ಬೆಂಗಳೂರು : 2024-25ನೇ ಸಾಲಿನ ಗ್ರೂಪ್ ಎ, ಬಿ ಮತ್ತು ಸಿ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣೆ ವರದಿಗಳನ್ನು E-PAR ನಲ್ಲಿ ನಿರ್ವಹಿಸುವ ಮತ್ತು ಡಿ ವರ್ಗ ಸೇರಿದಂತೆ ಆಸ್ತಿ ಋಣಭಾರ ಪಟ್ಟಿಯನ್ನು ಸಲ್ಲಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2024-25ನೇ ಸಾಲಿನ ವಾರ್ಷಿಕ ಅವಧಿಯು ಮುಕ್ತಾಯವಾಗಿರುವುದರಿಂದ, ನಿರ್ದೇಶನಾಲಯದ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಎ, ಬಿ ಮತ್ತು ಸಿ ಅಧಿಕಾರಿಗಳು/ನೌಕರರುಗಳ 2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣೆ ವರದಿಗಳನ್ನು E-PAR ನಲ್ಲಿ ಸಲ್ಲಿಸಬೇಕಾಗಿರುತ್ತದೆ. ಆದ್ದರಿಂದ, ಸಂಬಂಧಪಟ್ಟ ನಿರ್ದೇಶನಾಲಯದ ಎಲ್ಲಾ ಅಧಿಕಾರಿ/ನೌಕರರುಗಳು ಈ ಸುತ್ತೋಲೆಯಲ್ಲಿ ಲಗತ್ತಿಸಿರುವ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ದಿನಾಂಕ: 30/08/2015 ಅಂತ್ಯದೊಳಗೆ ಸಿಆರ್‌ಜಿ/E-PAR ವಿಭಾಗಕ್ಕೆ ಸಲ್ಲಿಸಲು ಹಾಗೂ ಇಲಾಖೆಯ ಅಧೀನ ಸಂಸ್ಥೆ/ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಗ್ರೂಪ್ ಎ,ಬಿ ಮತ್ತು ಸಿ ಅಧಿಕಾರಿಗಳು/ನೌಕರರುಗಳ 2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣೆ ವರದಿಗಳನ್ನು ವಿಭಾಗೀಯ ಜಂಟಿ ನಿರ್ದೇಶಕರು (ಇ-ಫಾರ್ ಮ್ಯಾನೇಜರ್) ರವರ ಹಂತದಲ್ಲಿ (Workflow Creation and PAR Generation) ಸೂಕ್ತ ಕ್ರಮವಹಿಸಲು ಸೂಚಿಸಿದೆ.
ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮಗಳು, 2021 ರಲ್ಲಿನ ನಿಯಮ 24 ರಲ್ಲಿನ ಉಪಬಂಧಗಳಂತೆ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನು ಕರ್ತವ್ಯವಾಗಿದ್ದು, ನಿಯಮಗಳಲ್ಲಿ ನಿಗದಿಪಡಿಸಿರುವ ಸಮಯದಲ್ಲಿ ಸಲ್ಲಿಸುವುದು ಅಗತ್ಯವಾಗಿರುತ್ತದೆ. ಇಲ್ಲವಾದಲ್ಲಿ ನಡತೆ ನಿಯಮಗಳಿಗೆ ವ್ಯತಿರಿಕ್ತ ನಡವಳಿಕೆ ಪ್ರದರ್ಶಿಸಿದ ಕಾರಣ ಅಂತಹ ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಿಯಮಗಳಲ್ಲಿ ಅವಕಾಶವಿರುತ್ತದೆ.
E-PAR ನಲ್ಲಿ ಆಸ್ತಿ ಋಣಭಾರ ಪಟ್ಟಿಯನ್ನು ಸಲ್ಲಿಸುವ ವ್ಯವಸ್ಥೆ ಇರುವುದಿಲ್ಲ. 2024-25ನೇ ಸಾಲಿನ ವಾರ್ಷಿಕ ಅವಧಿಯು ಮುಕ್ತಾಯವಾಗಿರುವುದರಿಂದ ಎಲ್ಲಾ ವರ್ಗದ ಎ, ಬಿ, ಸಿ ಮತ್ತು ಡಿ ಅಧಿಕಾರಿ/ನೌಕರರು 2024-25ನೇ ಸಾಲಿನ ಆಸ್ತಿ ಋಣಭಾರ ಪಟ್ಟಿಯನ್ನು ಭೌತಿಕವಾಗಿ ಸಲ್ಲಿಸುವಂತೆ ಹಾಗೂ ಹಿಂದಿನ ವರ್ಷ ಸಲ್ಲಿಸಿರುವ ಆಸ್ತಿ ಹೊಣೆಗಾರಿಕೆಯಲ್ಲಿ ಹಾಗೂ ಈ ವರ್ಷದ ಆಸ್ತಿ ಹೊಣೆಗಾರಿಕೆಯಲ್ಲಿ ಬದಲಾವಣೆ ಕಂಡು ಬಂದಿದ್ದಲ್ಲಿ, ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಲು ಈ ಮೂಲಕ ಆದೇಶಿಸಲಾಗಿದೆ.
ಉಲ್ಲೇಖ (4)ರ ಸರ್ಕಾರದ ಪತ್ರದಲ್ಲಿ ಸರ್ಕಾರಿ ನೌಕರರು ತಮ್ಮ ಹೆಸರಿನಲ್ಲಿ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಪಿತ್ರಾರ್ಜಿತ ಸ್ವಾಧೀನಪಡಿಸಿಕೊಂಡಿರುವ ಅಥವಾ ಹೊಂದಿರುವ ಚರ ಮತ್ತು ಸ್ಥಿರ ಆಸ್ತಿಗಳ ಬಗ್ಗೆ ಮಾಹಿತಿಯನ್ನು ಮಾನ ಲೋಕಾಯುಕ್ತಕ್ಕೆ ಸಲ್ಲಿಸುವಂತೆ ನಿರ್ದೇಶಿಸಲಾಗಿರುತ್ತದೆ.