ಬೆಂಗಳೂರು : ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರು ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿ ಕೊಡಗು ಮೂಲದ ರೋಷನ್ ಜೊತೆ ಆ.28 ರಂದು ಮದುವೆಯಾಗಲಿದ್ದಾರೆ.
ರೋಷನ್ ರಾಮಮೂರ್ತಿ ಅವರ ಪುತ್ರನಾಗಿದ್ದಾರೆ. ಬೆಳಗ್ಗೆ 10:56 ಶುಭ ಮುಹೂರ್ತದಲ್ಲಿ ಅನುಶ್ರಿ ರೋಷನ್ ಅವರ ಕೈ ಹಿಡಿಯಲಿದ್ದಾರೆ. ಬೆಂಗಳೂರು ಮೂಲದ ಕಾರ್ಪೋರೇಟ್ ಉದ್ಯೋಗಿ ಜೊತೆ ಅವರು ವಿವಾಹ ಆಗುತ್ತಿದ್ದಾರೆ. ಹಾಗಾದರೆ ಇದು ಲವ್ ಮ್ಯಾರೇಜಾ? ಅಲ್ಲಾ ಪಕ್ಕಾ ಅರೇಂಜ್ ಮ್ಯಾರೇಜ್ ಎನ್ನುತ್ತಿವೆ ಮೂಲಗಳು. ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ವಿವಾಹ ಆಗುತ್ತಿದ್ದಾರಂತೆ. ಬೆಂಗಳೂರಿನಲ್ಲೇ ಈ ವಿವಾಹ ಗ್ರಾಂಡ್ಆಗಿ ನೆರವೇರಲಿದೆ ಎನ್ನಲಾಗುತ್ತಿದೆ.
ಪ್ರಸಿದ್ಧ ಕನ್ನಡ ಆ್ಯಂಕರ್ ಅನುಶ್ರೀ ಅವರ ಮದುವೆಯ ಸುದ್ದಿ ಈಗ ಅಧಿಕೃತವಾಗುತ್ತಿದೆ. ಆಗಸ್ಟ್ 28ಕ್ಕೆ ಅವರ ವಿವಾಹ ನಡೆಯಲಿದೆ ಎಂದು ವರದಿಗಳಿವೆ. ಬೆಂಗಳೂರಿನ ಕಾರ್ಪೋರೇಟ್ ಉದ್ಯೋಗಿಯೊಂದಿಗೆ ಅವರ ವಿವಾಹ ನಡೆಯುವ ಸಾಧ್ಯತೆ ಇದೆ.