ಹುಬ್ಬಳ್ಳಿ: ರೈಲ್ವೆ ಮಂಡಳಿಯು ವಿಜಯಪುರ–ಮಂಗಳೂರು ಸೆಂಟ್ರಲ್–ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ರೈಲನ್ನು (ರೈಲು ಸಂಖ್ಯೆ 07377/07378) ನಿಯಮಿತ ಎಕ್ಸ್ ಪ್ರೆಸ್ ಸೇವೆಗೆ ಉನ್ನತೀಕರಿಸಲು ಅನುಮೋದನೆ ನೀಡಿದೆ. ಈ ರೈಲುಗಳು ಇನ್ನು ಮುಂದೆ ರೈಲು ಸಂಖ್ಯೆ 17377/17378 ವಿಜಯಪುರ–ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್ ಪ್ರೆಸ್ ಎಂದು ಸಂಚರಿಸಲಿವೆ.
ರೈಲು ಸಂಖ್ಯೆ 17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್ ತನ್ನ ನಿಯಮಿತ ಸೇವೆಯನ್ನು ಸೆಪ್ಟೆಂಬರ್ 1, 2025 ರಿಂದ ಪ್ರಾರಂಭಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್ ಪ್ರೆಸ್ ಸೆಪ್ಟೆಂಬರ್ 2, 2025 ರಿಂದ ತನ್ನ ಸಂಚಾರ ಆರಂಭಿಸಲಿದೆ. ಈ ಎರಡೂ ರೈಲುಗಳು ಈಗಿರುವ ವೇಳಾಪಟ್ಟಿ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ನಿರ್ವಹಣಾ ಮಾದರಿಯೊಂದಿಗೆ ಸಂಚರಿಸಲಿವೆ.
ವಿಧಾನಸಭೆಯಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2025 ಅಂಗೀಕಾರ
BREAKING: ಇಂದು ಸಂಜೆ 5ಕ್ಕೆ ನಡೆಯಬೇಕಿದ್ದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ 7.30ಕ್ಕೆ ಮುಂದೂಡಿಕೆ