ಬೆಂಗಳೂರು : ಅಶ್ಲೀಲ ಕಮೆಂಟ್ ಮಾಡಿದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ, ಇನ್ನೂ ಬಹಳಷ್ಟು ಜನ ಅರೆಸ್ಟ್ ಆಗೋದು ಬಾಕಿಯಿದೆ
ಎಂದು ನಟಿ ರಮ್ಯಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿದ 7 ಜನರು ಅರೆಸ್ಟ್ ಆಗಿದ್ದಾರೆ. ಇನ್ನೂ ಬಹಳಷ್ಟು ಜನರು ಅರೆಸ್ಟ್ ಆಗೋದು ಬಾಕಿ ಇದೆ. ಈ ಅಶ್ಲೀಲ ಕಮೆಂಟ್ ಬರೋದು ಕಡಿಮೆಯಾಗಿದೆ. ಕೆಟ್ಟದಾಗಿರೋ ಮೆಸೇಜ್ ಗಳು ನನಗೆ ಬರುತ್ತಿಲ್ಲ ಎಂದು ಹೇಳಿದ್ದಾರೆ.
ಯಾವ ಮಹಿಳೆಗೂ ಈ ರೀತಿ ಆಗಬಾರದು, ಸದ್ಯ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹಲವರು ಅರೆಸ್ಟ್ ಆಗುವುದು ಬಾಕಿ ಇದೆ ಎಂದು ತಿಳಿಸಿದ್ದಾರೆ.