Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ : ಯಾರು ಯಾರಿಗೆ `ರಕ್ತದಾನ’ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

17/03/2026 8:44 AM

ALERT : ಅತಿಯಾದ `ಸೋಶಿಯಲ್ ಮೀಡಿಯಾ’ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಆತಂಕ ಮತ್ತು ಕೋಪ !

17/03/2026 8:38 AM

BREAKING:ಪಹಲ್ಗಾಮ್‌ನಲ್ಲಿ ಭೀಕರ ಅಗ್ನಿ ಅವಘಡ: ಧಗಧಗನೆ ಹೊತ್ತಿ ಉರಿದ ಮೂರು ಹೋಟೆಲ್‌ಗಳು; ರಕ್ಷಣಾ ಕಾರ್ಯಾಚರಣೆ ಚುರುಕು

17/03/2026 8:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೃದಯಾಘಾತ ಪತ್ತೆ ಹಚ್ಚಲು ಮಹತ್ವದ ಕ್ರಮ : ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ `ಟೆಲಿ ಇಸಿಜಿ’ ವ್ಯವಸ್ಥೆ
KARNATAKA

ಹೃದಯಾಘಾತ ಪತ್ತೆ ಹಚ್ಚಲು ಮಹತ್ವದ ಕ್ರಮ : ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ `ಟೆಲಿ ಇಸಿಜಿ’ ವ್ಯವಸ್ಥೆ

By kannadanewsnow5719/08/2025 7:47 AM

ಬೆಂಗಳೂರು: ಹಠಾತ್ ಹೃದಯಾಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಟೆಲಿ ಇಸಿಜಿ ವ್ಯವಸ್ಥೆ ಕಲ್ಪಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪರಿಷತ್ ಸದಸ್ಯ ಧನಂಜಯ್ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಟೆಲಿ ಇಸಿಜಿ ವ್ಯವಸ್ಥೆಯಿಂದಾಗಿ ಜನರಿಗೆ ಸ್ಥಳೀಯ ಮಟ್ಟದಲ್ಲಿ ತಪಾಸಣೆಗೆ ಅನುಕೂಲವಾಗಲಿದೆ ಎಂದರು.

ಟೆಲಿ ಇ.ಸಿ.ಜಿ ಮೂಲಕ ತಜ್ಞವೈದ್ಯರಿಂದ ಅಗತ್ಯ ಮಾರ್ಗದರ್ಶನ ದೊರೆಯಲಿದೆ. ಹಠಾತ್ ಹೃದಯಘಾತಗಳನ್ನ ಪ್ರಿವೆಂಟ್ ಮಾಡಲು ಅವಕಾಶವಿದ್ದು,  ಆರಂಭದಲ್ಲೇ ಪತ್ತೆ ಹಚ್ಚುವತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಟೆಲಿ ಇಸಿಜಿ ಸಹಕಾರಿಯಾಗಲಿದೆ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ರಾಜ್ಯದ 86 ಸರ್ಕಾರಿ ಆಸ್ಪತ್ರೆಗಳಲ್ಲಿ ಹಠಾತ್ ಹೃದಯಾಘಾತಗಳನ್ನು ತಡೆಯಲು ಹಬ್ ಮತ್ರು ಸ್ಪೋಕ್ ಮಾದರಿಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಹೃದಯ ಜ್ಯೋತಿ ಯೋಜನೆ ಇಂದು ಸಾವಿರಾರು ಜನರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹೃದಯಜ್ಯೋತಿ ಯೋಜನೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ತಿಳಿಸಿದರು.

ಹಠಾತ್ ಹೃದಯಾಘಾತಗಳನ್ನು ತಡೆಯಲು ಸಹಕಾರಿಯಾಗಿರುವ ಟೆನೆಕ್ಟೆಪ್ಲೇಸ್ ಚುಚ್ಚುಮದ್ದು ಎಲ್ಲ ಆಸ್ಪತ್ರೆಗಳಲ್ಲಿ ಒದಗಿಸುವಂತೆ ಸದನದಲ್ಲಿ ಪರಿಷತ್ ಸದಸ್ಯ ಧನಂಜಯ್ ಸರ್ಜಿ ಮನವಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಡಿ 25 ಸಾವಿರ ಬೆಲೆ ಬಾಳುವ ಟೆನೆಕ್ಟೆಪ್ಲೇಸ್ ಚುಚ್ವುಮದ್ದನ್ನು ಉಚಿತವಾಗಿ ನೀಡಲಾಗುತ್ತಿದೆ. ಹೃದಯ ಜ್ಯೋತಿ ಯೋಜನೆ ಎಲ್ಲ ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ವಿಸ್ತರಣೆಯಾಗುವುದರಿಂದ, ಯೋಜನೆಯಡಿ ಟೆನೆಕ್ಟೆಪ್ಲೇಸ್ ಚುಚ್ಚುಮದ್ದು ಕೂಡ ಉಚಿತವಾಗಿ ದೊರೆಯಲಿದೆ ಎಂದು ಉತ್ತರಿಸಿದರು.

ಮಂಗಳೂರು ವೆನ್ ಲಾಕ್ ಆಸ್ಪತ್ರೆ, ಬೆಂಗಳೂರಿನ ಸಿ.ವಿ ರಾಮನ್ ನಗರ ಆಸ್ಪತ್ರೆ ಹಾಗೂ ಹೊಸಪೇಟೆ ಆಸ್ಪತ್ರೆಗಳಲ್ಲಿ ಹೃದಯ ರಕ್ತನಾಳಗಳ ಸಂಬಂಧಿತ ಚಿಕಿತ್ಸೆ ನೀಡುವ ಕ್ಯಾತ್ ಲ್ಯಾಬ್ ಗಳನನ್ನ ತೆರೆಯಲಾಗುವುದು. ಹೃದಯಘಾತಗಳನ್ನ ಪ್ರಿವೆಂಟ್ ಮಾಡಲು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಗೃಹ ಆರೋಗ್ಯ ಯೋಜನೆಯಡಿ 30 ವರ್ಷ ಮೇಲ್ಪಟ್ಟವರನ್ನು ರಕ್ತದೊತ್ತಡ ಹಾಗೂ ಡಯಾಬಿಟಿಸ್ ತಪಾಸಣೆ ನಡೆಸಿ ಉಚಿತವಾಗಿ ಔಷಧಿಗಳನ್ನು ನೀಡುವ ಯೋಜನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ.‌ ಹೃದಯಘಾತ, ಸ್ಟ್ರೋಕ್, ಕಿಡ್ನಿ ವೈಫಲ್ಯದಂತಹ ಕಾಯಿಲೆಗಳಿಗೆ ಮೂಲ ಕಾರಣ ರಕ್ತದೊತ್ತಡ ಹಾಗೂ ಡಯಾಬಿಟಿಸ್. ಇದಕ್ಕೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಒದಗಿಸಿದಾಗ ಹೃದಯಾಘಾತದಂತಹ ಅಪಾಯಗಳಿಂದ  ಜೀವಗಳನ್ನ ಪಾರುಮಾಡಬಹುದು. ಈ ನಿಟ್ಟಿನಲ್ಲಿ ರಕ್ತದೊತ್ತಡ, ಡಯಾಬಿಟಿಸ್ ಜೊತೆಗೆ 14 ಕಾಯಿಲೆಗಳ ತಪಾಸಣೆಯನ್ನು ಗೃಹ ಆರೋಗ್ಯ ಯೋಜನೆಯಡಿ ತೆಗೆದುಕೊಳ್ಳಲಾಗಿದ್ದು, ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

 

Important step to detect heart attacks: 'Tele ECG' system in all primary health centers in the state
Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ಗಮನಿಸಿ : ಯಾರು ಯಾರಿಗೆ `ರಕ್ತದಾನ’ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

17/03/2026 8:44 AM1 Min Read

ALERT : ಅತಿಯಾದ `ಸೋಶಿಯಲ್ ಮೀಡಿಯಾ’ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಆತಂಕ ಮತ್ತು ಕೋಪ !

17/03/2026 8:38 AM1 Min Read

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

17/03/2026 8:23 AM2 Mins Read
Recent News

ಸಾರ್ವಜನಿಕರೇ ಗಮನಿಸಿ : ಯಾರು ಯಾರಿಗೆ `ರಕ್ತದಾನ’ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

17/03/2026 8:44 AM

ALERT : ಅತಿಯಾದ `ಸೋಶಿಯಲ್ ಮೀಡಿಯಾ’ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಆತಂಕ ಮತ್ತು ಕೋಪ !

17/03/2026 8:38 AM

BREAKING:ಪಹಲ್ಗಾಮ್‌ನಲ್ಲಿ ಭೀಕರ ಅಗ್ನಿ ಅವಘಡ: ಧಗಧಗನೆ ಹೊತ್ತಿ ಉರಿದ ಮೂರು ಹೋಟೆಲ್‌ಗಳು; ರಕ್ಷಣಾ ಕಾರ್ಯಾಚರಣೆ ಚುರುಕು

17/03/2026 8:26 AM

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

17/03/2026 8:23 AM
State News
KARNATAKA

ಸಾರ್ವಜನಿಕರೇ ಗಮನಿಸಿ : ಯಾರು ಯಾರಿಗೆ `ರಕ್ತದಾನ’ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5717/03/2026 8:44 AM KARNATAKA 1 Min Read

ಬೆಂಗಳೂರು: “ರಕ್ತದಾನ ಮಹಾದಾನ”. ಒಬ್ಬರ ಜೀವ ಉಳಿಸಲು ರಕ್ತದಾನಕ್ಕಿಂತ ಮಿಗಿಲಾದ ಸೇವೆ ಮತ್ತೊಂದಿಲ್ಲ. ಆದರೆ, ರಕ್ತದಾನ ಮಾಡುವಾಗ ಅಥವಾ ರಕ್ತವನ್ನು…

ALERT : ಅತಿಯಾದ `ಸೋಶಿಯಲ್ ಮೀಡಿಯಾ’ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಆತಂಕ ಮತ್ತು ಕೋಪ !

17/03/2026 8:38 AM

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

17/03/2026 8:23 AM

ಯುಗಾದಿ, ರಂಜಾನ್ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : ನಾಳೆಯಿಂದ 2000 ಹೆಚ್ಚುವರಿ `KSRTC’ ಬಸ್ ಗಳ ವ್ಯವಸ್ಥೆ !

17/03/2026 8:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.