ದಾವಣಗೆರೆ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸೈನಿಕರು, ಮಾಜಿ ಸೈನಿಕರುಗಳಿಂದ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಕೊಡತಿ ಗ್ರಾಮದ ಸರ್ವೆ ನಂಬರ್ 82ರಲ್ಲಿ ವಿಶೇಷ ಆಶ್ರಯ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕರ್ನಾಟಕ ಮೂಲದ ಅರ್ಹ ನಿವೇಶನ ರಹಿತ ಸೈನಿಕ, ಮಾಜಿ ಸೈನಿಕರುಗಳಿಗೆ 17 ನಿವೇಶನಗಳು ಹಂಚಿಕೆಗೆ ಲಭ್ಯವಿದ್ದು, ಆಸಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕರ್ನಾಟಕ ಮೂಲದ ಅರ್ಹ ನಿವೇಶನ ರಹಿತ ಸೈನಿಕ, ಮಾಜಿ ಸೈನಿಕರುಗಳು ಈ ನಿವೇಶನಗಳಿಗೆ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇಲ್ಲಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182220925 ಸಂಪರ್ಕಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು(ಪ್ರಭಾರ)ತಿಳಿಸಿದ್ದಾರೆ.
Good News: ‘ಕ್ಯಾನ್ಸರ್ ಕೋಶ’ಗಳನ್ನು ಸಾಮಾನ್ಯ ಸ್ಥಿತಿಗೆ ತರುವ ‘ಆಣ್ವಿಕ ಸ್ವಿಚ್’ ಕಂಡುಹಿಡಿದ ವಿಜ್ಞಾನಿಗಳು