ಯೂಟ್ಯೂಬರ್ ಮತ್ತು ಮಾಜಿ ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ಅವರ ಗುರುಗ್ರಾಮ್ ಮನೆಗೆ ಅಪರಿಚಿತ ಬಂದೂಕುಧಾರಿಗಳು ಭಾನುವಾರ ಮುಂಜಾನೆ ಅನೇಕ ಸುತ್ತು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 5:30 ರಿಂದ 6 ರ ನಡುವೆ ಈ ಘಟನೆ ನಡೆದಿದ್ದು, ಮೋಟರ್ ಸೈಕಲ್ ಗಳಲ್ಲಿ ಬಂದ ಮೂವರು ಗುಂಡು ಹಾರಿಸಿ ನಂತರ ಪ್ರದೇಶದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಡಜನ್ ಗೂ ಹೆಚ್ಚು ಗುಂಡುಗಳನ್ನು ಹಾರಿಸಲಾಯಿತು, ಆದರೆ ಯಾರೂ ಗಾಯಗೊಂಡಿಲ್ಲ.