ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆಲಳ್ಳಿ ಬಳಿಯಲ್ಲಿ ಒಮಿನಿ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದಾರೆ. ಇದೇ ಮಾರ್ಗದಲ್ಲಿ ಸಾಗುತ್ತಿದ್ದಂತ ಶಾಸಕ ಗೋಪಾಲಕೃಷ್ಣ ಬೇಳೂರು ಘಟನಾ ಸ್ಥಳಕ್ಕೆ ತೆರಳಿ ಗಾಯಾಳುಗಳಿಗೆ ಆಂಬುಲೆನ್ಸ್ ವ್ಯವಸ್ಥೆಯನ್ನು ಖುದ್ದು ಮುಂದೆ ನಿಂತು ಮಾಡಿಸಿದ್ದಾರೆ. ಅಲ್ಲದೇ ಸಾಗರ ಉಪ ವಿಭಾಗಿಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆಯನ್ನು ಮರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ನಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಆಗಮಿಸುತ್ತಿದ್ದರು. ಇದೇ ಮಾರ್ಗದ ತಾಳಗುಪ್ಪ ಬಳಿಯ ಆಲಳ್ಳಿಯಲ್ಲಿ ಒಮಿನಿ ಹಾಗೂ ಬುಲೆರೋ ಪಿಕಪ್ ನಡುವೆ ಅಪಘಾತವಾಗಿದ್ದ ವಿಷಯ ಗಮನಕ್ಕೆ ಬಂದಿದೆ. ಕೂಡಲೇ ತಮ್ಮ ಚಾಲಕನಿಗೆ ಕಾರು ನಿಲ್ಲಿಸುವಂತೆ ತಿಳಿಸಿ, ಅಪಘಾತದ ಸ್ಥಳಕ್ಕೆ ತೆರಳಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದಂತ ಗಾಯಾಳುಗಳನ್ನು ಸಂತೈಸಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಖುದ್ದು ಮುಂದೆ ನಿಂತು ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿ, ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸುವಂತ ಕೆಲಸ ಮಾಡಿದರು.
ಇದಷ್ಟೇ ಅಲ್ಲದೇ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ತೆರಳಿದಂತ ಅವರು, ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಜೊತೆಗೆ ಸ್ಥಳದಲ್ಲಿದ್ದಂತ ವೈದ್ಯರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಖಡಕ್ ಸೂಚನೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ನೀಡಿದರು.
ಒಟ್ಟಾರೆಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದಂತ ಅಪಘತದ ಸ್ಥಳಕ್ಕೆ ತೆರಳಿ, ಗಾಯಾಳುಗಳಿಗೆ ನೆರವಾಗಿ, ಸೂಕ್ತ ವೈದ್ಯಕೀಯ ನೆರವು ಕೊಡಿಸುವ ಮೂಲಕ ಮಾನವೀಯತೆ ಮೆರೆದಿದರು. ಅವರ ಈ ಕಾರ್ಯಕ್ಕೆ ಜನತೆ ಶಾಸಕರೆಂದರೇ ಹೀಗೆ ಇರಬೇಕಪ್ಪ ಎಂಬಂತೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಮದ್ದೂರು ಬಿಎಂಐಸಿ ಯೋಜನೆ ಕುರಿತು ಸದನದಲ್ಲಿ ಚರ್ಚೆ – ಶಾಸಕ ಕೆ.ಎಂ.ಉದಯ್
BREAKING: ಸಾಗರದ ಬಲೇಗಾರು ಬಳಿ ಒಮಿನಿ-ಪಿಕಪ್ ನಡುವೆ ಭೀಕರ ಅಪಘಾತ: ಓರ್ವ ಸಾವು, ಆರು ಮಂದಿಗೆ ಗಾಯ