ಮೈಸೂರು: ಹಬ್ಬದ ದಿನಗಳಲ್ಲಿನ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸಲು, ಸುಗಮವಾದ ಟಿಕೆಟ್ ಬುಕ್ಕಿಂಗ್‌ನ್ನು ಖಚಿತಪಡಿಸಲು, ಪ್ರಯಾಣಿಕರಿಗೆ ಅನುಕೂಲ ಒದಗಿಸಲು ಮತ್ತು ರೈಲುಗಳಲ್ಲಿ ಉಭಯಮುಖಿ ಬಳಕೆಯನ್ನು ಖಾತ್ರಿ ಪಡಿಸಲು, ರೈಲ್ವೆ ಇಲಾಖೆಯು “ಹಬ್ಬದ ಪ್ರಯಾಣಕ್ಕಾಗಿ ರೌಂಡ್ ಟ್ರಿಪ್ ಪ್ಯಾಕೇಜ್ ಯೋಜನೆ” ಎಂಬ ಹೆಸರಿನಲ್ಲಿ ಪ್ರಯೋಗಾತ್ಮಕ ಯೋಜನೆಯನ್ನು ಘೋಷಿಸಿದೆ.
ಈ ಯೋಜನೆಯಡಿ, ನಿರ್ದಿಷ್ಟ ಅವಧಿಯಲ್ಲಿ ಹೊರಡುವ ಹಾಗೂ ಹಿಂತಿರುಗುವ ಪ್ರಯಾಣಕ್ಕೆ ಟಿಕೆಟ್‌ಗಳನ್ನು ಬುಕ್ ಮಾಡಿದ ಪ್ರಯಾಣಿಕರಿಗೆ ರಿಯಾಯಿತಿ ಲಭ್ಯವಾಗುತ್ತದೆ. ಹಿಂತಿರುಗುವ ಪ್ರಯಾಣದ ಪ್ರಯಾಣಿಕರ ವಿವರಗಳು, ಹೋಗುವ ಪ್ರಯಾಣದ ವಿವರಗಳಂತೆ ಇರಬೇಕು. ಈ ಯೋಜನೆಯಡಿ ಟಿಕೆಟ್‌ಗಳ ಬುಕ್ಕಿಂಗ್ 14.08.2025ರಿಂದ ಆರಂಭವಾಗಿದೆ. ಹೊರಡುವ ಪ್ರಯಾಣದ ಟಿಕೆಟ್‌ಗಳನ್ನು 13.10.2025 ರಿಂದ 26.10.2025ರವರೆಗೆ ಇರುವ ಪ್ರಯಾಣ ದಿನಾಂಕಗಳಿಗೆ ಮೊದಲು ಬುಕ್ ಮಾಡಬೇಕು. ಹಿಂತಿರುಗುವ ಟಿಕೆಟ್‌ಗಳನ್ನು ನಂತರ 17.11.2025 ರಿಂದ 01.12.2025ರವರೆಗೆ ಇರುವ ಪ್ರಯಾಣ ದಿನಾಂಕಗಳಿಗೆ ಕನೆಕ್ಟಿಂಗ್ ಪ್ರಯಾಣ ಸೌಲಭ್ಯ ಬಳಸಿ ಬುಕ್ ಮಾಡಬಹುದು. ಹಿಂತಿರುಗುವ ಟಿಕೆಟ್‌ಗಳಿಗೆ ಅಡ್ವಾನ್ಸ್ ರಿಸರ್ವೇಶನ್ ಅವಧಿ ಅನ್ವಯಿಸುವುದಿಲ್ಲ.
ಈ ಸೌಲಭ್ಯವು ಎರಡೂ ದಿಕ್ಕಿನ ದೃಢೀಕೃತ ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಹಿಂತಿರುಗುವ ಪ್ರಯಾಣದ ಮೂಲ ದರದ ಮೇಲೆ 20% ರಿಯಾಯಿತಿ ನೀಡಲಾಗುತ್ತದೆ. ಈ ಯೋಜನೆ ಅದೇ ಕ್ಲಾಸ್ ಮತ್ತು ಒಂದೇ ಮೂಲ–ಗಮ್ಯ (ಒರಿಜಿನ್ – ಡೆಸ್ಟಿನೇಷನ್) ಸ್ಥಳಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಯೋಜನೆಯಡಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಹಣ ಮರುಪಾವತಿ ನೀಡಲಾಗುವುದಿಲ್ಲ.
ಈ ಯೋಜನೆ ಎಲ್ಲಾ ಕ್ಲಾಸ್ ಮತ್ತು ಎಲ್ಲಾ ರೈಲುಗಳಿಗೆ, ವಿಶೇಷ ರೈಲುಗಳನ್ನು (ಬೇಡಿಕೆಯ ಮೇಲೆ ರೈಲುಗಳಿಗೆ) ಸೇರಿಸಿ ಅನ್ವಯವಾಗುತ್ತದೆ. ಆದರೆ ಫ್ಲೆಕ್ಸಿ ಫೇರ್ ಯೋಜನೆಯಡಿ ನಡೆಯುವ ರೈಲುಗಳಿಗೆ ಇದು ಅನ್ವಯಿಸುವುದಿಲ್ಲ. ಒಂದು ಬಾರಿ ಬುಕ್ ಮಾಡಿದ ಟಿಕೆಟ್‌ಗಳನ್ನು ತಿದ್ದುಪಡಿ ಮಾಡಲಾಗುವುದಿಲ್ಲ. ಇದಲ್ಲದೆ, ರಿಯಾಯಿತಿಗಳು, ರೈಲು ಪ್ರಯಾಣ ಕೂಪನ್‌ಗಳು, ವೌಚರ್‌ಗಳು, ಪಾಸ್‌ಗಳು, ಪಿಟಿಒ ಗಳು ಅಥವಾ ಇತರ ಸೌಲಭ್ಯಗಳು ಈ ಯೋಜನೆಯಡಿ ಅನ್ವಯಿಸುವುದಿಲ್ಲ.
ಹೊರಡುವ ಹಾಗೂ ಹಿಂತಿರುಗುವ ಪ್ರಯಾಣದ ಟಿಕೆಟ್‌ಗಳನ್ನು ಒಂದೇ ವಿಧಾನದಲ್ಲಿ ಬುಕ್ ಮಾಡುವುದು ಕಡ್ಡಾಯ ಅಂದರೆ ಆನ್‌ಲೈನ್ ಮೂಲಕ ಅಥವಾ ಕಾಯ್ದಿರಿಸುವ ಕಛೇರಿಗಳಲ್ಲಿ ಕೌಂಟರ್ ಮೂಲಕ. ಇಂತಹ ಪಿಏನ್ಆರ್ ಗಳ ಚಾರ್ಟಿಂಗ್ ಸಂದರ್ಭದಲ್ಲಿ ಯಾವುದೇ ದರದ ವ್ಯತ್ಯಾಸ ಉಂಟಾದರೂ ಹೆಚ್ಚುವರಿ ಹಣ ವಸೂಲಿ ಮಾಡಲಾಗುವುದಿಲ್ಲ.
ಹಬ್ಬದ ಪ್ರಯಾಣವನ್ನು ಸುಗಮಗೊಳಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಒದಗಿಸಲು, ಜೊತೆಗೆ ಟ್ರಾಫಿಕ್ ಅನ್ನು ಉಭಯ ದಿಕ್ಕುಗಳಲ್ಲಿ ಸಮರ್ಪಕವಾಗಿ ಹಂಚಿಕೊಳ್ಳಲು ಈ ವಿಶೇಷ ಯೋಜನೆಯನ್ನು ರೂಪಿಸಲಾಗಿದೆ. ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆಯಬಹುದು.
BIG NEWS: ಫೋಟೋದಲ್ಲಿರುವವಳೇ ನನ್ನ ಮಗಳು: ಸುಜಾತ ಭಟ್ ಮೊದಲು ಪ್ರತಿಕ್ರಿಯೆ
BREAKING: ಇಂದು ಸಂಜೆ 5ಕ್ಕೆ ನಡೆಯಬೇಕಿದ್ದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ 7.30ಕ್ಕೆ ಮುಂದೂಡಿಕೆ