ಶಿವಮೊಗ್ಗ: ಜಿಲ್ಲೆಯ ಸಾಗರ ಸಮೀಪದ ಬಳೆಗಾರ್ ಬಳಿಯಲ್ಲಿ ಒಮಿನಿ ಹಾಗೂ ಪಿಕಪ್ ವಾಹನದ ನಡುವೆ ಡಿಕ್ಕಿಯಾಗಿ ಅಪಘಾತ ಉಂಟಾಗಿತ್ತು. ಅದೇ ಮಾರ್ಗದಲ್ಲಿ ಸಾಗುತ್ತಿದ್ದಂತ ಶಾಸಕ ಗೋಪಾಲಕೃಷ್ಣ ಬೇಳೂರು, ಸ್ಥಳಕ್ಕೆ ತೆರಳಿ ಗಾಯಗೊಂಡಿದ್ದವರಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆಗೆ ನೆರವಾದರು. ಕೂಡಲೇ ಸ್ಥಳದಲ್ಲಿದ್ದಂತ ಪೊಲೀಸರಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಅಪಘಾತದಲ್ಲಿ ಗಾಯಗೊಂಡಿದ್ದಂತ ಗಾಯಾಳುಗಳನ್ನು ರಾಜ್ಯದಲ್ಲೇ ಮೊದಲು ಎನ್ನುವಂತೆ ಝೀರೋ ಟ್ರಾಫಿಕ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬಲೆಗಾರ್ ಗ್ರಾಮದ ಬಳಿಯಲ್ಲಿ ಒಮಿನಿ ಮತ್ತು ಪಿಕಪ್ ವಾಹನದ ನಡುವೆ ಇಂದು ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರದ ಶೆಟ್ಟಿಹಳ್ಳಿಯ ಶೇಖರ್(45) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದರೇ ಇತರೆ ಆರು ಮಂದಿ ಗಾಯಗೊಂಡಿದ್ದರು.
ಕಾರ್ಗಲ್ ಗೆ ತೆರಳಿದ್ದಂತ ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರಕ್ಕೆ ಹಿಂದಿರುಗುತ್ತಿದ್ದಾಗ ಅಪಘಾತವಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾರು ನಿಲ್ಲಿಸಿ ಸ್ಥಳಕ್ಕೆ ತೆರಳಿದಂತ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಪೊಲೀಸರಿಗೆ ಆಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವಂತೆ ತಿಳಿಸಿದ್ದರ ಪರಿಣಾಮ, ಗಾಯಾಳುಗಳನ್ನು ಝೀರೋ ಟ್ರಾಫಿಕ್ ನಲ್ಲಿ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇಷ್ಟಕ್ಕೇ ಸುಮ್ಮನಿರದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅಪಘಾತದ ಸ್ಥಳದಿಂದ ಸಾಗರ ಉಪ ವಿಭಾಗಿಯ ಆಸ್ಪತ್ರೆಗೆ ತೆರಳಿ ಮುಂದೆ ನಿಂತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಿದ್ದರಿಂದ ಶಿವಮೊಗ್ಗಕ್ಕೆ ಕರೆದೊಯ್ಯೋದಕ್ಕೂ ನೆರವಾಗಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಕಂದಮ್ಮ ಎದುರೆ ಗೃಹಿಣಿ ನೇಣಿಗೆ ಶರಣು
ಖ್ಯಾತ ಮರಾಠಿ ಹಿರಿಯ ನಟಿ ಜ್ಯೋತಿ ಚಾಂಡೇಕರ್ ಇನ್ನಿಲ್ಲ | Jyoti Chandekar is no more