ಬೆಂಗಳೂರು: ಬೈಕ್ ಟ್ಯಾಕ್ಸಿಗೆ ನಿಯಮ ರೂಪಿಸುವ ಬಗ್ಗೆ 1 ತಿಂಗಳಲ್ಲಿ ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಇಂದು ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಪ್ರಶ್ನಿಸಿ ಆಪರೇಟರ್ ಗಳು ಸಲ್ಲಿಸಲಾಗಿದ್ದಂತ ಮೇಲ್ಮನವಿಯ ಅರ್ಜಿಯ ವಿಚಾರಣೆಯನ್ನು ನಡೆಸಿತು. ಸಿಜೆ ವಿಭು ಬಕ್ರು, ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದಂತ ನ್ಯಾಯಪೀಠವು ವಿಚಾರಣೆ ಕೈಗೊಂಡಿತು.
ಈ ವೇಳೆ ಎಲ್ಲರಿಗೂ ನ್ಯಾಯಯುತ ವ್ಯವಹಾರ ನಡೆಸುವ ಸಂವಿಧಾನಬದ್ಧ ಹಕ್ಕಿದೆ. ಬೈಕ್ ಟ್ಯಾಕ್ಸಿ ನಡೆಸುತ್ತೇವೆಂದರೆ ಸರ್ಕಾರ ನಿಯಮ ರೂಪಿಸಬಹುದು. 13 ರಾಜ್ಯಗಳು ನಿಯಮ ರೂಪಿಸಿವೆ. ನೀವು ನಿಷೇಧಿಸಿದ್ದೀರಿ. ಈ ರೀತಿ ನಿಷೇಧ ಸರಿಯೇ ಎಂಬುದನ್ನು ಹೈಕೋರ್ಟ್ ಪರಿಶೀಲಿಸಿದೆ ಎಂದಿತು.
ಬೈಕ್ ನಿಂದ ಸಂಚಾರದಟ್ಟಣೆಯೂ ಉಂಟಾಗುವುದಿಲ್ಲ. ಕಾರು, ಆಟೋ ಸಂಚರಿಸದ ಕಡೆಯೂ ಬೈಕ್ ಸಂಚರಿಸಬಹುದು. ಸರ್ಕಾರ ನೀತಿ ರೂಪಿಸುವುದಿದ್ದರೇ ಸಮಯ ನೀಡುತ್ತೇವೆ. ಜೀವನೋಪಾಯದ ಅಂಶವೂ ಇರುವುದರಿಂದ ನಿಲುವು ತಿಳಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತು.
ಹೈಕೋರ್ಟ್ ಸಲಹೆಗೆ ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯಿಸಿ, ನಾಲ್ಕು ವಾರದಲ್ಲಿ ಸರ್ಕಾರದ ನಿಲುವು ತಿಳಿಸುತ್ತೇವೆಂದರು. ಸೆಪ್ಟೆಂಬರ್.22ರ ಒಳಗೆ ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚಿಸಿತು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ NDA ಉಪ ರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಭೇಟಿ
ಸಾಗರ, ಹೊಸನಗರದಲ್ಲಿ ಅಭಿವೃದ್ಧಿ ಪರ್ವಕ್ಕೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ನಾಂದಿ: 1 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ