ಬೆಂಗಳೂರು: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದಾಗಿ ಆರೋಪಿಸಿ ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಕರ್ನಾಟಕದ ಡಿಜಿ-ಐಜಿಪಿಯವರಿಗೆ ದೂರು ನೀಡಲಾಗಿದೆ.
ಈ ಕುರಿತಂತೆ ಬಜರಂಗದಳದ ತೇಜಸ್ ಎ ಗೌಡ ಎಂಬುವರು ದೂರು ನೀಡಿದ್ದು, ಧರ್ಮಸ್ಥಳದಲ್ಲಿ ಅಸಹಜ ಸಾವುಗಳು, ಇತ್ಯಾದಿಗಳ ಬಗ್ಗೆ ಅಸತ್ಯ ಮಾಹಿತಿ ಮತ್ತು ಸುಳ್ಳು ವೀಡಿಯೋಗಳನ್ನು ಪ್ರಕಟಿಸಿರುವುದು ಕೋಟ್ಯಾಂತರ ಹಿಂದೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಗಂಭೀರವಾಗಿ ಹಾನಿಗೊಳಿಸಲಾಗಿದೆ ಎಂದಿದ್ದಾರೆ.
ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ನೋವು ಪಡಿಸಿ, ಧರ್ಮ ಮತ್ತು ಧರ್ಮಗಳ ನಡುವೆ ದ್ವೇಷಗಳನ್ನು ಭಿತ್ತಲು ಪ್ರಯತ್ನಿಸುತ್ತಿದ್ದಾರೆ. ಈ ವೀಡಿಯೋಗಳು ವ್ಯವಸ್ಥಿತವಾಗಿ ದುರುದ್ದೇಶದಿಂದ ಮತ್ತು ಸಂಚು ರೂಪಿಸಿ ಪವಿತ್ರ ಕ್ಷೇತ್ರವನ್ನು ಕೆಡಿಸುವ ಪ್ರಯತ್ನವಾಗಿದೆ. ಅದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ, ಧಾರ್ಮಿಕ ಸಂಘರ್ಷ ಸೃಷ್ಟಿಸುವ ಸಾಧ್ಯತೆ ಉಂಟಾಗಿದೆ. ಈ ಕೂಡಲೇ ಈತನನ್ನು ಬಂಧಿಸಿ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಕಾನೂನಿನಡಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ
- ಭಾರತೀಯ ನ್ಯಾಯ ಸಂಹಿತೆ 2023
- ಸುಳ್ಳು ಮಾಹಿತಿ ನೀಡುವುದು – ಸೆಕ್ಷನ್ 192
- ಧರ್ಮ ಹಾಗೂ ಭಾಷೆಗಳ ನಡುವೆ ದ್ವೇಷ ಬಿತ್ತುವುದು – ಸೆಕ್ಷನ್ 194
- ಮೋಸ ಮತ್ತಿ ತಪ್ಪು ವಿಷಯಗಳ ಪ್ರಸಾರ – ಸೆಕ್ಷನ್ 240
- ಧಾರ್ಮಿಕ ಭಾವನೆಗಳಿಗೆ ಅವಮಾನ – ಸೆಕ್ಷನ್ 298
- ದ್ವೇಷ ಹುಟ್ಟಿಸುವ ಸುಳ್ಳು ಪ್ರಕಟಣೆ – ಸೆಕ್ಷನ್ 353(1/ಬಿ)
- ಮಾನಹಾನಿ – ಸೆಕ್ಷನ್ 356
- ಅಪರಾಧ ಮಾಡಲು ಷಡ್ಯಂತ್ರ – ಸೆಕ್ಷನ್ 61
- ಮೋಸದಿಂದ ಮಾಹಿತಿ ಪ್ರಸಾರ – ಸೆಕ್ಷನ್ 66ಡಿ
- ಸಾರ್ವಜನಿಕ ಶಾಂತಿಗೆ ಹಾನಿ ಮಾಡುವ ವಿಷಯ ತಡೆಯುವ ಅಧಿಕಾರ – ಸೆಕ್ಷನ್ 66ಎ
ಹೀಗಾಗಿ ಮೇಲ್ಕಂಡ ವ್ಯಕ್ತಿ ಸಮೀರ್ ಎಂ.ಡಿ ವಿರುದ್ಧ ಎಫ್ಐಆರ್ ದಾಖಲಿಸಿ, ಸಮಾಜದಲ್ಲಿ ಧಾರ್ಮಿಕ ದ್ವೇಷ, ಅಶಾಂತಿ ಮತ್ತು ಅಶ್ರದ್ಧೆ ಉಂಟು ಮಾಡುವ ಅವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು, ಕಠಿಣ ಶಿಕ್ಷೆ ನೀಡಬೇಕೆಂದು ವಿನಂತಿಸಿದ್ದಾರೆ.
BREAKING: ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆ 2025 ಅಂಗೀಕಾರ | Online Gaming Bill 2025
ಸಾಗರ, ಹೊಸನಗರದಲ್ಲಿ ಅಭಿವೃದ್ಧಿ ಪರ್ವಕ್ಕೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ನಾಂದಿ: 1 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ