ಬೆಂಗಳೂರು: ಇಂದು ಬಿಜೆಪಿ ಸಭಾತ್ಯಾಗದ ನಡುವೆಯೂ ವಿಧಾನಸಭೆಯಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2025 ಅಂಗೀಕಾರಗೊಂಡಿದೆ.
ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದಿಂದ 2025ನೇ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧವನ್ನು ವ್ಯಕ್ತ ಪಡಿಸಿ, ಸಭಾತ್ಯಾಗ ಕೂಡ ನಡೆಸಲಾಯಿತು.
ಇದಕ್ಕೂ ಮುನ್ನಾ ಸುದೀರ್ಘ ಚರ್ಚೆಯನ್ನು ಬಿಜೆಪಿ ಸದಸ್ಯರು ನಡೆಸಿದರು. ಇದು ರಿಯಲ್ ಎಸ್ಟೇಟ್ ಪರವಾಗಿದೆ ಎಂಬುದಾಗಿ ಆರಂಭದಿಂದಲೂ ವಿರೋಧ ವ್ಯಕ್ತ ಪಡಿಸಿದರು. ಆ ಬಳಿಕ ವಿಧೇಯಕಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಲಾಯಿತು.
ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆಯೂ 2025ನೇ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.