ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿರುವಂತ ನಟ ದರ್ಶನ್ ಅವರನ್ನು, ಪತ್ನಿ ವಿಜಯಲಕ್ಷ್ಮೀ ಭೇಟಿಯಾದರು. ಅವರ ಕುಶಲೋಪರಿ ವಿಚಾರಿಸಿದಂತ ಅವರು ಹಣ್ಣು ನೀಡಿ, ಜೈಲಿನಿಂದ ವಾಪಾಸ್ ಆದರು.
ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿಯಾದರು. ಸಾಮಾನ್ಯ ಎಂಟ್ರಿ ಹಿನ್ನಲೆಯಲ್ಲಿ ಅರ್ಧ ತಾಸು ಮಾತ್ರವೇ ಜೈಲು ಅಧಿಕಾರಿಗಳು ನಟ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮಿಗೆ ಅವಕಾಶ ಮಾಡಿಕೊಟ್ಟರು.
ನಟ ದರ್ಶನ್ ಕುಶಲೋಪರಿ ವಿಚಾರಿಸಿದಂತ ಪತ್ನಿ ವಿಜಯಲಕ್ಷ್ಮಿ ಬಳಿಯಲ್ಲಿ ಮಗನ ಬಗ್ಗೆ ನಟ ದರ್ಶನ್ ವಿಚಾರಿಸಿದರು ಎನ್ನಲಾಗಿದೆ. ಆ ಬಳಿಕ ಅರ್ಧ ಗಂಟೆಯ ಸಮಯ ಮುಗಿದ ಕಾರಣ ಅಲ್ಲಿಂದ ವಾಪಾಸ್ ಆದರು ಎಂಬುದಾಗಿ ತಿಳಿದು ಬಂದಿದೆ.
ಶಿವಮೊಗ್ಗ: ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆಗೆ ಬಿವೈ ವಿಜಯೇಂದ್ರ ಆಗ್ರಹ