ಚಾಮರಾಜನಗರ : ಚಾಮರಾಜನಗರದ ಬಸ್ ನಿಲ್ದಾಣದಲ್ಲಿ ಎದೆಗೆ ಚಾಕುವಿನಿಂದ ಇರಿದುಕೊಂಡು ಪಾಗಲ್ ಪ್ರೇಮಿ ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ.
ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಪ್ರದೀಪ್ ಎಂಬ ಯುವಕ ಪ್ರೀತಿಸುವಂತೆ ಪದವಿ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದು, ಎದೆಗೆ ಚಾಕುವಿನಿಂದ ಇರಿದುಕೊಂಡು ಹುಚ್ಚಾಟ ಮೆರೆದಿದ್ದಾನೆ.
ಯುವತಿ ಎದುರೇ ಪ್ರೀತಿಸುವಂತೆ ಎದೆಗೆ ಚಾಕುವಿನಿಂದು ಇರಿದುಕೊಂಡು ಯುವಕ ಪ್ರದೀಪ್ ಹುಚ್ಚಾಟ ನಡೆಸಿದ್ದಾನೆ. ಪ್ರದೀಪ್ ಚಾಮರಾಜನಗರ ತಾಲೂಕಿನ ಸಾಣೇಗಾಲ ಗ್ರಾಮದ ನಿವಾಸಿಯಾಗಿದ್ದು, ಗಾಯಾಳು ಪ್ರದೀಪ್ ನನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚಾಮರಾಜನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರ ದೂರಿನನ್ವಯ ಯುವಕನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.