ನವದೆಹಲಿ: ಬಾಲಿವುಡ್ ಖ್ಯಾತ ಗಾಯಕ ಮಕ್ಸೂದ್ ಆಲಿ @ ಲಕ್ಕಿ ಆಲಿಗೆ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಬಂಧನದ ವಾರಂಟ್ ಜಾರಿಗೊಳಿಸಲಾಗಿದೆ.
2014ರಲ್ಲಿ ಸೈಯದ್ ರಿಜ್ವಾನ್ ಅವರಿಂದ ಗಾಯಕ ಲಕ್ಕಿ ಆಲಿ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿತ್ತು. ಜಮೀನು ಮಾರುವುದಾಗಿ ಹಣ ಪಡೆದು ಹಿಂದಿರುಗಿಸದ ಆರೋಪ ಅವರ ಮೇಲಿತ್ತು.
27 ಲಕ್ಷ ರೂಪಾಯಿಯನ್ನು ಗಾಯಕ ಲಕ್ಕಿ ಆಲಿ ಹಿಂದಿರುಗಿಸಿರಲಿಲ್ಲ. ಈ ಪ್ರಕರಣದಲ್ಲಿ ಸಿವಿಲ್ ದಾವೆ ರಾಜಿ ಮಾಡಿಕೊಂಡು ಲಕ್ಕಿ ಆಲಿ ಚೆಕ್ ನೀಡಿದ್ದರು. 2002ರ ವ್ಯವಹಾರ ಸಂಬಂಧ 2013ರಲ್ಲಿ ಚೆಕ್ ನೀಡಿದ್ದರು. ಆದರೇ 92 ಲಕ್ಷದ ಚೆಕ್ ಬೌನ್ಸ್ ಆಗಿತ್ತು. ಹೀಗಾಗಿ ಲಕ್ಕಿ ಆಲಿ ವಿರುದ್ಧ ಖಾಸಗಿ ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ 92.10 ಲಕ್ಷ ರೂಪಾಯಿ ದಂಡವನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ವಿಧಿಸಿತ್ತು. ದಂಡವನ್ನು ಪಾವತಿಸಿದೇ ಇದ್ದರೇ 6 ತಿಂಗಳ ಸೆರೆವಾಸ ಅನುಭವಿಸುವಂತೆ ಆದೇಶದಲ್ಲಿ ತಿಳಿಸಲಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಆದೇಶ ರದ್ದುಪಡಿಸಲು ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ಲಕ್ಕಿ ಆಲಿ ವಿರುದ್ಧ 6 ತಿಂಗಳು ಸೆರೆವಾಸದ ವಾರಂಟ್ ಜಾರಿಯಾಗಿದೆ.
ಧರ್ಮಸ್ಥಳ ಕೇಸ್; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸಿಎಂ ಸೂಚನೆ- ಡಿಸಿಎಂ ಡಿಕೆಶಿ
ಭೂ ಕುಸಿತ ಶಾಶ್ವತ ತಡೆಗೆ 500 ಕೋಟಿ ಖರ್ಚಿನಲ್ಲಿ ಕಾಮಗಾರಿ: ಸಚಿವ ಕೃಷ್ಣ ಬೈರೇಗೌಡ