ಬೆಂಗಳೂರು: ಆರ್.ಸಿ.ಬಿ. ವಿಜಯೋತ್ಸವ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿರೋಧಪಕ್ಷದಿಂದ ಮಂಡಿಸಲಾದ ನಿಲುವಳಿ ಸೂಚನೆಗೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉತ್ತರಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಾನ್ಯ ಸದಸ್ಯರುಗಳು ದಿನಾಂಕ 11-8-2025 ರಂದು ಆರ್.ಸಿ.ಬಿ. ವಿಜಯೋತ್ಸವ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಲುವಳಿ ಸೂಚನೆ ನೀಡಿರುತ್ತಾರೆ. ಸದರಿ ನಿಲುವಳಿಯನ್ನು ಮಾನ್ಯ ಸಭಾಧ್ಯಕ್ಷರು ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ನೀಡಿದ್ದರು.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಸದಸ್ಯರಾದ ಶ್ರೀ ಸುರೇಶ್ ಕುಮಾರ್, ಜೆಡಿಎಸ್‍ನ ಎಂ.ಟಿ ಕೃಷ್ಣಪ್ಪ ಅವರು ಮಾತನಾಡಿದ್ದಾರೆ. ಸುರೇಶ್ ಕುಮಾರ್ ಅವರು ಕಡಿಮೆ ಮಾತನಾಡಿದರೂ ಶೇಕ್ಸ್‍ಸ್ಪೀಯರ್ ಜೂಲಿಯಸ್ ಸೀಸರ್ ನಾಟಕದಲ್ಲಿ ಮಾರ್ಕ್ ಆಂಟನಿಯ ಭಾಷಣದಂತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆಂಟನಿ, ಮಾತುಗಳ ಮೂಲಕವೇ ದಂಗೆ ಎಬ್ಬಿಸಲು ಪ್ರಯತ್ನಿಸಿದ ಮಾತುಗಾರ. ಆರ್. ಅಶೋಕ್ ಅವರು ಬಹುಶಃ ಜೂನ್ 4 ರಿಂದಲೇ ಹೇಗೆ ಮಾತನಾಡಬೇಕೆಂದು ತಯಾರಿ ಮಾಡಿಕೊಂಡ ಹಾಗೆ ಕಾಣುತ್ತದೆ. ಒಬ್ಬ ರಾಜಕಾರಣಿ ಹೇಗೆ ಮಾತನಾಡಬೇಕೊ ಹಾಗೆ ಮಾತನಾಡಿದ್ದಾರೆ. ತನ್ನ ವಾದ ಸರಣಿಗೆ ಪೂರಕವಾದ ವಿಚಾರಗಳನ್ನು ಪ್ರಸ್ತಾಪಿಸಿದರು. ಅಡ್ಡವಾಗುವ ಅನೇಕ ವಿಚಾರಗಳನ್ನು ಕೈ ಬಿಟ್ಟರು. ಪೆÇಲೀಸರು, ಆರ್.ಸಿ.ಬಿ ಮತ್ತು ಕೆ.ಎಸ್.ಸಿ.ಎ ಗಳನ್ನು ಕ್ರಿಟಿಸೈಜ್ ಮಾಡಿದಂತೆ ಕಂಡರೂ ಅವರ ಪರವಾಗಿ ವಾದ ಮಾಡುವ ವಕೀಲರಂತೆಯೂ ಮಾತನಾಡಿದರು. ಅಶೋಕ್ ವೈರ್‍ಲೆಸ್ ಮಸೇಜ್ ಅಂತ ಏನು ಹೇಳಿದರೊ ಅದರ ಬಹುಪಾಲು ಅಂಶಗಳನ್ನು ಜಸ್ಟೀಸ್ ಮೈಖೇಲ್ ಕುನ್ಹಾ ವರದಿಯಲ್ಲಿ ಪ್ರಸ್ತಾಪ ಮಾಡಿರುವ ಕ್ರೋನಾಲಜಿಯನ್ನು ಆಧರಿಸಿಯೇ ಮಾತನಾಡಿದ್ದಾರೆ.
ನಾನು ಘಟನೆ ನಡೆದ ದಿನವೇ ತೀವ್ರ ವಿμÁದ ವ್ಯಕ್ತಪಡಿಸಿದ್ದೇನೆ. ನಾನು ಮುಖ್ಯಮಂತ್ರಿಯಾಗುವ ಮೊದಲು ಒಬ್ಬ ಮನುಷ್ಯ. ಮಕ್ಕಳನ್ನು ಕಳೆದುಕೊಂಡ ಪಾಲಕರಿಗೆ ದುಃಖದ ಭಾರ ಏನು ಎಂಬ ಅರಿವು ನನಗಿದೆ. ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಈ ಘಟನೆ ನನ್ನನ್ನು ತೀವ್ರವಾಗಿ ಡಿಸ್ಟರ್ಬ್ ಮಾಡಿದೆ. ಮುಖ್ಯಮಂತ್ರಿಯಾಗದೇ ಇದ್ದಿದ್ದರೂ ಸಹ ಮನುಷ್ಯನಾದ ಕಾರಣಕ್ಕೆ ನನ್ನನ್ನು ದುಃಖಿತನನ್ನಾಗಿ ಮಾಡುತ್ತಿತ್ತು ಎಂಬುದನ್ನು ಅಂತಃಕರಣ ಪೂರ್ವಕವಾಗಿ ತಿಳಿಸಬಯಸುತ್ತೇನೆ.
ವ್ಯವಸ್ಥೆಯಲ್ಲಿನ ಲೋಪಗಳಿಂದ ವಿನಾಕಾರಣ ದುರಂತಕ್ಕೀಡಾದ ಮಕ್ಕಳಾಗಲಿ, ಕುಟುಂಬಗಳ ಸದಸ್ಯರಾಗಲಿ ಬದುಕಿರುವವನ್ನು ಶಾಶ್ವತ ದುಃಖದಲ್ಲಿ ಮುಳುಗಿಸುತ್ತವೆ. ಮಕ್ಕಳು ಬದುಕಿದ್ದರೆ ಯಾರ್ಯಾರು ಯಾವ ಯಾವ ಸಾಧನೆ ಮಾಡುತ್ತಿದ್ದರೋ ಯಾರಿಗೆ ಗೊತ್ತು?
ಸುರೇಶ್ ಕುಮಾರ್ ಅವರು ಸರ್ಕಾರವನ್ನು ಅಬೆಟರ್ ಎಂದು ಕರೆದರು. ಅವರು ಹಾಗೆ ಕರೆದದ್ದು ತಪ್ಪು ಸರಿಯೋ ಸದಸ್ಯರು ಮತ್ತು ಜನರು ತೀರ್ಮಾನಿಸುತ್ತಾರೆ. ನಾವು ಆಡಳಿತ ಪಕ್ಷದಲ್ಲಿ ಇರುವ ಕಾರಣ ನೀವು ಟೀಕೆ ಮಾಡುವುದು ಸಹಜ. ಈಗಾಗಲೇ ಗೃಹಸಚಿವ ಪರಮೇಶ್ವರ್ ಅವರು ಉತ್ತರವನ್ನು ಕೊಟ್ಟಿದ್ದಾರೆ.
ಈ ವಿಚಾರವನ್ನು ಆಡಳಿತ ಪಕ್ಷ-ವಿರೋಧ ಪಕ್ಷ, ಮಾಧ್ಯಮ, ಜನರು ಎಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ ವಿಚಾರ ಎಂದು ನಾನು ಭಾವಿಸಿದ್ದೇನೆ. ಭಕ್ತಿ, ವ್ಯಕ್ತಿ ಆರಾಧನೆ ಎಂಬುದು ಈ ದೇಶದಲ್ಲಿ ಬಹಳ ಸುಲಭವಾಗಿ ಸಂಭವಿಸುವ ವಿಷಯ ಎಂದು ಬಾಬಾ ಸಾಹೇಬ್ ಅಂಬೇಡ್ಕರರು ನವೆಂಬರ್ 25, 1949ರ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ಘಟನೆಗಳನ್ನು ನೋಡಿದರೆ ಅನೇಕ ಸಾರಿ ಆತಂಕವಾಗುತ್ತದೆ. ಜನರ ಮನಸ್ಸನ್ನು ಉನ್ಮಾದಗ್ರಸ್ತ ಮನಸ್ಥಿತಿಗೆ ಕೊಂಡೊಯ್ಯುವವರೂ ಕೂಡ ಈ ದುರಂತಕ್ಕೆ ಕಾರಣ ಅಲ್ಲವೇ ಎಂದು ನಾನು ಕೇಳಬಯಸುತ್ತೇನೆ.
ನಾನು ಯಾವ ಯಾವ ಸಂದರ್ಭದಲ್ಲಿ ಕಾಲ್ತುಳಿತ ಪ್ರಕರಣಗಳು ಸಂಭವಿಸಿವೆ ಎಂದು ನೋಡಿದೆ. ಸಾಮಾನ್ಯವಾಗಿ 3 ಸಂದರ್ಭಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಧಾರ್ಮಿಕ ಸ್ಥಳಗಳಲ್ಲಿ ಸೇರುವ ಜನಜಂಗುಳಿ, ಕ್ರೀಡೆ ಅಥವಾ ಇನ್ಯಾವುದೇ ರೀತಿಯ ಆಚರಣೆಗಳು ಅಥವಾ ಶೋಕಾಚರಣೆಗಳ ಸಂದರ್ಭದಲ್ಲಿ ಮತ್ತು ಭಯದಿಂದ ತಪ್ಪಿಸಿಕೊಂಡು ಓಡುವಾಗ ಕಾಲ್ತುಳಿತಗಳಾಗಿವೆ. ಬಿಜೆಪಿ ಸರ್ಕಾರ ಇರುವಾಗಲೇ ಅಂತಹ ಹಲವು ಕಾಲ್ತುಳಿತ ಪ್ರಕರಣಗಳು ನಡೆದಿವೆ. ಮರಣಗಳು ಸಂಭವಿಸಿವೆ.
ಸುರೇಶ್ ಕುಮಾರ್ ನಮಗೆ ಅಬೆಟರ್ ಎನ್ನುವ ಮೊದಲು ನಾನು ಎಷ್ಟು ಪ್ರಕರಣಗಳಲ್ಲಿ ಅಬೆಟರ್ ಆಗಿದ್ದೆ ಎಂಬುದು ಸುರೇಶ್ ಅವರ ಮನಸ್ಸಿಗೆ ಬರಲಿಲ್ಲ. ಆರ್. ಅಶೋಕ್ ಮತ್ತು ಸುರೇಶ್ ಕುಮಾರ್ ರವರು ಮಾತನಾಡುವಾಗ ಸಮೂಹ ಸನ್ನಿ ಎಂಬ ಪದವನ್ನು ಬಳಸಿದರು. ಅದನ್ನು ಇಂಗ್ಲೀಷಿನಲ್ಲಿ ಒಚಿss ಊಥಿsಣeಡಿiಚಿ ಎನ್ನುತ್ತಾರೆ. ಈ ಸಮೂಹ ಸನ್ನಿ ಯಾಕಾಗುತ್ತದೆ. ಅದು ಬಡ ದೇಶ ಇರಲಿ, ಶ್ರೀಮಂತ ದೇಶ ಇರಲಿ ಎಲ್ಲಾ ಸಮಾಜಗಳಲ್ಲಿಯೂ ಸಂಭವಿಸುವ ಕಾಯಿಲೆ ಯಾಕಾಗಿದೆ? ಮತ್ತು ಅದಕ್ಕೆ ನೀಡಬೇಕಾದ ಚಿಕಿತ್ಸೆಗಳೇನು ಎನ್ನುವ ಬಗ್ಗೆ ನಾವುಗಳೆಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ.
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾದ 18 ವರ್ಷಗಳಲ್ಲಿ ಆರ್.ಸಿ.ಬಿ. ಟ್ರೋಫಿ ಗೆದ್ದಿರಲಿಲ್ಲ. 2025 ರಲ್ಲಿ ನಡೆದ ಆವೃತ್ತಿಯಲ್ಲಿ ಮಾತ್ರ ಟ್ರೋಫಿ ಗೆದ್ದಿತ್ತು. ಆರ್.ಸಿ.ಬಿ. ಮಾಲೀಕರು ಯಾರು ಎಂಬ ಸಂಗತಿ ನಗಣ್ಯವಾಗಿ ಬೆಂಗಳೂರು ಮತ್ತು ಕರ್ನಾಟಕ ವರ್ಸಸ್ ಪಂಜಾಬ್ ಎನ್ನುವ ಮನೋಭಾವನೆ ಉದ್ಭವವಾಗಿದೆ. ಕರ್ನಾಟಕದ ಬೆಂಗಳೂರಿನ ಹೆಸರನ್ನಿಟ್ಟುಕೊಂಡು ಆಟವಾಡುವ ತಂಡ, ಕರ್ನಾಟಕಕ್ಕೇ ಆಟವಾಡುತ್ತಿದೆ ಎಂಬ ಭಾವನಾತ್ಮಕವಾದ ಮನಸ್ಥಿತಿಯನ್ನು ಮಾಧ್ಯಮಗಳು ಹಾಗೂ ಸಮಾಜ ಜನರಲ್ಲಿ ಕಟ್ಟಿ ಬೆಳೆಸಿವೆ. ಇದμÉ್ಟ ಅಲ್ಲದೆ, ಐ.ಪಿ.ಎಲ್. ಕ್ರಿಕೆಟ್ ತಂಡಗಳಲ್ಲಿ ಜಗತ್ತಿನಲ್ಲಿಯೆ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಆರ್.ಸಿ.ಬಿ. ಸಹ ಒಂದಾಗಿದೆ. ಹಾಗಾಗಿ ಯುವಜನರಲ್ಲಿ ಈ ಹುಚ್ಚು ಉನ್ಮಾದ ತುಂಬಿ ತುಳುಕುತ್ತಿದೆ.
ಅನೇಕ ಸಾರಿ ನಾವು ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ಆತ್ಮಸಾಕ್ಷಿಗಳಿಗೆ ಒಪ್ಪದಿದ್ದರೂ ಕೆಲವೊಮ್ಮೆ ಜನರ ಆಶೋತ್ತರಗಳು ಮುಖ್ಯವಾಗುತ್ತವೆ. ಇದು ಪ್ರಜಾಪ್ರಭುತ್ವದ ಲಕ್ಷಣ ಕೂಡ. ಆರ್.ಸಿ.ಬಿ. ಬೆಂಗಳೂರಿನ ಅಸ್ಮಿತೆ ಅμÉ್ಟ ಅಲ್ಲ. ಕರ್ನಾಟಕದ ಅಸ್ಮಿತೆ ಎಂಬಂತೆ ಮಾಡಲಾಯಿತು. ಹಾಗಾಗಿ ಆರ್.ಸಿ.ಬಿ. ಗೆದ್ದಾಗ ಫೆಲಿಸಿಟೇಟ್ ಮಾಡಲಿಲ್ಲ ಎಂದರೆ ಕನ್ನಡಿಗರ ಭಾವನೆಗಳಿಗೆ ಮಾಡಿದ ಅವಮಾನ ಎಂಬಂತೆ ಬಿಂಬಿಸಲು ಪ್ರಯತ್ನಿಸಲಾಯಿತು. ಹಾಗಾಗಿ ಜನರ ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಆದ್ಯತೆ ಕೂಡ.
ಸುರೇಶ್ ಕುಮಾರ್ ಮತ್ತು ಆರ್. ಅಶೋಕ್ ಅವರು ಆರ್.ಸಿ.ಬಿ. ತಂಡದ ಮಾಲೀಕರು ವಿಜಯ ಮಲ್ಯ, ಡಿಯಾಜಿಯೋ ಕಂಪನಿ ಇತ್ಯಾದಿ ಮಾತನಾಡಿದರು. ಅವರ ಕೆಲವು ಮಾತುಗಳಿಗೆ ನನ್ನ ಸಹಮತ ಇದೆ. ಆದರೆ, 2022 ರ ಮೇ 29 ರಂದು ಕೊರೋನಾ ಕಾಯಿಲೆಯು ಉತ್ತುಂಗ ಸ್ಥಿತಿಯಲ್ಲಿದ್ದಾಗ, ದೇಶದಲ್ಲಿ ಜನರು ಆಕ್ಸಿಜನ್ ಇಲ್ಲದೆ, ಔಷಧಿಗಳಿಲ್ಲದೆ, ವೆಂಟಿಲೇಟರ್‍ಗಳು ಇಲ್ಲದೇ ಸಾಯುವಂತಹ ಸ್ಥಿತಿಯಲ್ಲಿದ್ದಾಗ ಗುಜರಾತ್‍ನಲ್ಲಿ ಗುಜರಾತ್ ಟೈಟನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಗೆದ್ದಿತು. ಅಹಮದಾಬಾದ್‍ನ ನರೇಂದ್ರ ಮೋದಿ ಸೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಸದರಿ ಪಂದ್ಯಕ್ಕೆ ಅಮಿತ್ ಶಾ ಅವರು ಹೋಗಬೇಕೋ, ಮೋದಿಯವರು ಹೋಗಬೇಕೋ ಎಂಬ ಚರ್ಚೆ ನಡೆದು ಕೊನೆಗೆ ಅಮಿತ್ ಶಾ ಅವರು ತಮ್ಮ ಪತ್ನಿ ಸೋನಲ್ ಶಾ ಅವರು, ಗುಜರಾತ್‍ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಇತರೆ ನಾಯಕರುಗಳು, ಸಚಿವರುಗಳ ಜೊತೆ ಮ್ಯಾಚ್ ನೋಡಿದರು. ಮ್ಯಾಚ್ ನೋಡಿದ್ದು ಅμÉ್ಟ ಅಲ್ಲ, ಗುಜರಾತ್‍ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಆಜಾದಿ ಕಾ ಅಮೃತ್ ಮಹೋತ್ಸವ್ ಮತ್ತು ಭಾರತದ ಹೆಮ್ಮೆಯ ಲಾಂಛನಗಳುಳ್ಳ ವೇದಿಕೆಯಲ್ಲಿ ಟ್ರೋಫಿ ನೀಡಿದರು. ಮತ್ತು ಅಹಮದಾಬಾದ್‍ನ ಬೀದಿಗಳಲ್ಲಿ ಮೆರವಣಿಗೆ ಮಾಡಲು ಅವಕಾಶ ಕೊಟ್ಟರು. ಇದರಿಂದ ಕೊರೋನಾ ಸೋಂಕು ಇನ್ನಷ್ಟು ಹೆಚ್ಚಲು ಕಾರಣವಾಯಿತು. ಮೋದಿಯವರು 2020ರ ಫೆಬ್ರವರಿಯಲ್ಲಿ ದೇಶದಲ್ಲಿ ಕೊರೋನಾ ಹರಡುತ್ತಿದ್ದಾಗ ಟ್ರಂಪ್ ಕರೆದುಕೊಂಡು ‘ಹೌಡಿ ಮೋದಿ’ ಕಾರ್ಯಕ್ರಮ ಮಾಡಿ, ಕೊರೋನಾ ಹರಡಿ ಲಕ್ಷಾಂತರ ಜನರ ಸಾವಿಗೆ ಕಾರಣರಾದರು. ಸುರೇಶ್ ಕುಮಾರ್ ಅವರು ಮೋದಿಯವರನ್ನು, ಟ್ರಂಪ್ ಅವರನ್ನು, ಭೂಪೇಂದ್ರ ಪಟೇಲರನ್ನು ಅಬೇರ್ಸ್ ಎಂದು ಕರೆಯುವರೇ?
ಆರ್.ಸಿ.ಬಿ. ತಂಡದ ಮಾಲೀಕರ ಹಿನ್ನೆಲೆ ಸರಿ ಇಲ್ಲ, ಒಪ್ಪುತ್ತೇನೆ. ಆದರೆ ಗುಜರಾತ್ ಟೈಟನ್ಸ್ ತಂಡದ ಮಾಲೀಕರಾದ ಟೊರೆಂಟ್ ಗ್ರೂಫ್‍ನ ಮೆಹ್ತಾ ಕುಟುಂಬದ ಹಿನ್ನೆಲೆ ಸರಿ ಇದೆಯೇ? ಎಂದು ನೋಡಿದರೆ, ಟೊರೆಂಟ್ ಗ್ರೂಫ್‍ನ ಔಷಧಿ, ವಿದ್ಯುತ್, ಹಣಕಾಸಿಗೆ ನಡೆದ ಫ್ರಾಡ್ಗಳಿಗೆ ಸಂಬಂಧಿಸಿದಂತೆ ಸೆಬಿ ಸಂಸ್ಥೆಯು ಕೇಸ್‍ಗಳನ್ನು ಬುಕ್ ಮಾಡಿತ್ತು. ಆನಂತರ ಪ್ರಭಾವ ಬೀರಿ ಕೇಸ್‍ಗಳಿಂದ ಮುಕ್ತ ಮಾಡಲಾಯಿತು. ಗುಜರಾತ್ ಟೈಟನ್ಸ್‍ನ ಇನ್ನೊಬ್ಬ ಪಾಲುದಾರರಾದ ಸಿವಿಸಿ ಸಂಸ್ಥೆಯ ಮೇಲೂ ಗಂಭೀರವಾದ ಆರೋಪಗಳಿವೆ ಎಂಬುದು ವಿರೋಧ ಪಕ್ಷಗಳವರಿಗೆ ತಿಳಿದಿರಲಿ ಎಂದು ಹೇಳಿದರು.
ಸನ್ಮಾನ್ಯ ಸುರೇಶ್ ಕುಮಾರ್ ಅವರೆ, ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತೇನೆ. 2006 ರಲ್ಲಿ ಡಾ. ರಾಜ್‍ಕುಮಾರ್ ರವರು ಮೃತರಾದಾಗ ಗೋಲಿಬಾರ್‍ನಲ್ಲಿ, ಕಾಲ್ತುಳಿತದಲ್ಲಿ ಜನರು ಮರಣ ಹೊಂದಿದಾಗ ನಿಮ್ಮ ಸರ್ಕಾರ ಜೆಡಿಎಸ್ ಜೊತೆ ಸೇರಿಕೊಂಡಿತ್ತು. ಆಗ ನಿಮ್ಮ ಸರ್ಕಾರವನ್ನು ಹಾಗೂ ಅಂದಿನ ಮುಖ್ಯಮಂತ್ರಿಯವರನ್ನು ಅಬೇರ್ಸ್ ಎಂದು ಕರೆದ್ರಾ? ಹಾವೇರಿಯಲ್ಲಿ ಗೊಬ್ಬರ ನೀಡದೆ ರೈತರ ಮೇಲೆ ಗುಂಡು ಹಾರಿಸಿ ಕೊಂದಾಗ ನಿಮ್ಮ ಸರ್ಕಾರವನ್ನು ಹಾಗೂ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರನ್ನು ಅಬೇರ್ಸ್ ಎಂದು ಕರೆಯುವ ಧೈರ್ಯ ಮಾಡಿದ್ರಾ? 2022 ರ ಮೇ, 2 ರಂದು ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 32 ಜನ ಮರಣ ಹೊಂದಿದಾಗ ನೀವು ಬಸವರಾಜ ಬೊಮ್ಮಾಯಿಯವರನ್ನು ಹಾಗೂ ಅಂದಿನ ಆರೋಗ್ಯ ಸಚಿವರನ್ನು ಅಬೇರ್ಸ್ ಎಂದು ಕರೆದ್ರಾ? ಉತ್ತರ ಪ್ರದೇಶದಲ್ಲಿ, ದೆಹಲಿಯಲ್ಲಿ, ಗುಜರಾತ್‍ನಲ್ಲಿ, ಮಹಾರಾಷ್ಟ್ರದಲ್ಲಿ, ಗೋವಾದಲ್ಲಿ, ಮಧ್ಯಪ್ರದೇಶದಲ್ಲಿ ಕಾಲ್ತುಳಿತದಲ್ಲಿ, ಸೇತುವೆಗಳ ಕುಸಿತದಲ್ಲಿ ನೂರಾರು ಜನರು ಮರಣ ಹೊಂದಿದಾಗ ಅಲ್ಲಿನ ಬಿಜೆಪಿ ಮುಖ್ಯಮಂತ್ರಿಗಳನ್ನು ಅಬೇರ್ಸ್ ಎಂದು ಕರೆದ್ರಾ? ಹಾಗೆ ನೀವು ಕರೆಯುವುದಾದರೆ ಇವುಗಳು ಕೊನೆ-ಮೊದಲಿಲ್ಲದ ಪ್ರಶ್ನೆಗಳಾಗುತ್ತವೆ. ಆಕ್ಸಿಜನ್ ದುರಂತಕ್ಕೆ ಕಾರಣರಾದವರಿಗೆ ಯಾವ ಶಿಕ್ಷೆ ಕೊಟ್ಟಿತ್ತು? ಯಾರನ್ನು ಅಮಾನತ್ತು ಮಾಡಿದ್ದಿರಿ? ಗಿಲ್ಟಿ ಯಾರು ಎಂದು ಪತ್ತೆ ಹಚ್ಚಿದಿರಿ? ನಾನು ಬಿಜೆಪಿ ರಾಜ್ಯಗಳಲ್ಲಿ ಕಾಲ್ತುಳಿತಗಳು ಸಂಭವಿಸಿ ಮರಣ ಹೊಂದಿದ ಪ್ರಕರಣಗಳ ಕುರಿತು ಪರಿಶೀಲಿಸಿದಾಗ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಶಿಕ್ಷೆಯನ್ನೂ ಕೊಟ್ಟಿಲ್ಲ, ಬಹುಪಾಲು ಪ್ರಕರಣಗಳಲ್ಲಿ ಸಮರ್ಪಕ ತನಿಖೆಯೂ ಆಗಲಿಲ್ಲ. 2002 ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡಗಳ ಜವಾಬ್ದಾರಿಯನ್ನು ಯಾರ ತಲೆಗೆ ಕಟ್ಟುತ್ತೀರಿ? ಯಾರನ್ನು ಅಬೇರ್ಸ್ ಎಂದು ಅಥವಾ ಮರ್ಡರ್ಸ್ ಎಂದು ಕರೆಯುತ್ತೀರಿ? ಎಂಬುದನ್ನು ಸ್ಪಷ್ಟಪಡಿಸಬೇಕು.
ನಿಮ್ಮ ಸರ್ಕಾರಗಳ ಹಾಗೆ ದುರಂತ ನಡೆದ ಮೇಲೆ ನಾವು ಕೈಕಟ್ಟಿ ಕೂರಲಿಲ್ಲ. ತಕ್ಷಣವೇ 04.06.2025 ರಂದೇ ಸರ್ಕಾರದ ಆದೇಶ ಸಂಖ್ಯೆ: ಹೆಚ್.ಡಿ./218/ಪಿಸಿಇ/2025, ದಿನಾಂಕ: 04.06.2025 ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖೆ ಮಾಡಲು ಆದೇಶ ಹೊರಡಿಸಲಾಯಿತು ಮತ್ತು ಆದೇಶ ಸಂಖ್ಯೆ ಹೆಚ್ಡಿ/220/ಪಿಸಿಇ/2025, ದಿನಾಂಕ: 05.06.2025 ರಂದು ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರ ಏಕಸದಸ್ಯರ ತನಿಖಾ ಆಯೋಗವನ್ನು ನೇಮಿಸಿ ಆದೇಶಿಸಲಾಯಿತು.
ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರು ದಿನಾಂಕ: 10.07.2025 ರಂದು ತಮ್ಮ ವರದಿಯನ್ನು ಹಾಗೂ ಬೆಂಗಳೂರು ಜಿಲ್ಲಾಧಿಕಾರಿಗಳು ದಿನಾಂಕ: 11.07.2025 ರಂದು ತಮ್ಮ ಮೆಜೆಸ್ಟೀರಿಯಲ್ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಈ ಎರಡೂ ವರದಿಗಳಲ್ಲೂ ಆರ್.ಸಿ.ಬಿ. ಡಿ.ಎನ್.ಎ., ಕೆ.ಎಸ್.ಸಿ.ಎ. ಮತ್ತು ನಗರ ಪೆÇಲಿಸರು ಮಾಡಿದ ಎಡವಟ್ಟುಗಳಿಂದ ಈ ದುರಂತ ಸಂಭವಿಸಿತು ಎಂಬುದು ಸ್ಪಷ್ಟವಾಗಿದೆ. ನಾವು ಘಟನೆ ನಡೆದ ಕೂಡಲೇ ಸಂಬಂಧಪಟ್ಟ ಪೆÇಲಿಸ್ ಕಮೀಷನರ್ ನಿಂದ ಹಿಡಿದು ಪೆÇಲೀಸ್ ಇನ್ಸ್‍ಫೆಕ್ಟರ್ ವರೆಗೆ ಅಮಾನತ್ತು ಮಾಡಿ ಆದೇಶ ಹೊರಡಿಸಿದೆವು ಹಾಗೂ ಆರ್.ಸಿ.ಬಿ., ಡಿ.ಎನ್.ಎ. ಹಾಗೂ ಕೆ.ಎಸ್.ಸಿ.ಎ. ಗಳ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆವು. ತನಿಖಾ ವರದಿಗಳ ಪ್ರಕಾರ ಆರ್.ಸಿ.ಬಿ. ಯು 04.06.2025 ರಂದು ಬೆಳಿಗ್ಗೆ 07 ಗಂಟೆ 01 ನಿಮಿಷಕ್ಕೆ ವಿಜಯೋತ್ಸವ ಆಚರಣೆ ಮಾಡುವ ಬಗ್ಗೆ ಟ್ವೀಟ್ ಅನ್ನು 16 ಲಕ್ಷ ಜನ ವೀಕ್ಷಿಸಿದ್ದರು. 8 ಗಂಟೆಗೆ ಮಾಡಿದ್ದ ಟ್ವೀಟ್ ಅನ್ನು 4 ಲಕ್ಷದ 35 ಸಾವಿರ ಜನ ನೋಡಿದ್ದರು. ಮೂರನೇ ಟ್ವೀಟ್ 03 ಗಂಟೆ 10 ನಿಮಿಷಕ್ಕೆ ಮಾಡಲಾಯಿತು, ಅದನ್ನು 7.10 ಲಕ್ಷ ಜನರು ನೋಡಿದ್ದರು. ಆರ್.ಸಿ.ಬಿ., ಡಿ.ಎನ್.ಎ. ಮತ್ತು ಕೆ.ಎಸ್.ಸಿ.ಎ. ಅವರಿಗೆ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಲು ಸರ್ಕಾರ ಅನುಮತಿ ಕೊಟ್ಟಿರಲಿಲ್ಲ ಎಂದು ವಿಧಾನಸಭೆಯಲ್ಲಿ ಉತ್ತರಿಸಿದರು.