಜಾತ ಭಟ್ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುಜಾತ ಭಟ್ ಹೇಳಿದ್ದಾರೆ. ಇದೇ ವೇಳೆ ಅವರು ಸಂದರ್ಶನದಲ್ಲಿ ನನಗೆ ಮಗಳು ಇರಲಿಲ್ಲ, ನನಗೆ ಕೆಲವು ವ್ಯಕ್ತಿಗಳು ಹೇಳುವಂತೆ ಹೇಳಿದರು. ಹಾಗಾಗಿ ನಾನು ಹೇಳಿದೆ ಅಂತ ಹೇಳಿದರು. ಆ ವ್ಯಕ್ತಿಗಳು ಗಿರೀಶ್ ಮಟ್ಟಣ್ಣ, ತಿಮರೋಡಿ ಅಂತ ಸುಜಾತ ಭಟ್ ಹೇಳಿದ್ದಾರೆ. ಇದೇ ವೇಳೆ ಅವರು ನಾನು ಆಸ್ತಿ ಸಲುವಾಗಿ ಆ ರೀತಿಯ ಸುಳ್ಳು ಹೇಳಬೇಕಾದ ಸನ್ನಿವೇಶ ಕಂಡು ಬಂತು. ಇದಲ್ಲದೇ ನನ್ನ ತಾತಾನ ಆಸ್ತಿಯನ್ನು ನನ್ನ ಗಮನಕ್ಕೆ ತಾರದೇ ನೀಡಲಾಗಿದೆ. ನನಗೂ ಕೂಡ ಆಸ್ತಿಯಲ್ಲಿ ಹಕ್ಕು ಇದೇ ಇದಲ್ಲದೇ ನನ್ನ ಸಹಿ ಕೂಡ ಆಸ್ತಿಯನ್ನು ನೀಡುವಾಗ ನನ್ನ ಗಮನಕ್ಕೆ ತರಲಿಲ್ಲ ಈ ಸಿಟ್ಟಿನಿಂದ ಅವರು ಹೇಳಿದ ಹಾಗೇ ನಾನು ಮಾಡಿದೆ ಅಂತ ಸುಜಾತ ಭಟ್ ಹೇಳಿದ್ದಾರೆ. ಇದೇ ವೇಳೆ ಅವರು ಕ್ಷಮಿಸಿ ಅಂತ ಮಾಧ್ಯಮದ ಮೂಲಕ ಅವರು ಹೇಳಿದ್ದಾರೆ.