ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತನ್ನ ಕಂದಮ್ಮನ ಎದುರೇ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕಸ್ತೂರಿಯಲ್ಲಿ ಶಾಮಲ(26) ಎಂಬ ಗೃಹಿಣಿಯೇ ಆತ್ಮಹತ್ಯೆಗೆ ಶರಣಾದಂತ ಗೃಹಿಣಿಯಾಗಿದ್ದಾರೆ. ಶ್ಯಾಮಲ ಮದುವೆಯಾಗಿ ಐದು ವರ್ಷ ಆಗಿತ್ತು. ಇವರಿಗೆ ಒಂದು ಗಂಡು, ಹೆಣ್ಣು ಮಗುವಿತ್ತು. ಕೆಲಸದ ವಿಚಾರ, ಬೇರೆ ಮನೆ ಮಾಡುವ ವಿಚಾರವಾಗಿ ಅತ್ತೆ, ಮಾವ, ಗಂಡನೊಂದಿಗೆ ಪದೇ ಪದೇ ಜಗಳವಾಗುತ್ತಿತ್ತು.
ಜಗಳ ತಾರಕಕ್ಕೇರಿದಂತ ಸಂದರ್ಭದಲ್ಲಿ ಶ್ಯಾಮಲ ತನ್ನ ಎರಡನೇ ಮಗುವನ್ನು ಕರೆದುಕೊಂಡು ರೂಮಿಗೆ ತೆರಳಿ, ಬಾಗಿಲು ಹಾಕಿಕೊಂಡು ಮಗುವಿನ ಎದುರಲ್ಲೇ ರೂಮಿನಲ್ಲಿದ್ದಂತ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.
ಖ್ಯಾತ ಮರಾಠಿ ಹಿರಿಯ ನಟಿ ಜ್ಯೋತಿ ಚಾಂಡೇಕರ್ ಇನ್ನಿಲ್ಲ | Jyoti Chandekar is no more
ಸಾಗರದ ಆಲಳ್ಳಿ ಬಳಿಯಲ್ಲಿ ಅಪಘಾತ: ಮುಂದೆನಿಂತು ಚಿಕಿತ್ಸೆಗೆ ನೆರವಾದ ‘ಶಾಸಕ ಗೋಪಾಲಕೃಷ್ಣ ಬೇಳೂರು’