ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ಹಚ್ಚುವ ಕಾರ್ಯವನ್ನು ಎಡಪಂಥೀಯರು ಮಾಡುತ್ತಿದ್ದು, ಅವರ ಜೊತೆ ಕಾಂಗ್ರೆಸ್ ಸರ್ಕಾರವು ಸೇರಿದೆ ಎಂಬುದು ಭಕ್ತರ ಅನಿಸಿಕೆ. ಇದನ್ನು ಸರ್ಕಾರ ತಿಳಿಗೊಳಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಏನೂ ಸಿಕ್ಕಿಲ್ಲ ಆಪಾದನೆ ಎಲ್ಲ ಸುಳ್ಳು. ಇದು ಒಂದು ಷಡ್ಯಂತ್ರ ಎಂದು ಟೀಕಿಸಿದರು. ಗೌರವಾನ್ವಿತ ಡಾ. ವೀರೇಂದ್ರ ಹೆಗ್ಗಡೆ ಜೀ ಅವರನ್ನು ನಾವು ಇಂದು ಭೇಟಿ ಮಾಡಿದ್ದೇವೆ. ಅವರು ಬಹಳ ನೊಂದಿದ್ದಾರೆ ಎಂಬುದು ನಮಗೆ ಮನವರಿಕೆಯಾಗಿದೆ. ಶ್ರೀ ಕ್ಷೇತ್ರದ ಭಕ್ತರಲ್ಲೂ ಇದೇ ರೀತಿಯ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರಲ್ಲಿ ಆಘಾತವಿದ್ದು, ಅದನ್ನು ಹೋಗಲಾಡಿಸಬೇಕು; ಅವರಿಗೆ ಧೈರ್ಯವನ್ನು ತುಂಬಬೇಕು ಮತ್ತು ಈ ಕ್ಷೇತ್ರಕ್ಕೆ ಯಾವುದೇ ರೀತಿಯ ಕಳಂಕ ಹಚ್ಚುವವರನ್ನು ನಾವು ಸಹಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಆ.18ರಂದು ಹಳದಿ ಮಾರ್ಗದಲ್ಲಿ ‘ನಮ್ಮ ಮೆಟ್ರೋ ಸಂಚಾರ’ ಮುಂಜಾನೆ 5ರಿಂದಲೇ ಪ್ರಾರಂಭ | Namma Metro
ಪರಿಷ್ಕೃತ ಜಿಎಸ್‌ಟಿ ದರಗಳಿಂದ ಯಾವ ವಸ್ತುಗಳು ಅಗ್ಗವಾಗಬಹುದು? ಇಲ್ಲಿದೆ ಡೀಟೆಲ್ಸ್ | GST bonanza