ಬೆಂಗಳೂರು : ಬೆಂಗಳೂರಿನಲ್ಲಿ ಫ್ಲೈಓವರ್ ನಲ್ಲಿ ಕಾಂಕ್ರೀಟ್ ಬಿದ್ದು ಆಟೋ ಜಖಂಗೊಂಡಿದ್ದು, ಆಟೋ ಚಾಲಕ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಈಜೀಪುರ ಫ್ಲೈಓವರ್ ನಲ್ಲಿ ಮಧ್ಯರಾತ್ರಿ ಅವಘಡ ಸಂಭವಿಸಿದೆ. ಫ್ಲೈಓವರ್ ಕಾಂಕ್ರೀಟ್ ಬಿದ್ದು ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಳೆದ 10 ವರ್ಷಗಳಿಮದ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಫ್ಲೈಓವರ್ ಕಾಂಕ್ರೀಟ್ ಬೃಹತ್ ಪೀಸುಗಳು ಬೀಳುವ ಹಂತದಲ್ಲಿವೆ. ಜನರ ಸಂಚಾರಕ್ಕೆ ಮೊದಲೇ ಕಾಂಕ್ರೀಟ್ ಉದುರಿ ಬೀಳುತ್ತಿವೆ.
ಆಡೋಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.