ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶ ಸಂಬಂಧ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವವರಿಗೆ ಛಾಯ್ಸ್ ದಾಖಲಿಸಲು ಮತ್ತು ಶುಲ್ಕ ಪಾವತಿಸಲು ಆ.19ರಂದು ಮಧ್ಯಾಹ್ನ 3ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.
ಶುಲ್ಕ ಪಾವತಿ ನಂತರ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಮಂಗಳವಾರ ಸಂಜೆ 5.30ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದುವರೆಗೂ ಯಾವುದೇ ಛಾಯ್ಸ್ ಆಯ್ಕೆ ಮಾಡದವರು ಹಾಗೂ ಶುಲ್ಕ ಪಾವತಿಸದಿರುವವರಿಗೆ ನೀಡಿರುವ ಕೊನೆ ಅವಕಾಶವಾಗಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಈ ಅವಕಾಶದ ನಂತರವೂ ಯಾವುದೇ ಛಾಯ್ಸ್ ಆಯ್ಕೆ ಮಾಡದ ಹಾಗೂ ಶುಲ್ಕ ಪಾವತಿ ಮಾಡದಿರುವವರ ಸೀಟುಗಳನ್ನು ರದ್ದುಪಡಿಸಿ, ಆ ಸೀಟುಗಳನ್ನು 2ನೇ ಸುತ್ತಿನ ಸೀಟು ಮ್ಯಾಟ್ರಿಕ್ಸ್ ಗೆ ಸೇರಿಸಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
‘MLC ದಿನೇಶ್ ಗೂಳಿಗೌಡ’ಗೆ ‘ರಾಜ್ಯ ಸಚಿವರ ಸ್ಥಾನಮಾನ’ ನೀಡಿ ಸರ್ಕಾರ ಆದೇಶ
ಜೈಲಿನಲ್ಲಿ ನಟ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ಹಣ್ಣು ನೀಡಿ ಕುಶಲೋಪರಿ ವಿಚಾರಣೆ