ಚಿತ್ರದುರ್ಗ : ಧರ್ಮಸ್ಥಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಿಂದೆ ಟಿಪ್ಪು ಗ್ಯಾಂಗ್ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಿಂದೆ ಟಿಪ್ಪು ಗ್ಯಾಂಗ್ ಇದೆ, ಟಿಪ್ಪು ಜಯಂತಿ ಆಚರಿಸದರಲ್ಲ, ಅದೇ ರೀತಿ ಗ್ಯಾಂಗ್ ವೊಂದರಿಂದ ಒತ್ತಡ ಬಂದಿದೆ. ಯಾವನೋ ಅನಾಮಿಕ ಕೊಟ್ಟ ದೂರಿನಿಂದ ದೊಡ್ಡದು ಮಾಡಿದ್ದಾರೆ, ನೂರಾರು ಕೊಲೆಗಳು, ಅತ್ಯಾಚಾರಗಳು ಆಗಿವೆ ಎಂಬಂತೆ ಬಿಂಬಿಸಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮಾಡಿದ್ದಾರೆ ಎಂಬಂತೆ ಬಿಂಬಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ ಪಿ, ಡಿಸಿಗೆ ಸಾವಿರ ದೂರುಗಳು ಬರುತ್ತವೆ. ಆ ಎಲ್ಲಾ ದೂರುಗಳಿಗೂ ಎಸ್ ಐಟಿ ರಚಿಸುತ್ತಾರಾ? ಮುಸುಕುದಾರಿಗೆ ಹಣ ಕೊಟ್ಟು ಕರೆದುಕೊಂಡು ಬಂದಿರುವ ಹಾಗಿದೆ. ಧರ್ಮಸ್ಥಳದ ಮಂಜುನಾಥ ದೇವರಿಗೆ ಅವಹೇಳನ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ್ದಾರೆ.