ನವದೆಹಲಿ : ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನ ಮಂಡಿಸಿದರು. ಮಸೂದೆಯನ್ನ ಮಂಡಿಸಿದ ತಕ್ಷಣ, ಪ್ರತಿಪಕ್ಷಗಳು ‘ಸಂವಿಧಾನವನ್ನ ಮುರಿಯಬೇಡಿ’ ಎಂಬ ಘೋಷಣೆಗಳನ್ನ ಕೂಗಿದ್ದು, ಈ ವೇಳೆ ಗರಂ ಆದಾ ಅಮಿತ್ ಶಾ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನ ಹೊರಿಸಿದಾಗ ನಾನು ರಾಜೀನಾಮೆ ನೀಡಿದ್ದೆ. ನ್ಯಾಯಾಲಯವು ನನ್ನನ್ನು ಖುಲಾಸೆಗೊಳಿಸುವವರೆಗೂ ನಾನು ನನ್ನ ಹುದ್ದೆಯಲ್ಲಿ ಮುಂದುವರಿಯಲಿಲ್ಲ ಎಂದರು.
ಈ ಮಸೂದೆಯ ಪ್ರಕಾರ, ಪ್ರಧಾನಿ ಮತ್ತು ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರು ಯಾವುದೇ ಅಪರಾಧದಲ್ಲಿ ಭಾಗಿಯಾಗಿದ್ದರೆ 30 ದಿನಗಳಲ್ಲಿ ರಾಜೀನಾಮೆ ನೀಡಬೇಕಾಗಿದೆ.
ಈ ವೇಳೆ ವಿರೋಧ ಪಕ್ಷದ ಸಂಸದರು ಅಮಿತ್ ಶಾ ಅವರ ಮೇಲೆ ಕಾಗದಗಳನ್ನ ಎಸೆದರು ಮತ್ತು ಕಿರಣ್ ರಿಜಿಜು ಅವರನ್ನ ತಳ್ಳಾಡಲಾಯಿತು. ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನ ಕೂಗಿದ್ದು, ಪ್ರತಿಪಕ್ಷಗಳ ಭಾರೀ ಗದ್ದಲದ ನಡುವೆ ಲೋಕಸಭಾ ಕಲಾಪವನ್ನ ಮಧ್ಯಾಹ್ನ 3:00 ಗಂಟೆಯವರೆಗೆ ಮುಂದೂಡಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮೂರು ಮಸೂದೆಗಳನ್ನ ಮಂಡಿಸಿದಾಗ, ವಿರೋಧ ಪಕ್ಷಗಳು ಭಾರಿ ಗದ್ದಲವನ್ನ ಸೃಷ್ಟಿಸಿದವು. ಆ ಸಮಯದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ನನ್ನ ವಿರುದ್ಧವೂ ಆರೋಪಗಳನ್ನ ಮಾಡಲಾಗಿದೆ ಎಂದು ಹೇಳಿದರು ಆದರೆ ನ್ಯಾಯಾಲಯವು ನನ್ನನ್ನು ದೋಷಮುಕ್ತ ಎಂದು ಘೋಷಿಸಿತು, ಅದರ ನಂತರವೇ ನಾನು ಯಾವುದೇ ಹುದ್ದೆಯನ್ನ ವಹಿಸಿಕೊಂಡೆ ಎಂದರು.
‘ಚಲನಚಿತ್ರ ಶೀರ್ಷಿಕೆಗಳಿಗೆ ಹಕ್ಕುಸ್ವಾಮ್ಯ ರಕ್ಷಣೆ ಇಲ್ಲ’: ನಿರ್ಮಾಪಕರ ಮನವಿ ತಿರಸ್ಕರಿಸಿದ ಹೈಕೋರ್ಟ್
ಪ್ರತಿಷ್ಢಿತ ಔಟ್ ಲುಕ್- ಐಕೇರ್ (ICARE): ಕುವೆಂಪು ವಿವಿಗೆ 30ನೇ Rank
BREAKING : ಟ್ರಂಪ್ ಸುಂಕ ಬೆದರಿಕೆ ನಡುವೆಯೂ ಭಾರತದ ಸಂಸ್ಕರಣಾಗಾರರಿಂದ ರಷ್ಯಾದ ‘ತೈಲ ಖರೀದಿ’ ಪುನರಾರಂಭ ; ವರದಿ