ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಪಾಲಾಗಿದ್ದು, ಇದೀಗ ದರ್ಶನ್ ಅಭಿಮಾನಿಗಳಿಗೆ ಪತ್ನಿ ವಿಜಯಲಕ್ಷ್ಮೀ ಮತ್ತೊಂದು ಸಂದೇಶ ಕೊಟ್ಟಿದ್ದಾರೆ.
ಈ ಕುರಿತು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯಲಕ್ಷ್ಮೀ ಅವರು, ದರ್ಶನ್ ನಿಮ್ಮೆಲ್ಲರನ್ನೂ ತನ್ನ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ದರ್ಶನ್ ನಿಮ್ಮೊಂದಿಗೆ ನೇರವಾಗಿ ಕನೆಕ್ಟ್ ಆಗುವವರೆಗೂ ನಾನು ಅವರ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತೇನೆ, ದರ್ಶನ್ ಸಿನಿಮಾ ಅಪ್ಡೆ ಮತ್ತು ಪ್ರಚಾರಗಳನ್ನು ಹಂಚಿಕೊಳ್ಳುತ್ತೇನೆ.
ನಿಮ್ಮ ಪ್ರೀತಿ, ಪ್ರಾರ್ಥನೆ, ತಾಳ್ಮೆ ದರ್ಶನ್ ಅವರಿಗೆ ಅಪಾರ ಶಕ್ತಿ ಕೊಡುತ್ತದೆ. ಆ ಏಕತೆ ಮತ್ತು ಸಕಾರಾತ್ಮಕತೆಯಲ್ಲೂ ಉಳಿಸಿಕೊಳ್ಳಲು ಅವರು ಶೀಘ್ರವೇ ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ ಹೊರ ಬರುತ್ತಾರೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.