ಬೆಂಗಳೂರು: ಅನನ್ಯ ಭಟ್ ನಾಪತ್ತೆಯಾಗಿದ್ದರ ಬಗ್ಗೆ ಅವರ ತಾಯಿ ಸುಜಾತಾ ಭಟ್ ಆರೋಪಿಸಿದ್ದರು. ತಮ್ಮ ಮಗಳ ಅಸ್ಥಿ ಪಂಜರ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಅನನ್ಯ ಭಟ್ ನಾಪತ್ತೆ ಪ್ರಕರಣವನ್ನು ಎಸ್ಐಟಿಗೆ ಹಸ್ತಾಂತರಿಸಿ ಆದೇಶಿಸಿದೆ.
ಇಂದು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಮಾಡಲಾಗಿದ್ದು, ಅನನ್ಯ ಭಟ್ ನಾಪತ್ತೆ ಪ್ರಕರಣವನ್ನು ಎಸ್ಐಟಿಗೆ ಹಸ್ತಾಂತರಿಸಿ ಆದೇಶಿಸಿದೆ. ಡಿಜಿ ಮತ್ತು ಐಜಿಪಿ ಆದೇಶದ ಮೇರೆಗೆ ಎಸ್ಐಟಿಗೆ ಹಸ್ತಾಂತರಿಸಲಾಗಿದೆ.
2003ರಲ್ಲಿ ಧರ್ಮಸ್ಥಳದಲ್ಲಿ ಅನನ್ಯ ಭಟ್ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ತು. ಅನನ್ಯ ಭಟ್ ಕಾಣೆಯಾಗಿದ್ದ ಬಗ್ಗೆ ದೂರು ಸಲ್ಲಿಕೆಯಾಗಿತ್ತು. ಇದೀಗ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಂತ ಅನನ್ಯ ಭಟ್ ನಾಪತ್ತೆಯಾಗಿದ್ದರು. ಈ ಪ್ರಕರಣವನ್ನು ಎಸ್ಐಟಿಗೆ ರಾಜ್ಯ ಸರ್ಕಾರ ಹಸ್ತಾಂತರಿ ಅಧಿಕೃತ ಆದೇಶ ಮಾಡಿದೆ.
ನಿನ್ನೆ ಫೋಟೋದಲ್ಲಿರುವವಳೇ ನನ್ನ ಮಗಳು ಎಂದಿದ್ದ ಸುಜಾತ ಭಟ್
ದೂರುದಾರೆ ಸುಜಾತ ಭಟ್ ಅವರು, ಎಲ್ಲರೂ ಒಂದೊಂದು ರೀತಿ ತೇಜೋವಧೆ ಮಾಡುತ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ. ನನ್ನ ನೋವು ನನಗೆ ಗೊತ್ತು. ನನ್ನ ಮಗಳದ್ದು ಒಂದು ಸಣ್ಣ ಫೋಟೋ ಇದೆ. ಆ ಫೋಟೋದಲ್ಲಿರುವವಳೇ ನನ್ನ ಮಗಳು ಎಂದು ಸುಜಾತ ಭಟ್ ಎಂಬುದಾಗಿ ಸ್ಪಷ್ಟ ಪಡಿಸಿದ್ದರು.
ಇದರಲ್ಲಿ ಫೇಕ್ ಯಾವುದೂ ಇಲ್ಲ. ನಾನು ರಂಗಪ್ರಸಾದ್ ಅವರ ಮನೆಯಲ್ಲಿ ಇದ್ದಿದ್ದು ನಿಜ. ನಾನು ಕೇಳಿರೋದು ನನ್ನ ಮಗಳ ಅಸ್ಥಿ. ಅನಾಮಧೇಯ ವ್ಯಕ್ತಿ ಬಂದು ಶವಗಳನ್ನು ಹೂತಿದ್ದಾಗಿ ಹೇಳಿದ್ದ. ನನ್ನ ಮಗಳ ಅಸ್ಥಿ ಪಂಜರ ಸಿಕ್ಕಿದ್ರೆ ಕೊಡಿ ಎಂದು ಕೇಳಿದ್ದೆ. ಪೋಟೋದಲ್ಲಿ ಇರುವವಳು ನನ್ನ ಮಗಳು. ಅದು ಸತ್ಯ. ಒಬ್ಬ ವ್ಯಕ್ತಿ ರೀತಿ ತುಂಬಾ ಜನ ಇರುತ್ತಾರೆ ಅಲ್ವ? ನನ್ನ ಭಾವ ಈ ಆರೋಪಗಳನ್ನು ಮಾಡ್ತಿದ್ದಾರೆ. ನಾನು ಎಲ್ಲಿ ದಾಖಲೆ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದಿದ್ದರು.
ರಿಪ್ಪನ್ ಪೇಟೆಯಲ್ಲಿ ಪ್ರಭಾಕರ್ ಜೊತೆ ಇದ್ದಿದ್ದು ನಿಜ. ಪ್ರಭಾಕರ್ ನನ್ನ ಗಂಡ ಅಲ್ಲ. ನಾನು ಕಷ್ಟದಲ್ಲಿ ಇರುವಾಗ ಅವರು ನೋಡಿಕೊಂಡಿದ್ದಾರೆ. ಯಾರ ಜೊತೆಗೂ ಇರಬಾರದು ಅಂತ ಇದೆಯಾ ಎಂದು ಪ್ರಶ್ನಿಸಿದ್ದರು.
ರಿಪ್ಪನ್ ಪೇಟೆಯಿಂದ ಕೋಲ್ಕತ್ತಾಗೆ ಹೋಗಿ ಬರುತ್ತಿದ್ದೆ. ಯಾರಿಗೂ ಗೊತ್ತಿರದಂತೆ ನನ್ನ ಮಗಳನ್ನು ಬೆಳೆಸಿದ್ದೆ. ನನ್ನ ತಂದೆಯ ಕುಟುಂಬದಿಂದ ಬೆದರಿಕೆಯಿತ್ತು. ಕುಟುಂಬಕ್ಕೆ ಗೊತ್ತಿಲ್ಲದೇ ಅನಿಲ್ ಭಟ್ ಎಂಬುವರ ಮದುವೆಯಾಗಿದ್ದೆ. ನನ್ನ ಮಗಳು ಮೃತಪಟ್ಟಿರುವುದು ನನಗೆ ಗೊತ್ತು. ದಾಖಲೆ, ಸಾಕ್ಷಿಗಳನ್ನು ಟೀಂ ಒಂದು ನಾಶ ಮಾಡಿದೆ. ಜನನ ಪ್ರಮಾಣ ಪತ್ರ ನನ್ನ ಬಳಿ ಇದೆ ಎಂಬುದಾಗಿ ದೂರುದಾರೆ ಸುಜಾತ ಭಟ್ ತಿಳಿಸಿದ್ದರು.
ಇಂದು ರಾಜ್ಯ ಸರ್ಕಾರವು ಅನನ್ಯ ಭಟ್ ನಾಪತ್ತೆ ಪ್ರಕರಣವನ್ನು ಎಸ್ಐಟಿ ಅಧಿಕಾರಿಗಳಿಂದ ತನಿಖೆ ನಡೆಸಲು ಅಧಿಕೃತ ಆದೇಶ ಮಾಡಿದೆ. ಈ ಮೂಲಕ ಧರ್ಮಸ್ಥಳ ಪ್ರಕರಣದಲ್ಲಿ ಅನನ್ಯ ಭಟ್ ನಾಪತ್ತೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸುವ ಮೂಲಕ, ಮತ್ತೊಂದು ಟ್ವಿಸ್ಟ್ ನೀಡಿದೆ.
ಸೆ.1ರಿಂದ ಬಸವ ಸಂಸ್ಕೃತಿ ಅಭಿಯಾನ, ಅ.5ರಂದು ಅರಮನೆ ಮೈದಾನದಲ್ಲಿ ಸಮಾರೋಪ – ಸಚಿವ ಎಂ.ಬಿ ಪಾಟೀಲ್