ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿರುವ ಬಗ್ಗೆ ದಾಖಲೆ ಸಹಿತ ಸ್ಪೋಟ ಮಾಹಿತಿ ಬಿಚ್ಚಿಟ್ಟಿದ್ದರು. ಈ ಹಿನ್ನಲೆಯಲ್ಲಿ ನಾಳೆ ಕೇಂದ್ರ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ ನಡೆಸಿ, ಈ ಆರೋಪಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಿದೆ.
ನಾಳೆ ನವದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿಯನ್ನು ನಡೆಸಲಿರುವಂತ ಸಿಇಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಗಳಿಗೆ ದಾಖಲೆ ಸಹಿತ ಸ್ಪಷ್ಟನೆಯನ್ನು ನೀಡುವ ಸಾಧ್ಯತೆ ಇದೆ.
ಬೆಂಗಳೂರಿನ ಮಹಾದೇವಪುರ ವ್ಯಾಪ್ತಿಯಲ್ಲಿ, ದೇಶದ ಇತರೆಡೆಯಲ್ಲಿ ಮತಗಳ್ಳತನ ಆಗಿರೋದಾಗಿ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಮನೆ ಸಂಖ್ಯೆ ಇಲ್ಲದೇ, ಒಬ್ಬೊಬ್ಬರ ಹೆಸರು ಎರಡು ಕಡೆಯಲ್ಲಿ ಇದ್ದ ಮಾಹಿತಿಯನ್ನು ರಾಹುಲ್ ಗಾಂಧಿ ನೀಡಿದ್ದರು. ಈ ಆರೋಪಗಳಿಗೆ ತಿರುಗೇಟನ್ನು ಚುನಾವಣಾ ಆಯೋಗ ನಾಳೆ ನೀಡಲಿದೆ.
BREAKING: ಶಿವಮೊಗ್ಗದ ಸಾಗರ ನಗರದಲ್ಲಿ ಸಿಲಿಂಡರ್ ಸ್ಪೋಟ, ಓರ್ವ ವ್ಯಕ್ತಿಗೆ ಗಂಭೀರ ಗಾಯ
ರೈತರ ಗಮನಕ್ಕೆ: ಹಸು, ಕುರಿ, ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ