Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇತಿಹಾಸ ಸೃಷ್ಟಿಸಿದ ಪ್ರಗ್ನಾನಂದ: ಗುಕೇಶ್‌ರನ್ನು ಮಣಿಸಿ ವಿಶ್ವ ಚೆಸ್‌ನಲ್ಲಿ 3ನೇ ಸ್ಥಾನಕ್ಕೆ ಜಿಗಿತ

19/08/2025 11:55 AM

ರಾಜ್ಯದ ಸರ್ಕಾರಿ ಕಾಲೇಜುಗಳ `ಸಹಾಯಕ ಪ್ರಾಧ್ಯಾಪಕರಿಗೆ’ ಗುಡ್ ನ್ಯೂಸ್ : `UGC ವೇತಣಿ ಶ್ರೇಣಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

19/08/2025 11:54 AM

BREAKING : ಸೌಜನ್ಯ ಕೇಸ್‌ ಹೋರಾಟಗಾರ `ಮಹೇಶ ಶೆಟ್ಟಿ ತಿಮರೋಡಿ’ ವಿರುದ್ಧ `FIR’ ದಾಖಲು.!

19/08/2025 11:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸರ್ಕಾರಿ ಕಾಲೇಜುಗಳ `ಸಹಾಯಕ ಪ್ರಾಧ್ಯಾಪಕರಿಗೆ’ ಗುಡ್ ನ್ಯೂಸ್ : `UGC ವೇತಣಿ ಶ್ರೇಣಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ
KARNATAKA

ರಾಜ್ಯದ ಸರ್ಕಾರಿ ಕಾಲೇಜುಗಳ `ಸಹಾಯಕ ಪ್ರಾಧ್ಯಾಪಕರಿಗೆ’ ಗುಡ್ ನ್ಯೂಸ್ : `UGC ವೇತಣಿ ಶ್ರೇಣಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

By kannadanewsnow5719/08/2025 11:54 AM

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ಸಿ.ಎ.ಎಸ್ ಯೋಜನೆ ಅಡಿಯಲ್ಲಿ 2018ರ ಯುಜಿಸಿ ನಿಯಮಗಳ ಅನ್ವಯ ಶೈಕ್ಷಣಿಕ ಹಂತ 11 ರ ವೇತನ ಶ್ರೇಣಿ ರೂ.68900-205500 ರಲ್ಲಿ ಸ್ಥಾನೀಕರಣ ಮಂಜೂರು ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅರ್ಹ ಸಹಾಯಕ ಪ್ರಾಧ್ಯಾಪಕರಿಗೆ 2016 ರ ಪರಿಷ್ಕೃತ ಯುಜಿಸಿ ವೇತನ ಶ್ರೇಣಿಯನ್ನು ಉಲ್ಲೇಖ (1) ಹಾಗೂ (2) ರ ಆದೇಶಗಳಲ್ಲಿ ಜಾರಿಗೊಳಿಸಲಾಗಿರುತ್ತದೆ. ಈ ಆದೇಶದಲ್ಲಿ ಸಹಾಯಕ ಪ್ರಾಧ್ಯಾಪಕರಿಗೆ ಶೈಕ್ಷಣಿಕ ಹಂತ 10 ರ [ಯುಜಿಸಿ ವೇತನ ಶ್ರೇಣಿ ರೂ.57700-182400] ರಲ್ಲಿ ಪೂರೈಸಿರುವ ನಿಗದಿತ ಅರ್ಹತಾ ಅವಧಿಯನ್ನು ಹಾಗೂ ಪಿಹೆಚ್.ಡಿ/ಎಂ.ಫಿಲ್ ಪದವಿಯನ್ನು ಪರಿಗಣಿಸಿ ನಿಯಮಾನುಸಾರ ಸಿಎಎಸ್ ರಡಿಯಲ್ಲಿ ಉನ್ನತ ಶೈಕ್ಷಣಿಕ ಹಂತ 11 ರ ವೇತನ ಶ್ರೇಣಿ ರೂ.68900-205500 ರಲ್ಲಿ ಸ್ಥಾನೀಕರಣ ಹೊಂದಲು ಅವಕಾಶ ಕಲ್ಪಿಸಲಾಗಿರುತ್ತದೆ.

ಉಲ್ಲೇಖ (1) ಮತ್ತು (2) ರ ಸರ್ಕಾರದ ಆದೇಶ ಹಾಗೂ ಯುಜಿಸಿ ಮಾರ್ಗಸೂಚಿಯಲ್ಲಿ ಅನ್ವಯಿಸುವ ಷರತ್ತುಗಳಿಗೊಳಪಟ್ಟು ಸಿ.ಎ.ಎಸ್. (Career Advancement Scheme) ಯೋಜನೆ ಅಡಿಯಲ್ಲಿ ಉನ್ನತ ಶೈಕ್ಷಣಿಕ ಹಂತಗಳಲ್ಲಿ ಸ್ಥಾನೀಕರಣ ಮಂಜೂರು ಮಾಡಲು ಉಲ್ಲೇಖ (3) ರ ಸರ್ಕಾರದ ಆದೇಶದಲ್ಲಿ ಅನುಮೋದನೆ ನೀಡಲಾಗಿರುತ್ತದೆ.

ಉಲ್ಲೇಖ (1) ರಿಂದ (3) ರವರೆಗಿನ ಸರ್ಕಾರದ ಆದೇಶ ಮತ್ತು ಯುಜಿಸಿ ಮಾರ್ಗಸೂಚಿಗಳ ಅನುಸಾರ ಶೈಕ್ಷಣಿಕ ಹಂತ 10 ರಿಂದ ಶೈಕ್ಷಣಿಕ ಹಂತ 11 ರಲ್ಲಿ ಸ್ಥಾನೀಕರಣ ಮಂಜೂರು ಮಾಡುವ ಸಂಬಂಧ ಪ್ರಾಂಶುಪಾಲರು ತಮ್ಮ ಹಂತದಲ್ಲಿ ಯು.ಜಿ.ಸಿಯ ದಿನಾಂಕ: 18.07.2018 ರ ಕಂಡಿಕೆ 5.0 ರಿಂದ 6.4 ತಜ್ಞರ ರನ್ವಯ ವಿಭಾಗದ ಮುಖ್ಯಸ್ಥರು ಹಾಗೂ ವಿಶ್ವವಿದ್ಯಾಲಯದಿಂದ ನೇಮಕವಾದ ವಿಷಯ ಪ್ರತಿನಿಧಿಯನ್ನೊಳಗೊಂಡಂತೆ (Screening-cum-Evaluation Committee) ಸಮಿತಿಯನ್ನು ರಚಿಸಿ ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರಿಗೆ ಸಂಬಂಧಿಸಿದಂತೆ ಕ್ಲಾಸ್-6.4 (B). ನಮೂನೆ (A), (C), (D) (E), (F) & (G) ಪ್ರಕಾರ ಕೂಲಂಕಷವಾಗಿ ಪರಿಶೀಲಿಸಿ. ಸಿಎಎಸ್ ರಡಿಯಲ್ಲಿ ಶೈಕ್ಷಣಿಕ ಹಂತ 11ಕ್ಕೆ ಅರ್ಹತೆ ಹೊಂದಿರುವ ಬೋಧಕರ ಮಾಹಿತಿಗಳನ್ನು ನಿಗದಿತ ನಮೂನೆಗಳಲ್ಲಿ ಹಾಗೂ ಪ್ರಾಂಶುಪಾಲರ ಹಂತದ (Screening-cum-Evaluation Committee) ಸಮಿತಿಯ ಶಿಫಾರಸ್ಸಿನೊಂದಿಗೆ ಅನುಮೋದನೆಗೆ ಸಲ್ಲಿಸುವಂತೆ ಉಲ್ಲೇಖ (4)ರ ಸುತ್ತೋಲೆಗಳಲ್ಲಿ ತಿಳಿಸಲಾಗಿದೆ. ಅದರಂತೆ (Screening-cum-Evaluation Committee) ಸಮಿತಿಯು ಅರ್ಹ ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರಿಗೆ ಶೈಕ್ಷಣಿಕ ಹಂತ 11 ರ ಸ್ಥಾನೀಕರಣಕ್ಕಾಗಿ ಶಿಫಾರಸ್ಸು ಮಾಡಿರುತ್ತಾರೆ.

ಉಲ್ಲೇಖ (5) ರ ಸರ್ಕಾರದ ಪತ್ರ, ಉಲ್ಲೇಖ (6) ರ ಸರ್ಕಾರದ ಆದೇಶ ಮತ್ತು (7) ರ ತಿದ್ದುಪಡಿ ಆದೇಶಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕರಿಗೆ ಸ್ಥಾನೀಕರಣ ಸೌಲಭ್ಯವನ್ನು ಸದರಿಯವರು ಸಿಎಎಸ್ ರಡಿ ಸ್ಥಾನೀಕರಣಕ್ಕೆ ಅರ್ಹತೆ ಹೊಂದಿದ ದಿನಾಂಕದಿಂದ ಅರ್ಹತಾ ಅವಧಿಯನ್ನು ಪರಿಗಣಿಸುವಂತೆ ಹಾಗೂ ವೇತನ ನಿಗದೀಕರಣ ಒಳಗೊಂಡಂತೆ ಸ್ಥಾನೀಕರಣದ ಆರ್ಥಿಕ ಸೌಲಭ್ಯಗಳನ್ನು ಸ್ಥಾನೀಕರಣ ಆದೇಶ ಹೊರಡಿಸಿದ ದಿನಾಂಕದಿಂದ ಭವಿಷ್ಯವರ್ತಿಯಾಗಿ (The Monetary benefit on grant of CAS Shall be Prospective from the date of issue of the order) ಮಂಜೂರು ಮಾಡಲು ಆದೇಶಿಸಲಾಗಿರುತ್ತದೆ.

ಪ್ರಾಂಶುಪಾಲರ ಹಂತದ ಸಮಿತಿಯ ಶಿಫಾರಸ್ಸಿನ ಮೇರೆಗೆ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಈ ಕಛೇರಿಯ ಹಂತದಲ್ಲಿ ನಿಯಮಾನುಸಾರ ಪರಿಶೀಲಿಸಿ ಅರ್ಹತೆ ಹೊಂದಿದವರನ್ನು ಕೇಂದ್ರ ಕಛೇರಿಯಲ್ಲಿ ರಚಿಸಲಾಗಿರುವ ಪರಿಶೀಲನಾ ಸಮಿತಿಯು ದಿನಾಂಕ: 01.07.2025 ರಂದು ನಡೆಸಿದ ಸಭೆಯಲ್ಲಿ ತೀರ್ಮಾನಿಸಿದಂತೆ ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರಿಗೆ ಯುಜಿಸಿ ವೇತನ ಶ್ರೇಣಿ ರೂ.68900-205500 ರಲ್ಲಿ ಶೈಕ್ಷಣಿಕ ಹಂತ 11ಕ್ಕೆ ಸ್ಥಾನೀಕರಣ ಮಂಜೂರು ಮಾಡಲು ಈ ಆದೇಶ.

ಸರ್ಕಾರದ ಇಡಿ/123/ಡಿಸಿಇ/2020 ರ ಆದೇಶದ ಅನುಮೋದನೆ ಪ್ರಕಾರ ಪಾಂಶುಪಾಲರ ಹಂತದ (Screening-cum-Evaluation Committee) ಸಮಿತಿಯ ಶಿಫಾರಸ್ಸಿನ ಮೇರೆಗೆ ಹಾಗೂ ಇಲಾಖಾ ಹಂತದ ಸ್ಥಾನೀಕರಣ ಪರಿಶೀಲನಾ ಸಮಿತಿಯ ತೀರ್ಮಾನದಂತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರಿಗೆ ಸಂಬಂಧಿಸಿದಂತೆ ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧ-1, 2, 3 & 4 ರಲ್ಲಿ ಹೆಸರಿಸಿರುವ ಒಟ್ಟು: 42+1+1+1=45 ಬೋಧಕರಿಗೆ ಶೈಕ್ಷಣಿಕ ಹಂತ 11 ನ್ನು ಯು.ಜಿ.ಸಿ ವೇತನ ಶ್ರೇಣಿ ರೂ.68900-205500 ರಲ್ಲಿ ಸ್ಥಾನೀಕರಣವನ್ನು ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಉಲ್ಲೇಖ (5),(6),(7) ಮತ್ತು (8) ರ ಸರ್ಕಾರದ ಆದೇಶದಂತೆ ಸಿ.ಎ.ಎಸ್ ರಡಿ ಸ್ಥಾನೀಕರಣಕ್ಕೆ ಅರ್ಹತೆ ಹೊಂದಿದ ದಿನಾಂಕದಿಂದ ಅರ್ಹತಾ ಅವಧಿಯನ್ನು ಪರಿಗಣಿಸಿ, ವೇತನ ನಿಗದೀಕರಣ ಒಳಗೊಂಡಂತೆ ಸ್ಥಾನೀಕರಣದ ಆರ್ಥಿಕ ಸೌಲಭ್ಯಗಳನ್ನು ಸ್ಥಾನೀಕರಣ ಮಂಜೂರಾತಿ ಆದೇಶ ಹೊರಡಿಸಿದ ದಿನಾಂಕದಿಂದ ಭವಿಷ್ಯವರ್ತಿಯಾಗಿ ಅನ್ವಯವಾಗುವಂತೆ ಮಂಜೂರು ಮಾಡಿ ಆದೇಶಿಸಲಾಗಿದೆ.

ಷರತುಗಳು:

2018/2010 ರ ಯುಜಿಸಿ ಮಾರ್ಗಸೂಚಿಯನ್ವಯ ಗ್ರೇಡಿಂಗ್/ಎಪಿಐ ಸ್ಕೋರ್ ಆಧಾರಿತ ವಿವಿಧ ಶೈಕ್ಷಣಿಕ ಹಂತದ ಸ್ಥಾನೀಕರಣ (ಎಜಿಪಿ) ಮಂಜೂರಾತಿಯು ಉಲ್ಲೇಖ (1) ರಿಂದ (3) ರವರೆಗಿನ ಯುಜಿಸಿ ಮಾರ್ಗಸೂಚಿ/ಸರ್ಕಾರದ ಆದೇಶಗಳಲ್ಲಿನ ನಿಬಂಧನೆಗೊಳಪಟ್ಟಿರುತ್ತದೆ.

ಯು.ಜಿ.ಸಿಯ ದಿನಾಂಕ: 18.07.2018ರ ಅಧಿಕೃತ ವರ್ಗ 6.4 ಎ – ಪ್ರವೇಶ ಹಂತದ ಸಹಾಯಕ ಪ್ರಾಧ್ಯಾಪಕರು (ಹಂತ 10) ವೃತ್ತಿ ಪ್ರಗತಿ ಯೋಜನೆ (CAS) ಅಡಿಯಲ್ಲಿ ಎರಡು ಸತತ ಹಂತಗಳ ಮೂಲಕ (ಹಂತ 11 ಮತ್ತು ಹಂತ 12) ಬಡ್ತಿ ಪಡೆಯಲು ಅರ್ಹರಾಗಿರುತ್ತಾರೆ. ಅವರು ಅರ್ಹತೆ ಮತ್ತು ಕಾರ್ಯಕ್ಷಮತೆಯ ಮಾನದಂಡಗಳನ್ನು ಪೂರೈಸಲು ಮೌಲ್ಯಮಾಪನ ಮಾಡಿದರೆ Clause 6.3. and 2010 UGC Regulations, 4 th Amendment date: 11.07.2016 Appendix-3 Table II A & III of UGC Regulations ರಲ್ಲಿ ನಿಗದಿಪಡಿಸಿರುವ ಎಲ್ಲಾ ಅಂಶಗಳನ್ನು ಪೂರೈಸಿರುವ ಬಗ್ಗೆ ជ ថ ថថ (Screening-cum-Evaluation Committee) ಪರಿಶೀಲಿಸಿ ಶಿಫಾರಸ್ಸು ಮಾಡಿರುವ ಮೇರೆಗೆ ಎ.ಜಿ.ಪಿ ಮಂಜೂರಾತಿಗೆ ಅನುಮೋದನೆ ನೀಡಲಾಗಿದ್ದು, ដា ដង ថ ថថ (Screening-cum-Evaluation Committee) ಸಮಿತಿಯದ್ದಾಗಿರುತ್ತದೆ. ಪ್ರಸ್ತಾವನೆಗಳನ್ನು ಸಲ್ಲಿಸುವಾಗ ಯಾವುದೇ ತಪ್ಪು ಮಾಹಿತಿಗಳನ್ನು ಒದಗಿಸಿರುವುದು ಕಂಡು ಬಂದಲ್ಲಿ ಸಂಬಂಧಿಸಿದ ಸಹಾಯಕ ಪ್ರಾಧ್ಯಾಪಕರಿಗೆ ಸ್ಥಾನೀಕರಣ ಮಂಜೂರಾತಿಯನ್ನು ಯಾವುದೇ ಮುನ್ಸೂಚನೆಯನ್ನು ನೀಡದೇ ಹಿಂಪಡೆಯಲಾಗುವುದು ಹಾಗೂ ತಪ್ಪು ಮಾಹಿತಿ ಒದಗಿಸಿದ ಉಪನ್ಯಾಸಕರು ಹಾಗೂ ಶಿಫಾರಸ್ಸು ಮಾಡಿದ ಪ್ರಾಂಶುಪಾಲರುಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು.

ನಿಗದಿತ 02 ವಾರಗಳ ತರಬೇತಿ. 3. ಈ ಕಛೇರಿಯ ಉಲ್ಲೇಖ (4)ರ ಸುತ್ತೋಲೆಯಲ್ಲಿ ಸೂಚಿಸಿರುವಂತೆ ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರ ಖಾಯಂ ನೇಮಕಾತಿ ದಿನಾಂಕ. ಯು.ಜಿ.ಸಿ. ವೇತನ ನಿಗಧಿಕರಣದ ದಿನಾಂಕ, ಸೇವಾ ಪೂರ್ವ ಅವದಿ ಘೋಷಣೆ, ವೇತನ ರಹಿತ ರಜೆ/ಅನಧಿಕೃತ ಗೈರು ಹಾಜರಿ. ಶಿಸ್ತು ಕ್ರಮದ ಮಾಹಿತಿ, ಸಹಾಯಕ ಪ್ರಾಧ್ಯಾಪಕರಿಗೆ ಓರಿಯೆಂಟೇಷನ್/ರೆಪ್ರೆಷರ್ ಕೋರ್ಸ್‌ಗಳನ್ನು ಪೂರೈಸಿರುವುದು. ಇನ್ನಿತರೆ ಎಲ್ಲಾ ಸಂಬಂಧಿಸಿದಂತೆ ಏನಾದರೂ ಅಸಂಗತ ಮಾಹಿತಿ ಕಂಡು ಬಂದಲ್ಲಿ ಸಂಬಂಧಿಸಿದ ಪ್ರಾಂಶುಪಾಲರೇ ಜವಾಬ್ದಾರರಾಗಿರುತ್ತಾರೆ. ಅಂಶಗಳಿಗೆ

De ಸ್ಥಾನೀಕರಣ ಮಂಜೂರಾತಿಯು ಯು.ಜಿ.ಸಿ/ಸರ್ಕಾರ/ಇಲಾಖೆ ಕಾಲಕಾಲಕ್ಕೆ ಹೊರಡಿಸುವ ಆದೇಶ/ಸುತ್ತೋಲೆ/ಪತ್ರಗಳಲ್ಲಿ ನಿಗದಿಪಡಿಸುವ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.

ಈ ಸ್ಥಾನೀಕರಣವನ್ನು ಸೇವಾ ಜೇಷ್ಟತೆಗೆ ಪರಿಗಣಿಸಲು ಅವಕಾಶವಿರುವುದಿಲ್ಲ.

ಈ ಆದೇಶದನ್ವಯ ಮಂಜೂರು ಮಾಡಲಾದ ಶೈಕ್ಷಣಿಕ ಹಂತಗಳ ಸ್ಥಾನೀಕರಣವು ಸ್ಥಳೀಯ/ಮಹಾಲೇಖಪಾಲರ ಲೆಕ್ಕಪರಿಶೋಧನೆಗೆ ಒಳಪಟ್ಟಿದ್ದು, ಯಾವುದೇ ವ್ಯತಿರಿಕ್ತ ಮಾಹಿತಿ ಕಂಡು ಬಂದಲ್ಲಿ ಮರು ಪರಿಶೀಲಿಸುವ ಮತ್ತು ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳುವ ಷರತ್ತಿಗೊಳಪಟ್ಟಿರುತ್ತದೆ.

ಸ್ಥಾನೀಕರಣ ಮಂಜೂರಾತಿ ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ದೃಢೀಕರಣ ಪತ್ರಗಳಲ್ಲಿನ ಮಾಹಿತಿಯಲ್ಲಿ ಯಾವುದೇ ವ್ಯತಿರಿಕ್ತ ಮಾಹಿತಿ ಕಂಡು ಬಂದಲ್ಲಿ ಪ್ರಾಂಶುಪಾಲರೇ ನೇರ ಹೊಣೆಗಾರರಾಗಿರುತ್ತಾರೆ.

ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರು ವಿವಿಧ ವಿಶ್ವವಿದ್ಯಾಲಯಗಳಿಂದ ಪಡೆದಿರುವ ಪಿಹೆಚ್.ಡಿ/ಎಂ.ಫಿಲ್ ಪದವಿಗಳ ನೈಜತೆ ವರದಿಯ ಆಧಾರದ ಮೇಲೆ ಆದೇಶ ಹೊರಡಿಸಲಾಗಿದ್ದು, ಈ ಬಗ್ಗೆ ಮುಂದೆ ಅಸಂಗತ ಮಾಹಿತಿ ಕಂಡುಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಆದೇಶವನ್ನು ರದ್ದುಪಡಿಸುವ ಷರತ್ತಿಗೊಳಪಟ್ಟಿರುತ್ತದೆ.

ಸ್ಥಾನೀಕರಣ ಮಂಜೂರಾತಿ ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ದೃಢೀಕರಣ ಪತ್ರಗಳಲ್ಲಿನ ಮಾಹಿತಿಯಲ್ಲಿ ಯಾವುದೇ ವ್ಯತಿರಿಕ್ತ ಮಾಹಿತಿ ಕಂಡು ಬಂದಲ್ಲಿ ಪ್ರಾಂಶುಪಾಲರೇ ನೇರ ಹೊಣೆಗಾರರಾಗಿರುತ್ತಾರೆ. ಅಲ್ಲದೇ ಸುಳ್ಳು ಮಾಹಿತಿ/ಅಕ್ರಮ ದಾಖಲೆ ನೀಡಿದ ರದ್ದುಗೊಳಿಸಲಾಗುವುದು. ಅಧ್ಯಾಪಕರಿಗೆ ಸಂಬಂಧಿಸಿದಂತೆ De ಆದೇಶವನ್ನು

ಉಲ್ಲೇಖ (07) ಮತ್ತು (8) ರ ಸರ್ಕಾರದ ಆದೇಶದನ್ವಯ ಈ ಆದೇಶ ಹೊರಡಿಸಿದ ದಿನಾಂಕದಿಂದ ಭವಿಷ್ಯಾವರ್ತಿಯಾಗಿ ಸಹಾಯಕ ಪ್ರಾಧ್ಯಾಪಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರು ಶೈಕ್ಷಣಿಕ ಹಂತ 11 ರ ಸ್ಥಾನೀಕರಣದ ಆರ್ಥಿಕ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ.

Good news for 'Assistant Professors' of government first-grade colleges in the state: Important order from the government regarding 'Salary Scale'
Share. Facebook Twitter LinkedIn WhatsApp Email

Related Posts

BREAKING : ಸೌಜನ್ಯ ಕೇಸ್‌ ಹೋರಾಟಗಾರ `ಮಹೇಶ ಶೆಟ್ಟಿ ತಿಮರೋಡಿ’ ವಿರುದ್ಧ `FIR’ ದಾಖಲು.!

19/08/2025 11:40 AM1 Min Read

BREAKING : ವಿಧಾನಸಭೆಯಲ್ಲಿ 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಮಂಡನೆ

19/08/2025 11:31 AM1 Min Read

SHOCKING : ರಾಜ್ಯದಲ್ಲಿ ಬೀದಿನಾಯಿ ದಾಳಿಗೆ ಮತ್ತೊಂದು ಬಲಿ :`ರೇಬೀಸ್’ ನಿಂದ 4 ವರ್ಷದ ಬಾಲಕಿ ಸಾವು.!

19/08/2025 11:02 AM1 Min Read
Recent News

ಇತಿಹಾಸ ಸೃಷ್ಟಿಸಿದ ಪ್ರಗ್ನಾನಂದ: ಗುಕೇಶ್‌ರನ್ನು ಮಣಿಸಿ ವಿಶ್ವ ಚೆಸ್‌ನಲ್ಲಿ 3ನೇ ಸ್ಥಾನಕ್ಕೆ ಜಿಗಿತ

19/08/2025 11:55 AM

ರಾಜ್ಯದ ಸರ್ಕಾರಿ ಕಾಲೇಜುಗಳ `ಸಹಾಯಕ ಪ್ರಾಧ್ಯಾಪಕರಿಗೆ’ ಗುಡ್ ನ್ಯೂಸ್ : `UGC ವೇತಣಿ ಶ್ರೇಣಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

19/08/2025 11:54 AM

BREAKING : ಸೌಜನ್ಯ ಕೇಸ್‌ ಹೋರಾಟಗಾರ `ಮಹೇಶ ಶೆಟ್ಟಿ ತಿಮರೋಡಿ’ ವಿರುದ್ಧ `FIR’ ದಾಖಲು.!

19/08/2025 11:40 AM

ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ : ಎರಡು ವಾಹನಗಳಿಗೆ SUV ಡಿಕ್ಕಿ : ಐವರು ಸಾವು | Accident

19/08/2025 11:34 AM
State News
KARNATAKA

ರಾಜ್ಯದ ಸರ್ಕಾರಿ ಕಾಲೇಜುಗಳ `ಸಹಾಯಕ ಪ್ರಾಧ್ಯಾಪಕರಿಗೆ’ ಗುಡ್ ನ್ಯೂಸ್ : `UGC ವೇತಣಿ ಶ್ರೇಣಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

By kannadanewsnow5719/08/2025 11:54 AM KARNATAKA 4 Mins Read

ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ಸಿ.ಎ.ಎಸ್ ಯೋಜನೆ ಅಡಿಯಲ್ಲಿ 2018ರ ಯುಜಿಸಿ…

BREAKING : ಸೌಜನ್ಯ ಕೇಸ್‌ ಹೋರಾಟಗಾರ `ಮಹೇಶ ಶೆಟ್ಟಿ ತಿಮರೋಡಿ’ ವಿರುದ್ಧ `FIR’ ದಾಖಲು.!

19/08/2025 11:40 AM

BREAKING : ವಿಧಾನಸಭೆಯಲ್ಲಿ 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಮಂಡನೆ

19/08/2025 11:31 AM

SHOCKING : ರಾಜ್ಯದಲ್ಲಿ ಬೀದಿನಾಯಿ ದಾಳಿಗೆ ಮತ್ತೊಂದು ಬಲಿ :`ರೇಬೀಸ್’ ನಿಂದ 4 ವರ್ಷದ ಬಾಲಕಿ ಸಾವು.!

19/08/2025 11:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.