ಬೆಂಗಳೂರು : ಧರ್ಮಸ್ಥಳದಲ್ಲಿರುವ ಶ್ರೀಮಂಜುನಾಥನ ರಕ್ಷಿಸಿ ಎಂದು ಧರ್ಮಸ್ಥಳದ ಪೋಸ್ಟರ್ ಹಿಡಿದು ಜೆಡಿಎಸ್ ಶಾಸಕ ಕಂದಕೂರ್ ಅವರು ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ವಿಧಾನಸೌಧಕ್ಕೆ ಇಂದು ಜೆಡಿಎಸ್ ಶಾಸಕ ಕಂದಕೂರ್ ಸ್ವಾಮಿ ಮಂಜುನಾಥನನ್ನು ರಕ್ಷಿಸಿ, ಅಪಪ್ರಚಾರಿಗಳನ್ನು ಶಿಕ್ಷಿಸಿ, ಸತ್ಯ ಮೇವ ಜಯತೆ ಎಂಬ ಪೋಸ್ಟರ್ ಹಿಡಿದು ಆಗಮಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಇಂದು ಧರ್ಮಸ್ಥಳ ಪ್ರಕರಣದ ಬಗ್ಗೆ ಗೃಹ ಸಚಿವರು ಉತ್ತರ ಕೊಡಲಿದ್ದಾರೆ. ಧರ್ಮಸ್ಥಳವನ್ನು ರಕ್ಷಿಸುವ ಕೆಲಸ ಸರ್ಕಾರ ಮಾಡದೇ ಇದ್ದರೆ, ಯಾರು ಪಿತೂರಿ ಮಾಡುತ್ತಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಇಲ್ಲದಿದ್ದರೆ ಮಂಜುನಾಥನೇ ಸರ್ಕಾರಕ್ಕೆ ಶಿಕ್ಷೆ ಕೊಡುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ.